“ವಿಶ್ವಾದ್ಯಂತ ಜಾಗ್ರತರಾಗುತ್ತಿರುವ ಹಿಂದುಗಳು”
ನಾವು ಈ ಮೇಲಿನ ತಲೆಬರಹದಲ್ಲಿ ಸಕಾರಾತ್ಮಕವಾಗಿ ಚಿಂತಿಸಿದಾಗ ನಮ್ಮ ಮುಂದೆ ಅನೇಕ ಸಕಾರಾತ್ಮಕ ಬಿಂದುಗಳು ಸುಳಿಯುತ್ತವೆ. ಭಾರತದ ಸಂಸ್ಕೃತಿಯು ವಿದೇಶೀಯರನ್ನು ಸೆಳೆಯುತ್ತಿದ್ದು ವಿಶ್ವಾದ್ಯಂತ ಇಂದು ಹಿಂದೂ ಸಂಸ್ಕೃತಿಯನ್ನು ಅನುಸರಿಸುತ್ತಿರುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದನ್ನು ನಾವು ಕಾಣಬಹುದಾಗಿದೆ. ಯುಜನತೆ ಇಂದು ಸಾಮಾಜಿಕ ಜಾಲತಾಣಗಳ ಮುಖಾಂತರ ಸತ್ಯವನ್ನು ತಿಳಿಯುತ್ತಿರುವುದನ್ನು ನೋಡುತ್ತಿದ್ದೇವೆ. ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕೃತಿಯಬಗ್ಗೆ ಪರಿಚಯಿಸಲು ಉತ್ಸಾಹ ತೋರುತ್ತಿರುವುದನ್ನು ನೋಡುತ್ತಿದ್ದೇವೆ. ಜಗತ್ತಿಗೆ ಶಾಂತಿದೂತರು ಯಾರು ಭಯೋತ್ಪಾದನೆಯ ಬೀಜಗಳು ಯಾರೆನ್ನುವ ಅರಿವು ನಿಧಾನವಾಗಿ ಆಗುತ್ತಿದೆ.
ಹಿಂದುತ್ವ ಹೇಗೆ ಬೆಳೆಯುತ್ತಿದೆ ಎನ್ನುವುದನ್ನು ನೋಡೋಣ. ಇಂದು ಇಸ್ಕಾನ್ ಸಂಸ್ಥೆಯಲ್ಲಿ ಲಕ್ಷಾಂತರ ವಿದೇಶೀಯರು ಭಾರತೀಯ ಪಾರಂಪರಿಕ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾ ತಾರೆಯರು, ಉದ್ಯಮಪತಿಗಳು ಇಂದು ಮನಶ್ಯಾಂತಿಗಾಗಿ ಹಿಂದುತ್ವದತ್ತ ಒಲವು ತೋರುತ್ತಿರುವುದನ್ನು ನಾವಿಂದು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ.
ಭಗವದ್ಗೀತೆ ಇಂದು ವಿಶ್ವದ ಅತಿಹೆಚ್ಚುಭಾಷೆಗೆ ಅನುವಾದವಾದ ಕೃತಿಯಾಗಿದ್ದು. ವಿಶ್ವಾದ್ಯಂತ ಇದನ್ನು ಓದುವವರು ಹೆಚ್ಚಾಗುತ್ತಿದ್ದಾರೆ. ಭಾರತದಲ್ಲಿಯೂ ಇಂದು ಭಗವದ್ಗೀತೆಯನ್ನು ಕಲಿಯುವವರ ಕಲಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡಬಹುದಾಗಿದೆ.
ಹಿಂದೂ ವಿರೋಧಿ ಬಾಲಿವುಡ್ ಇಂದು ತನ್ನ ಅಸ್ಥಿತ್ವಕ್ಕಾಗಿ ಚಡಪಡಿಸಬೇಕಾದ ಸ್ಥಿತಿಗೆ ಬಂದಿದೆ. ಹಿಂದೂ ವಿರೋಧಿ ಪ್ರೊಪಗಾಂಡ ಹೊಂದಿದ ಚಲನಚಿತ್ರಗಳನ್ನು ತೆಗೆಯುತ್ತಿದ್ದ ಬಾಲಿವುಡ್ಡಿನ ಧೂರ್ತರು ಇಂದು ಜಾಗ್ರತ ಹಿಂದೂಸಮಾಜದಿಂದಾಗಿ ಹೆದರಿರುವುದನ್ನುನಾವು ಕಾಣಬಹುದಾಗಿದೆ.
ರಾಜಕೀಯವಾಗಿಯೂ ಹಿಂದುಗಳು ಬಹಳಷ್ಟು ಜಾಗ್ರತರಾಗುತ್ತಿದ್ದಾರೆ ಕೇಂದ್ರದಲ್ಲಿ ರಾಷ್ಟ್ರಹಿತಕ್ಕಾಗಿ ಕೆಲಸಮಾಡುತ್ತಿರುವ ಮೋದಿಯವರನ್ನು ಸತತವಾಗಿ ಗೆಲ್ಲಿಸುತ್ತಿದ್ದಾರೆ. ಜಾತೀವಾದ, ಕುಟುಂಬವಾದಗಳು ನಿಧಾನವಾಗಿ ತನ್ನ ಪ್ರಾಬಲ್ಯವನ್ನು ಕಳೆದುಕೊಂಡು ರಾಷ್ಟ್ರವಾದ ಜಾಗ್ರತವಾಗುತ್ತಿರುವುದನ್ನು ನಾವು ನೋಡಬಹುದಾಗಿದೆ.
ಯುವಜನತೆಯಲ್ಲಿಯೂ ಇಂದು ಸಾಕಷ್ಟು ಹಿಂದೂಪ್ರಜ್ಞೆ ಜಾಗ್ರತವಾಗಿರುವುದನ್ನು ನಾವು ಹಿಜಾಬ್ ಗಲಾಟೆ ಪ್ರಕರಣದಲ್ಲಿ ನೋಡಿದ್ದೇವೆ. ಇಂದು ಭಾಜನಾಮಂಡಳಿಗಳು, ಬಾಲ ಶಿಕ್ಷಣ ಕೇಂದ್ರಗಳು ಹೆಚ್ಚುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿದೆ. ಹಿಂದಿನಂತೆ ಅಸ್ಪೃಷ್ಯತೆ ಇಂದು ಸಮಾಜದಲ್ಲಿ ಮೊದಲಿನ ತೀವ್ರತೆಯಲ್ಲಿ ಕಾಣುತ್ತಿಲ್ಲ. ಎಲ್ಲರನ್ನೂ ಸ್ವೀಕರಿಸುವ ಗೌರವಿಸುವ ಗುಣ ಕಂಡುಬರುತ್ತಿದೆ. ಶಾಲೆಗಳಲ್ಲಿ, ಹೋಟೆಲುಗಳಲ್ಲಿ, ಸಮಾರಂಭಗಳಲ್ಲಿ ಇಂದು ಪ್ರತ್ಯೇಕ ಊಟನೀಡುವುದಾಗಲಿ, ಪ್ರವೇಶನಿಷೇಧವಾಗಲೀ ಎಲ್ಲಿಯೂ ಕಂಡುಬರುತ್ತಿಲ್ಲ. ಈ ದಿಸೆಯಲ್ಲಿಯೂ ಆಶಾದಾಯಕ ಬೆಳವಣಿಗೆ ಕಂಡುಬರುತ್ತಿದೆ.
ವಿದ್ಯಾವಂತರಾದ ಹಿಂದುಗಳು ವಿದೇಶಗಳಲ್ಲಿ ಉತ್ತಮ ಸ್ಥಾನಮಾನಗಳನ್ನು ಹೊಂದುತ್ತಾ ಅಲ್ಲಿನ ಜನರಮೇಲೆ ತಮ್ಮ ಪ್ರಭಾವವನ್ನು ಬೀರುತ್ತಿದ್ದಾರೆ. ಇದರಿಂದಾಗಿ ಇಂದು ಪಾಶ್ಚಾತ್ಯರು ನಮ್ಮ ಸಂಸ್ಕೃತಿಯತ್ತ ಹೆಚ್ಚು ಹೆಚ್ಚು ಆಕರ್ಷಿತರಾಗಿತ್ತಿದ್ದಾರೆ. ಹಿಂದುಚಿಂತನೆಗಳಿಗೆ ಗೌರವ ಸಿಗುತ್ತಿದೆ.
ಅನೇಕ ಸಂಘಟನೆಗಳು ಇಂದು ಧರ್ಮಜಾಗ್ರತಿಯ ಕೆಲಸವನ್ನು ಮಾಡುತ್ತಿದ್ದು, ದೇಶಾದ್ಯಂತ ಇಂತಹ ಕೊಟ್ಯಾಂತರ ಕಾರ್ಯಕರ್ತರನ್ನು ನಾವು ನೋಡಬಹುದಾಗಿದೆ. ಸದ್ಗುರು ಜಗ್ಗಿ ವಾಸುದೇವ್, ಆರ್ಟ್ ಆಫ್ ಲಿವಿಂಗಿನ ಶ್ರೀ ರವಿಶಂಕರ್, ಕೇರಳದ ಅಮ್ಮ ಎಂದೇ ಪ್ರಸಿದ್ಧರಾಗಿರುವ ಮಾತಾ ಅಮೃತಾನಂದಮಯಿ, ನೂತನವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಭಾಗೇಶ್ವರಧಾಮ ಕೃಷ್ಣ ಶಾಸ್ತ್ರಿ ಮುಂತಾಗಿ ಅನೇಕ ಧಾರ್ಮಿಕ ರಾಯಭಾರಿಗಳು ಸಮಾಜದ ಜನರಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತಾ ಹಿಂದುತ್ವದ ಜಾಗ್ರತಿಯಲ್ಲಿ ತೊಡಗಿರುವುದನ್ನು ನಾವು ನೋಡಬಹುದಾಗಿದೆ.
ಇಂದು ಶಾಲೆಗಳಲ್ಲಿ ಸಂಸ್ಕೃತಕಲಿಯುವವರ ಸಂಖ್ಯೆಯೂ ಹೆಚ್ಚುತ್ತಿದೆ ಆದರೆ ಶಿಕ್ಷಕರ ಕೊರತೆ ಕಾಡುತ್ತಿದೆ. ಸಂಸ್ಕೃತಭಾರತಿಯ ಸಂಸ್ಕೃತ ಸಂಭಾಷಣ ಶಿಬಿರಗಳಿಗೆ ಅಧಿಕ ಬೇಡಿಕೆ ಕಂಡುಬರುತ್ತಿದೆ.
ಕಾಶ್ಮೀರ ಫೈಲ್ಸ್ , ಕೇರಳಸ್ಟೋರಿ ಮುಂತಾದ ಹಿಂದುಗಳನ್ನು ಜಾಗ್ರತಿಗೊಳಿಸುವ ಚಲನಚಿತ್ರಗಳು ಇಂದು ಯಶಸ್ಸು ಕಾಣುತ್ತಿವೆ. ಹಿಂದೂ ಸಂಸ್ಕೃತಿಯನ್ನು ಗೌರವಯುತವಾಗಿ ಚಿತ್ರಿಸುವ ದಕ್ಷಿಣ ಭಾರತದ ಚಲನಚಿತ್ರಗಳು ಇಂದು ಬಾಲಿವುಡ್ಡಿನ ನಿದ್ದೆ ಕೆಡಿಸಿವೆ. ಬಾಹುಬಲಿ, ಕಾಂತಾರ, RRR , KGF , ಮಗಧೀರ ಮುಂತಾದ ಚಲನಚಿತ್ರಗಳು ಅಭೂತ ಪೂರ್ವಯಶಸ್ಸು ಗಳಿಸಿವೆ. ಇಂದು ಹಿಂದೂ ವಿರೋಧೀ ಜಾಹೀರಾತುಗಳನ್ನು ಸಮಾಜ ವಿರೋಧಿಸುತ್ತಿದೆ ಹಾಗೂ ಇಂತಹ ಬಾಲಿವುಡ್ಡಿನ ಜಿಹಾದಿಗಳಿಗೆ ಬಹಿಷ್ಕಾರಹಾಕುವಮೂಲಕ ಬುದ್ದಿಕಲಿಸುತ್ತಿರುವುದನ್ನು ನಾವು ನೋಡಬಹುದಾಗಿದೆ.
ದೃಶ್ಯಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ಎಡಪಂಥೀಯರು ನೆಲೆಕಳೆದುಕೊಳ್ಳುತ್ತಾ ರಾಷ್ಟ್ರವಾದಿಗಳು ಜನಪ್ರಿಯತೆಯನ್ನು ಗಳಿಸುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ವ್ಯಾಲಂಟೈನ್ ಡೇ, ನ್ಯೂ ಇಯರ್ ಮುಂತಾದುವು ಇಂದು ಮಾನ್ಯತೆಯನ್ನು ಕಳೆದುಕೊಳ್ಳುತ್ತಿರುವುದನ್ನು ನಾವು ನೋಡಬಹುದಾಗಿದೆ. ಪರ್ಯಾಯವಾಗಿ ಅಂತರಾಷ್ಟ್ರೀಯ ಯೋಗದಿನ ವಿಶ್ವವ್ಯಾಪಿಯಾಗಿ ಮಾನ್ಯತೆಗಳಿಸುತ್ತಿದೆ, ಮುಸ್ಲಿಮ್ ದೇಶಗಳಲ್ಲಿಯೂ ಹಿಂದೂ ಮಂದಿರಗಳು ತಲೆ ಎತ್ತುತ್ತಿದೆ, ಭಾರತದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಹೀಗೆ ಅನೇಕ ಆಯಾಮಗಳಲ್ಲಿ ಇಂದಿನ ಹಿಂದೂ ಸಮಾಜ ಜಾಗ್ರತವಾಗುತ್ತಿದ್ದು. ಭವಿಷ್ಯದಲ್ಲಿ ಹಿಂದೂ ಧರ್ಮವೇ ವಿಶ್ವವನ್ನು ವ್ಯಾಪಿಸಲಿದೆ. ಮತಾಂತರ ಭಯೋತ್ಪಾದನೆ ರಹಿತ ಮನಶ್ಯಾಂತಿಯ ಜಗತ್ತಿನ ಏಕೈಕ ಧರ್ಮ ಹಿಂದೂ ಧರ್ಮವಾಗಿದೆ. ಈ ಧರ್ಮದ ರಕ್ಷಣೆ ಹಾಗೂ ಪ್ರಚಾರ ನಮ್ಮ ಪ್ರಮುಖ ಆದ್ಯತೆಗಳಾಗಲಿ.
- ಶ್ರೀಜಿ
ಜೈ ಹಿಂದ್ – ಜೈ ಶ್ರೀರಾಮ್