ಸ್ವಯಂದೌರ್ಬಲ್ಯದಿಂದ ಯುದ್ಧಸೋತ ಕರ್ನಾಟಕ ಬಿಜೆಪಿ.
ಸ್ವಯಂ ದೌರ್ಬಲ್ಯದಿಂದ ಯುದ್ಧಸೋತ ಕರ್ನಾಟಕ ಬಿಜೆಪಿ. ಇದಾಗಲೇ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹೀನಾಯವಾಗಿ ಸೋತಿದೆ. ಚುನಾವಣಾ ಚಾಣಕ್ಯರೆಲ್ಲಾ ತಲೆಮೇಲೆ ಕೈ ಹೊತ್ತು ಕೂತಿದ್ದಾರೆ. ಮೋದಿಜಿ, ಯೋಗಿಜಿಯಂತಹ ತಾರಾಪ್ರಚಾರಕರು ಶ್ರಮಿಸಿದರೂ ಏನೂ ಮ್ಯಾಜಿಕ್ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೇಸ್ ಕಳೆದ ಸಿದ್ಧರಾಮಯ್ಯರ ಸರಕಾರ. ಅಧಿಕಾರದ ಅವಧಿಯಲ್ಲಿ ಹಾಗೂ ಆನಂತರದಲ್ಲಿ ಮಾಡಿದ ಅನಾಚಾರ ಅತ್ಯಾಚಾರಗಳ ಹೊರತಾಗಿಯೂ ಪುನಃ ಪೂರ್ಣ ಬಹುಮತ ಪಡೆದಿದೆ. ಫಲಿತಾಂಶವನ್ನು ನೋಡಿದಾಗ ಬಿಜೆಪಿಯ ಆಡಳಿತ, ನಾಯಕತ್ವ, ಹಾಗೂ…