"ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ" - ಭಗವದ್ಗೀತಾ
ಅಖಂಡ ಭಾರತ ಸನಾತನ ಸ್ವಾಭಿಮಾನ್ ಸೇನಾ ಇದು ಹಿಂದೂ ಧರ್ಮ ಪರಿಷದ್ ಇದರ ಒಂದು ಅಂಗವಾಗಿದೆ. ಅಸಂಘಟಿತ ಹಿಂದೂಗಳನ್ನು ಸಂಘಟಿಸುವುದು, ದೇಶಾದ್ಯಂತ ಹಿಂದೂಗಳ ಮೇಲಾಗುತ್ತಿರುವ ತಾರತಮ್ಯ ಹಾಗೂ ಶೋಷಣೆಯನ್ನು ನಿವಾರಿಸಿ ಅವರ ಸಮಸ್ಯೆಗಳಿಗೆ ಧ್ವನಿಯಾಗುವುದು, ಹಾದಿತಪ್ಪುತ್ತಿರುವ ಹಿಂದೂ ಸಂಸ್ಕೃತಿ ಆಚಾರ ವಿಚಾರಗಳಿಗೆ ಮರುಜೀವ ನೀಡುವುದರ ಮೂಲಕ ಸನಾತನ ಹಿಂದೂ ಪರಂಪರೆಯನ್ನು ಪುನರ್ವೈಭವದೆಡೆಗೆ ಕೊಂಡೊಯ್ಯುವುದು, ವಿದೇಶೀ ದಾಳಿಕೋರರಿಂದ, ಲೂಟಿಕೋರರಿಂದ ಹಿಂದುಗಳ ಹಾಗೂ ಹಿಂದೂಸ್ಥಾನದ ಮೇಲಾದ ಅನ್ಯಾಯವನ್ನು ಸರಿಪಡಿಸುವುದು, ಕಾನೂನು ಮತ್ತು ರಾಜಕೀಯದಲ್ಲಿ ಹಿಂದುಗಳ ಬಗ್ಗೆ ಇರುವ ತಾರತಮ್ಯವನ್ನು ನಿವಾರಿಸುವುದು, ಇದರೊಂದಿಗೆ ವಿದೇಶೀ ದುರ್ಮತಿಗಳಿಂದಾಗುತ್ತಿರುವ ಮತಾಂತರ ಹಾಗೂ ಭಯೋತ್ಪಾದನೆಯಂತಹ ಸಾಮಾಜಿಕ ಅನಿಷ್ಟವನ್ನು ಹಿಮ್ಮೆಟ್ಟಿಸುವುದರ ಮೂಲಕ ಬಲಿಷ್ಠ ಹಿಂದೂಸಮಾಜವನ್ನು ದೃಢಪಡಿಸಿ ಎಲ್ಲಾ ಹಿಂದೂ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸುವಮೂಲಕ ಭಾರತವನ್ನು ಪುನಃ ವಿಶ್ವಗುರುವಿನ ಸ್ಥಾನದಲ್ಲಿ ಪ್ರತಿಷ್ಠಾಪಿಸುವುದು ಹಿಂದೂ ಧರ್ಮ ಪರಿಷತ್ತು ಹಾಗೂ ಅಖಂಡ ಭಾರತ ಸನಾತನ ಸ್ವಾಭಿಮಾನ್ ಸೇನೆ ಇದರ ಉದ್ದೇಶವಾಗಿದೆ. ಹಿಂದುಗಳೆಲ್ಲರೂ ಸಂಘಟನೆಯೊಂದಿಗೆ ಕೈಜೋಡಿಸಿ, ಅಜ್ಞಾನ, ಆಮಿಷ, ಹಾಗೂ ಪ್ರಾಣಭಯದಿಂದ ಬಲಾತ್ಕಾರವಾಗಿ ಮತಾಂತರವಾದ ಎಲ್ಲ ಹಿಂದೂ ಭಾಂಧವರನ್ನು ಮರಳಿ ಭವ್ಯ ಸನಾತನ ಹಿಂದೂ ಸಂಸ್ಕೃತಿಯ ಜ್ಞಾನಸಾಗರದೆಡೆಗೆ ಆತ್ಮೀಯವಾಗಿ ನಾವು ಸ್ವಾಗತಿಸುತ್ತೇವೆ. ಜೈ ಹಿಂದ್ ಜೈ ಭಾರತಮಾತಾ,
“ಏಳಿ ಎದ್ದೇಳಿ ಗುರಿಮುಟ್ಟುವತನಕ ನಿಲ್ಲದಿರಿ” - ಸ್ವಾಮಿ ವಿವೇಕಾನಂದ
M
We behold what we are, and we are what we behold.



"YOU ARE WHAT YOU BELIEVE IN. YOU BECOME THAT WHICH YOU BELIEVE YOU CAN BECOME" -BHAGAVAD GITA





