“ವಿಶ್ವಾಸಾರ್ಹ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಗಿ ಅಧೋಗತಿಯತ್ತ ಹೊರಳಿರುವ ಕರ್ನಾಟಕದ ಬಿಜೆಪಿ”

You are currently viewing “ವಿಶ್ವಾಸಾರ್ಹ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಗಿ ಅಧೋಗತಿಯತ್ತ ಹೊರಳಿರುವ ಕರ್ನಾಟಕದ ಬಿಜೆಪಿ”

 

“ವಿಶ್ವಾಸಾರ್ಹ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಗಿ ಅಧೋಗತಿಯತ್ತ ಹೊರಳಿರುವ ಕರ್ನಾಟಕದ ಬಿಜೆಪಿ”

ಭಾರತ ಹಿಂದೂ ರಾಷ್ಟ್ರ ಹೀಗೆ ನಾವು ಹಿಂದುಗಳು ಹೇಳುತ್ತೇವೆ. ಭಾರತ ಸೆಕ್ಯುಲರ್ ರಾಷ್ಟ್ರ ಎಂಬುದಾಗಿ ರಾಜಕೀಯ ಪಕ್ಷಗಳು ಹೇಳುತ್ತವೆ. ಇದನ್ನು ಇಸ್ಲಾಮಿಕ್ ರಾಷ್ಟ್ರ ಮಾಡುತ್ತೇವೆ ಎಂಬುದಾಗಿ ಜಿಹಾದಿಗಳು ಹೇಳುತ್ತಾರೆ. ಇದನ್ನು ಕ್ರಿಶ್ಚಿಯನ್ ರಾಷ್ಟ್ರ ಮಾಡಬೇಕು ಎನ್ನುವ ಪ್ರಯತ್ನದಲ್ಲಿ ಮಿಷನರಿಗಳು ತೊಡಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ. ಮರುಭೂಮಿಯಲ್ಲಿನ ಓಯಸಿಸ್ ಗಳಂತೆ ಹಿಂದುಗಳಿಗೆ ಮೋದಿಜಿ, ಯೋಗಿಜಿ ಕತ್ತಲೆಯಲ್ಲಿನ ಬೆಳಕಾಗಿ ಕಾಣುತ್ತಿದ್ದಾರೆ. ಆದರೆ ಭಾರತ ಚಿಕ್ಕದೇಶವೇನೂ ಅಲ್ಲ. ಇದೊಂದು ವಿಶಾಲ ದೇಶ. ಬಿಜೆಪಿ ತಾನು ಹಿಂದುಗಳ ಪಕ್ಷ ಎಂಬುದಾಗಿ ತನ್ನನ್ನು ಗುರುತಿಸಿಕೊಂಡಿದೆ. ಹಿಂದುಗಳು ಇದರಮೇಲೆ ಭರವಸೆಯನ್ನು ಕೂಡಾ ಇಟ್ಟಿದ್ದಾರೆ. ಆದರೆ ಹಿಂದುಗಳ ನಿರೀಕ್ಷೆಯ ವೇಗದಲ್ಲಿ ಬಿಜೆಪಿಯ ಕಾರ್ಯವೇಗ ಹಿಂದುಗಳಿಗೆ ಅರಿವಿಗೆ ಬರುತ್ತಿದೆಯಾ? ಎಂದು ಪ್ರಶ್ನಿಸಿದರೆ ಉತ್ತರ ಇಲ್ಲ ಎಂಬುದಾಗೇ ಹೇಳಬೇಕಾಗುತ್ತದೆ. ಏನಿದರ ಕಾರಣ. ದಕ್ಷಿಣದಲ್ಲಿ ಏಕೆ ಇನ್ನೂ ಬಿಜೆಪಿ. ನೆಲೆನಿಂತಿಲ್ಲ? ಕಾರ್ನಾಟಕದ ಬಿಜೆಪಿಯಲ್ಲಿ ಆಗಿರುವ ತೊಂದರೆ ಏನು? ಈ ವಿಚಾರಗಳನ್ನು ವಿಮರ್ಷಿಸೋಣ.

 

ಕೇಂದ್ರದ ಬಿಜೆಪಿ ಸರಕಾರ ಉತ್ತಮವಾಗಿ ಕೆಲಸಮಾಡುತ್ತಿದೆ. ಯಾವುದೇ ಭ್ರಷ್ಟಾಚಾರ ಇಲ್ಲ. ಪಾಕಿಸ್ಥಾನಕ್ಕೆ ಸರಿಯಾಗಿಯೇ ಬುದ್ದಿಕಲಿಸಿದೆ. ಭಾರತ ಅಂತರಾಷ್ಟ್ರೀಯ ವಲಯದಲ್ಲಿಯೂ ವರ್ಚಸ್ಸನ್ನು ಗಳಿಸಿಕೊಂಡಿದೆ. ಹೋರದೇಶಗಳಲ್ಲಿ ಅಫಘಾನಿಸ್ಥಾನ, ಉಕ್ರೇನ್ ಮುಂತಾದೆಡೆ ಯುದ್ಧದ ಸಂಕಷ್ಟದ ಸಮಯದಲ್ಲಿ ಅಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ರಕ್ಷಿಸಿದೆ. ಮೂಲಭೂತ ಸೌಕರ್ಯಗಳಲ್ಲಿ ಅಭೂತಪೂರ್ವ ಸಾಧನೆ ಮಾಡುತ್ತಿದೆ. ಕೊರೋನಾ ಪರಿಸ್ಥಿತಿಯನ್ನು ವಿಶ್ವವೇ ಬೆರಗಾಗುವಂತೆ ನಿರ್ವಹಿಸಿದೆ. ಡಿಜಿಟಲ್ ಪಾವತಿಯಲ್ಲಿ ವಿಶ್ವ ವಿಸ್ಮಯವಾಗುವಂತಹ ಪ್ರಗತಿ ಸಾಧಿಸಿದೆ. GST ಸಂಗ್ರಹ ಪ್ರತೀ ತಿಂಗಳೂ ದಾಖಲೆ ಮಾಡುತ್ತಿದೆ. ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದಿದೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಕಾಶಿಕಾರಿಡಾರ್ ಅದ್ಭುತವಾಗಿ ಸುಂದರಗೊಂಡಿದೆ. ಹಿಂದುಜನರಿಗೆ ದೇಶದಲ್ಲಿ ಮೋದಿಜಿ ಆಡಳಿತದಮೇಲೆ ಭರವಸೆ ಬಂದಿದೆ ಹಾಗೂ ಇದೆ.

ಆದರೆ ಕರ್ನಾಟಕದಲ್ಲೇನಾಗಿದೆ? ಒಮ್ಮೆ ಬೆಳಕು ಚೆಲ್ಲೋಣ. ಮೊದಲಬಾರಿ ಯಡಿಯೂರಪ್ಪರ ಸರಕಾರ ಬಂದಾಗ ಕುಮಾರ ಸ್ವಾಮಿ ಮೋಸಮಾಡಿದರು. ಪುನಃ ಬಿಜೆಪಿ ಅಧಿಕಾರ ಹಿಡಿದಾಗ ಯಡಿಯೂರಪ್ಪನವರಿಗೆ ಆಡಳಿತಮಾಡಲು ಬಿಜೆಪಿಯವರೇ ಆದ ಕೆಲವು ಕುತಂತ್ರಿಗಳು ಅಡ್ಡಗಾಲು ಹಾಕಿದರು. ಅವರ ಮೇಲೆ ಡಿನೋಟಿಫಿಕೇಶನ್ ಆಪಾದನೆ ಬಂದಾಗ ವಿರೋಧಪಕ್ಷದವರಿಗಿಂತಲೂ ಹೆಚ್ಚು ಬಿಜೆಪಿಗರೇ ಅವರನ್ನು ತುಳಿಯಲು ನೋಡಿದರು. ಅವರ ಬೆನ್ನಿಗೆ ನಿಲ್ಲುವ ಕೆಲಸ ಮಾಡಲಿಲ್ಲ. ಆಗ ಅನಿವಾರ್ಯವಾಗಿ ಯಡಿಯೂರಪ್ಪನವರು ಸಂಘದ ಸಂಸ್ಕಾರ ಪಡೆದು ಬಂದವರೆಂದು ಸದಾನಂದ ಗೌಡರಮೇಲೆ ಕುರುಡು ವಿಶ್ವಾಸ ಇಟ್ಟು ಅವರನ್ನು ಮುಖ್ಯಮಂತ್ರಿ ಖುರ್ಚಿಯಲ್ಲಿ ಕೂರಿಸಿ ತಾವು ರಾಜೀನಾಮೆ ಕೊಟ್ಟು ಕಾನೂನು ಹೋರಾಟದಲ್ಲಿ ತೊಡಗಿಕೊಂಡರು. ಕೋರ್ಟಿನಲ್ಲಿಅಪಾದನೆಯು ಸಾಬೀತಾಗದೆ ಹೊರಬಂದಾಗ ಸದಾನಂದಗೌಡರು ಯಡಿಯೂರಪ್ಪನವರಿಗೆ ಮಾತಿನಂತೆ ಸೀಟು ಬಿಟ್ಟುಕೊಟ್ಟಿದ್ದರೆ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಸೋಲುತ್ತಿರಲಿಲ್ಲ. ಸದಾನಂದ ಗೌಡರೂ ಮೋಸಮಾಡಿದರು. ಅದರ ಹಿಂದೆ ಬಿಜೆಪಿ ಹೈಕಮಾಂಡ್ ಹಾಗೂ ಸಂಘದ ಹಿರಿಯರ ಸೂಚನೆ ಇದ್ದಿರಬಹುದೆಂಬುದನ್ನು ನಾವು ಊಹಿಸಬಹುದು. ಹುಟ್ಟು ಹೋರಾಟಗಾರರಾದ ಯಡಿಯೂರಪ್ಪನವರಿಗೆ ಅಧಿಕಾರಕೊಟ್ಟರೆ ಪಕ್ಷದಮೇಲೆ ಹಿಡಿತಸಾಧಿಸುತ್ತಾರೆ. ಯಡಿಯೂರಪ್ಪ ಇರುವವರೆಗೆ ತಾವು ಯಾರೂ ಅಧಿಕಾರದ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಅಸಾಧ್ಯ ತಮ್ಮದೇನೂ ನಡೆಯುವುದಿಲ್ಲವೆಂದು ಬಿಜೆಪಿ ಒಳಗಿನ ನರಿಗಳು ಕುತಂತ್ರ ರೂಪಿಸಿ ಯಡಿಯೂರಪ್ಪನವರನ್ನು ಜೈಲಿಗೆ ಹೋಗಿ ಬಂದವರು ಎಂದು ವಿರೊಧಪಕ್ಷದವರಿಗಿಂತ ಹೆಚ್ಚಾಗಿ ಸ್ವಪಕ್ಷೀಯರೇ ಟೀಕಿಸಿ ಯಡಿಯೂರಪ್ಪರಿಗೆ ಮುಜುಗರ ಉಂಟುಮಾಡಿದರು. ಸದಾನಂದಗೌಡರು ಉಂಡ ಎಲೆಗೆ — ಹೊಯ್ದರು. ಇದನ್ನು ತಪ್ಪು ಎಂದು ಅಂದಿನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನಿತಿನ್ ಘಡ್ಕರಿ ಸರಿಮಾಡಲಿಲ್ಲ. ಸಂಘದವರೂ ಹೇಳಲಿಲ್ಲ.  ಪರಿಣಾಮ ಯಡಿಯೂರಪ್ಪರು ತಮ್ಮಲ್ಲಿದ್ಧ ಅಗಾಧ ನಾಯಕತ್ವ ಸಾಮರ್ಥ್ಯವನ್ನು ವಿಶ್ವಾಸದ್ರೋಹ ಮಾಡಿದ ಸದಾನಂದ ಗೌಡರನ್ನು ಮುಖ್ಯಮಂತ್ರಿಸ್ಥಾನದಿಂದ ಕೆಳಗಿಳಿಸುವಲ್ಲಿ ಬಳಸತೊಡಗಿದರು. ಯಡಿಯೂರಪ್ಪರನ್ನು ಕುರ್ಚಿಯಲ್ಲಿ ಕೂರಿಸಲು ರಾಜ್ಯದ ಬಿಜೆಪಿ ನಾಯಕರು ಬಿಡಲಿಲ್ಲ. ಕೇಂದ್ರವೂ ರಾಜ್ಯದ ಕುತಂತ್ರೀ ನರಿಗಳ ಮಾತಿನಮೇಲೆ ವಿಶ್ವಾಸ ಇಟ್ಟಿತು. ಇದರಿಂದಾಗಿ ಯಡಿಯೂರಪ್ಪನವರ ಪ್ರಭಾವ ಹಾಗೂ ಒತ್ತಡದಿಂದಾಗಿ ಸದಾನಂದ ಗೌಡರು ಕುರ್ಚಿಕಳೆದುಕೊಳ್ಳುವುದು ಅನಿವಾರ್ಯವಾದಾಗ ಸೌಮ್ಯಸ್ವಭಾವದ ಜಗದೀಶ ಶೆಟ್ಟರ್ ಯಡಿಯೂರಪ್ಪನವರ ರಿಮೋಟ್ ಸಿ ಎಂ ಆದರು. ಯಡಿಯೂರಪ್ಪರನ್ನು ಹಣಿಯಬೇಕೆಂದು ಕತ್ತಿಮಸೆಯುತ್ತಿದ್ದ ಸ್ವಪಕ್ಷೀಯರಿಗೆ ಇದು ನುಂಗಲಾರದ ತುತ್ತಾಯಿತು. ಯಡಿಯೂರಪ್ಪರನ್ನು ಮೂಲೆಗುಂಪುಮಾಡಲು ಇವರೆಲ್ಲಾ ಭಿನ್ನ ಭಿನ್ನ ರೀತಿಯಲ್ಲಿ ಅವರಮೇಲೆ ದಾಳಿಮಾಡತೊಡಗಿದರು. ಯಡಿಯೂರಪ್ಪರನ್ನು ರಾಜಕೀಯವಾಗಿ ಸಂಪೂರ್ಣವಾಗಿ ತುಳಿಯಲು ಕರ್ನಾಟಕ ಬಿಜೆಪಿಗರು ಮುಂದಾದರು. ಅವರಿಗೆ ಪಕ್ಷದಲ್ಲಿ ಯಾವುದೇ ಅಧಿಕಾರವನ್ನೂ ಕೊಡದೆ ಎಲ್ಲೆಡೆಯೂ ಇರುಸುಮುರಿಸಾಗುವಂತೆ ನಡೆದುಕೊಳ್ಳತೊಡಗಿದರು. ಅವಮಾನಿಸತೊಡಗಿದರು. ತಾನು ಹೀಗೆಯೇ ಇದ್ದರೆ ತನ್ನರಾಜಕೀಯ ಭವಿಷ್ಯವನ್ನು ಬಿಜೆಪಿಯಲ್ಲಿರುವ ಅಧಿಕಾರ ಪಿಪಾಸುಗಳು, ಕುತಂತ್ರಿಗಳು ನಾಶಮಾಡಿಬಿಡುತ್ತಾರೆನ್ನುವ ಭಯ ಯಡಿಯೂರಪ್ಪನವರಿಗೆ ಆವರಿಸ ತೊಡಗಿತು. ತಾನೇ ಕಟ್ಟಿದ ಪಕ್ಷದಲ್ಲಿ ತಾನೇ ಆನಾಥನಾಗಿದ್ದೇನೆನ್ನುವ ಹತಾಶೆ ಹಾಗೂ ದುಃಖ ಅವರನ್ನು ಬಾಧಿಸತೊಡಗಿತು. ಕೇಂದ್ರದ ನಾಯಕರಿಗೆ ಇವರ ಭಾವನೆ ಅರ್ಥವಾಗಲಿಲ್ಲಿ ಪಕ್ಷದ ನಿಯಂತ್ರಣ ತಮ್ಮಕೈಯ್ಯಲ್ಲಿರಬೇಕೆಂದು ಅವರು ಬಯಸಿದರು. ಕೇಂದ್ರ ನಾಯಕರಿಗೆ ರಾಜ್ಯದ ಕಿವಿಊದುವ ಊಸರವಳ್ಳಿಗಳ ಭಜನೆಯೇ ಇಂಪಾಗಿ ಕೇಳುತ್ತಿತ್ತು. ಯಡಿಯೂರಪ್ಪರ ಶಕ್ತಿಯನ್ನು ಉಳಿಸಿಕೊಳ್ಳುವ ಬದಲು ಅದನ್ನು ಕಳೆದುಕೊಳ್ಳುವ ಮೂರ್ಖ ಸ್ಥಿತಿಯನ್ನು ತಂದುಕೊಂಡಿತು. ಇದು ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿವಿಷಯದಲ್ಲೂ ನಡೆದಿದೆ. ಯಡಿಯೂರಪ್ಪನವರಿಗೆ ಮೊದಲಿಗೆ ಕುಮಾರಸ್ವಾಮಿಯವರಿಂದ ವಿಶ್ವಾಸದ್ರೋಹ ನಂತರದಲ್ಲಿ ಸ್ವಕೀಯರಿಂದಲೇ ವಿಶ್ವಾಸದ್ರೋಹ ಆಯಿತು.

 

ಹೋರಾಟಗಾರನನ್ನು ಕಠಿಣ ಪರಿಸ್ಥಿತಿಗಳು ಎದೆಗುಂದಿಸುವುದಿಲ್ಲ ಗಟ್ಟಿ ಗೊಳಿಸುತ್ತವೆ. ಯಡಿಯೂರಪ್ಪ 2012ರಲ್ಲಿ ತಾವೇ ಕಟ್ಟಿ ಬೆಳೆಸಿದ ಪಕ್ಷದಿಂದ ಸ್ವಕೀಯರ ಕುತಂತ್ರದಿಂದ ಕಣ್ಣೀರಿನೊಂದಿಗೆ ಹೊರಬಂದರು. ಹಿಂದೆ ಇಂತಹ ಪರಿಸ್ಥಿತಿ ರಾಮಕೃಷ್ಣ ಹೆಗಡೆಯವರಿಗೂ ಬಂದಿತ್ತು ಅನೇಕರಿಗೆ ಬಂದಿದೆ. ಆಪಲ್ ಕಂಪೆನಿಯ ನಿರ್ಮಾತ ಸ್ಟೀವ್ ಜಾಬ್ಸ್ ಜೀವನದಲ್ಲಿಯೂ ಇಂತಹ ಘಟನೆ ನಡೆದಿದೆ.  ಹಿಂದೂ ಹುಲಿ ಅನಂತ್ಕುಮಾರ್ ಹೆಗಡೆ ಯವರು ಒಮ್ಮೆ ಹೀಗೆ ಹೇಳಿದ್ದರು ನಾವು (ರಾಷ್ಟ್ರವಾದಿಗಳು) ಕಷ್ಟಪಟ್ಟುಕಟ್ಟಿದ ಹಡಗನ್ನು ಇಂದು ಹೊರಗಡೆಯಿಂದ ಬಂದು ಸೇರಿದ ಇಲಿ ಹೆಗ್ಗಣಗಳು ಬಿಲಕೊರೆದು ಮುಳುಗಿಸುತ್ತಿವೆ ಎನ್ನುವ ಮಾತನ್ನ. ಹೀಗೆ ಪಕ್ಷದಲ್ಲಿ ಹಿಂಬಾಗಿಲಿನಿಂದ ಬೆಳೆದ ಅಯೋಗ್ಯರು ಹೆಚ್ಚಾಗಿದ್ದರು. ಯಡಿಯೂರಪ್ಪ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ತನ್ನ ಸಾಮರ್ಥ್ಯವನ್ನು ತೋರಿಸಲು ಕೆಜೆಪಿ ಕಟ್ಟಿದರು. ಜೀವನ ಇಡೀ ಬಿಜೆಪಿ ಕಟ್ಟಲು ಶ್ರಮವಹಿಸಿದ್ದವರು 2013 ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪಣತೊಟ್ಟರು. ಬಿಜೆಪಿಯ ನಾಯಕರ ಅವಿವೇಕ ಹಾಗೂ ಸಂಘದ ಹಿರಿಯರ ಔದಾಸಿನ್ಯದಿಂದಾಗಿ 2013ರ ಚುನಾವಣೆಯಲ್ಲಿ 110 ಸ್ಥಾನದಿಂದ ಬಿಜೆಪಿ 40 ಸ್ಥಾನಕ್ಕೆ ಕುಸಿಯಿತು. ಬಿಜೆಪಿ ಹೈಕಮಾಂಡಿಗೆ ತಾನು ಎಲ್ಲಿದ್ದೇನೆ ಏನುಮಾಡಿದ್ದೇನೆ ಎನ್ನುವದು ಅರ್ಥ ಅಯಿತು. ಕುತಂತ್ರಗಳನ್ನು ನಂಬಿಕೆಟ್ಟೆ ಎನ್ನುವುದು ಅರಿವಾಯಿತು.

ಪುನಃ ಯಡಿಯೂರಪ್ಪನವರಿಗೆ ಪಾರ್ಟಿ ಶರಣಾಯಿತು. ಅವರಂತಹ ನಾಯಕರು ಬಿಜೆಪಿಯಲ್ಲಿ ಇಲ್ಲ ಎನ್ನುವ ಅರಿವಾಗುತ್ತಲೇ ಅವರನ್ನು ಪುನಃ ಕರೆತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಯಿತು. ನಿಮ್ಮನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎಂದು ಭರವಸೆನೀಡಲಾಯಿತು. ವಯಸ್ಸಿನ ನಿಯಮ ಮುರಿದು ಮುಖ್ಯಂತ್ರಿ ಅವರೇ ಎನ್ನುವುದಾಗಿ ಭರವಸೆ ನೀಡಲಾಯಿತು. ಈಗ ಹಿಂದಿನ ಅನುಭವದಿಂದ ಯಡಿಯೂರಪ್ಪ ಸಾಕಷ್ಟು ಹುಷಾರಾಗಿದ್ದರು. ಸರ್ವಸಮಾಜದ ನಾಯಕರಾಗಿದ್ದ ಯಡಿಯೂರಪ್ಪ ಈಗ ತನ್ನಪರವಾಗಿ ಲಾಭಿ ನಡೆಸುವ ಬೃಹತ್ ಲಿಂಗಾಯತ ಸಮುದಾಯವನ್ನು ಸೃಷ್ಟಿಸಿಕೊಂಡಿದ್ದರು. ಲಿಂಗಾಯತ ಮಠ ಹಾಗೂ ಸ್ವಾಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು.  ಯುದ್ಧಗೆದ್ದ ವೀರನಾಗಿದ್ದರು. ರಾಜ್ಯದಲ್ಲಿ ಮಿಂಚಿನಂತೆ ಓಡಾಡಿ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹುರಿದುಂಬಿಸಿ ಪಕ್ಷಕ್ಕೆ ಪುನರ್ಜೀವ ತುಂಬತೊಡಗಿದರು. 2018 ನೇ ಇಸವಿಯಲ್ಲಿ 104  ಸೀಟುಗಳನ್ನು ಪಡೆದು ಬಿಜೆಪಿ ಅತಿದೊಡ್ಡಪಕ್ಷವಾಗಿ ಹೊರಹೊಮ್ಮಿತು. ಜಿಡಿಎಸ್ ಜೊತೆ ಸೇರಿ ಸರಕಾರ ಮಾಡುವ ಅವಕಾಶ ಇತ್ತು ಆದರೆ ಕುಮಾರ ಸ್ವಾಮಿ ಪುನಃ ಜನರು ತಿರಸ್ಕರಿಸಿದ್ದ ಕಾಂಗ್ರೇಸಿಗೆ ತನ್ನ ಬೆಂಬಲಕೊಟ್ಟು ತಾವು ಮುಖ್ಯಮಂತ್ರಿ ಆದರು. ಯಡಿಯೂರಪ್ಪ ಬಹುಮತ ಸಾಬೀತು ಮಾಡಲಾಗದೆ ಸೊತರು.

ಆದರೆ ಸೊಲೊಪ್ಪಿಕೊಳ್ಳದ ಯಡಿಯೂರಪ್ಪ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ವ್ಯೂಹ ರಚಿಸತೊಡಗಿದರು. ಅದರಲ್ಲಿ ಯಶಸ್ವಿಯೂ ಆದರು ಅಪರೇಶನ್ ಕಮಲ ನಡೆಸಿತು. 15 ಕ್ಕಿಂತಲೂ ಹೆಚ್ಚಿನವರು ಯಡಿಯೂರಪ್ಪನವರಮೇಲೆ ಭರವಸೆ ಇಟ್ಟು ಬಿಜೆಪಿಗೆ ಬಂದರು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿತು. ಮನಸ್ಸಿಲ್ಲದ ಮನಸ್ಸಿನಿಂದ ಸಂಘ ಹಾಗೂ ಬಿಜೆಪಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಂಡಿತು. ಯಡಿಯೂರಪ್ಪ ತಾವು ಕೊಟ್ಟಮಾತಿನಂತೆ ತನ್ನನ್ನು ನಂಬಿ ಬಂದವರೆಲ್ಲರನ್ನೂ ಮಂತ್ರಿಮಾಡಿದರು. 2019 ರ ಲೊಕಸಭಾಚುನಾವಣೆಯಲ್ಲಿ ಬಿಜೆಪಿ 28 ರಲ್ಲಿ 25 ಸೀಟು ಗೆದ್ದಿತು ಹಾಗೂ ಸುಮಲತಾರನ್ನು ಬೆಂಬಲಿಸಿ ಗೆಲ್ಲಿಸಿತು.  28 ಸೀಟುಗಳಲ್ಲಿ 25+1 ಬಿಜೆಪಿಯ ಪಾಲಾಯಿತು. ಯಡಿಯೂರಪ್ಪ ಪುನಃ ತನ್ನ ನಾಯಕತ್ವ ಸಾಮರ್ಥ್ಯವನ್ನು ಸಾಬೀತುಮಾಡಿದರು. ಯಡಿಯೂರಪ್ಪನವರ ಪಾರ್ಟಿಮೇಲಿನ ಹಿಡಿತದಿಂದ ಮೂಲ ಬಿಜೆಪಿಗರಲ್ಲಿ ಹಾಗೂ ಸಂಘದ ಹಿರಿಯರ ಹೊಟ್ಟೆಯಲ್ಲಿ ತಳಮಳ ತಂದಿತು. ಹೊರಗಡೆಯಿಂದ ಬಂದವರು ಅಧಿಕಾರ ಅನುಭವಿಸುತ್ತಿದ್ದಾರೆ. ಮೂಲ ಬಜೆಪಿ ಕಾರ್ಯಕರ್ತರು ಅಪ್ರಸ್ತುರಾಗಿದ್ದಾರೆ ಎನ್ನುವ ಭಾವ ಎಲ್ಲರ ಮನಸ್ಸಿನಲ್ಲಿ ಮನೆಮಾಡಿತು. ಪುನಃ ಯಡಿಯೂರಪ್ಪರನ್ನು ಹಣಿಯುವ ಷಡ್ಯಂತ್ರ ನಡೆಯ ತೊಡಗಿತು. ಸಂಘಮೂಲದವರು ಬಿಜೆಪಿಯ ನೇತೃತ್ವ ವಹಿಸಬೇಕು. ಹಾಗೂ ಯಡಿಯೂರಪ್ಪರ ಲಿಂಗಾಯಿತ ಲಾಭಿಯನ್ನು ದುರ್ಬಲಗೊಳಿಸಬೇಕು. ಎಂಬುದಾಗಿ ಒಳಗೊಳಗೇ ಕುಟಿಲಯೋಜನೆಗಳನ್ನು ಹೆಣೆಯಲಾರಂಭಿಸಿದರು. ಯಡಿಯೂರಪ್ಪರ ಮಗ ವಿಜಯೇಂದ್ರ ಬೆಜೆಪಿಯ ನೆಲೆಯೇ ಇಲ್ಲದ ಸ್ಥಳಗಳಲ್ಲಿ ಉಪಚುನಾವಣೆಗಳಲ್ಲಿ ನೇತೃತ್ವ ವಹಿಸಿ ಪಕ್ಷವನ್ನು ಗೆಲ್ಲಿಸಿಕೊಂಡು ಬಂದು ತಮ್ಮ ಸಾಮರ್ಥ್ಯವನ್ನು ತನ್ನಲ್ಲಿರುವ ನಾಯಕತ್ವಗುಣವನ್ನು ಪ್ರದರ್ಶಿಸಿದ್ದರೂ ಅವರಿಗೆ ವರುಣಾದಲ್ಲಿ ಸ್ಪರ್ಧಿಸುವ ಅವಕಾಶ ತಪ್ಪಿಸಲಾಯಿತು. ಇಲ್ಲಿಯೂ ಕೆಲವರ ಕುಟಿಲತೆ ಕೆಲಸಮಾಡಿತು. ಬಿಜೆಪಿಗರು ಹಾಗೂ ಸಂಘ ಪುನಃ ಯಡಿಯೂರಪ್ಪನವರನ್ನು ನಿಯಂತ್ರಣದಲ್ಲಿಡಬೇಕೆಂದು ಯೋಜನೆ ರೂಪಿಸ ತೊಡಗಿತು. ಇದಕ್ಕಾಗಿ ನಾಯಕತ್ವದ ಗುಣವೇ ಇಲ್ಲದ ವಿದೂಷಕನಂತೆ ವರ್ತಿಸುವ ಬಾಲಿಷ ಹಾಗೂ ವ್ಯಂಗ್ಯವಾಗಿ ಯಕ್ಷಗಾನದ ಅರ್ಥಧಾರಿಗಳಂತೆ ಮಾತನಾಡುವ. ಸ್ಥಳೀಯ ಜನರಬೆಂಬಲವೂ ಇಲ್ಲದ ಅಪ್ರಯೋಜಕರೆಂದು ಕ್ಷೇತ್ರದ ಜನತೆಯಿಂದ ಖ್ಯಾತಿಪಡೆದ ನಳಿನ್ ಕುಮಾರ್ ಕಟೀಲ್ ಇವರನ್ನು ಸಂಘದ ಮುಖ ಎಂಬುದಾಗಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದಗೆ ತಂದು ಕೂರಿಸಲಾಯಿತು. ಇದೊಂದು ದೊಡ್ಡ ಮೂರ್ಖತ್ವವಾಗಿತ್ತು. ಯುದ್ಧಗೆಲ್ಲುವುದು ನಾಯಕರ ಹೋರಾಟದ ಸಾಮರ್ಥ್ಯದಿಂದಲೇ ಹೊರತು ಕೇವಲ ಪ್ರಚೋದಕ ಭಾಷಣೆಗಳಿಂದ ಅಸಾಧ್ಯ. ರಾಜ್ಯಾಧ್ಯಕ್ಷರ ಆದ್ಯತೆಯ ಕೆಲಸ ಪಕ್ಷ ಸಂಘಟಿಸುವುದಾಗಿರಲಿಲ್ಲ ಯಡಿಯೂರಪ್ಪನವರನ್ನು ಕಟ್ಟಿಹಾಕುವುದು ಹಾಗೂ ಕೆಳಗಿಳಿಸುವುದಾಗಿತ್ತು.  ಎಲ್ಲಾ ಹಂತಗಳಲ್ಲಿಯೂ ಯಡಿಯೂರಪ್ಪರನ್ನು ಕಟ್ಟಿಹಾಕಲು ಪ್ರಯತ್ನಗಳು ನಡೆಯತೊಡಗಿತು. ವಿಜಯೇಂದ್ರರನ್ನೂ ಬೆಳೆಯಲು ಅಡ್ಡಗಾಲು ಹಾಕಲಾಯಿತು. ಕುಟುಂಬ ರಾಜಕೀಯ ಎನ್ನುವ ಪೂರ್ವ ನಿರ್ಧರಿತ ಯೋಜನೆಯನ್ನು ಪ್ರದರ್ಶಿಸಲಾಯಿತು. ಯಡಿಯೂರಪ್ಪ ನಿಶ್ಚಿಂತೆಯಿಂದ ಆಡಳಿತ ನಡೆಸುವುದು ಕಷ್ಟವಾಯಿತು. ಮಧ್ಯೆ ಕೊರೋನಾ ಸಂದಿಗ್ಧತೆ ಆಪರೇಶನ್ ಕಮಲದಿಂದ ಬಂದವರ ವಿಶ್ವಾಸ ಉಳಿಸಿಕೊಳ್ಳಬೇಕು ಪಾರ್ಟಿಯಲ್ಲಿರುವವರ ತನ್ನದೇ ಜನರು ಮಾಡುತ್ತಿರುವ ದಾಳಿಯನ್ನು ಎದುರಿಸಬೇಕು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೇಗೆ ಹೇಗೋ ಎರಡು ವರ್ಷ ಸರಕಾರವನ್ನು ದೂಡಿಕೊಂಡು ಬಂದರು.

ಯಡಿಯೂರಪ್ಪನವರನ್ನು ನಿಯಂತ್ರಿಸುವತ್ತ ಲಕ್ಷವಹಿಸಿದ ಸಂಘ ಹಾಗೂ ಹೈಕಮಾಂಡ್ ಪರ್ಯಾಯ ಸಮರ್ಥ ವ್ಯಕ್ತಿಯನ್ನು ಗುರುತಿಸಲಿಲ್ಲ, ಬೆಳೆಸಲಿಲ್ಲ. ಡಿಕೆಶಿ ಹಾಗೂ ಸಿದ್ಧರಾಮಯ್ಯರಂತಹ ಘಟಾನುಘಟಿ ಹೋರಾಟಗಾರರನ್ನು ಎದುರಿಸುವ ದಾರ್ಷ್ಟ್ಯ ಇರುವಂತಹ ನೇರನುಡಿಯ ಪ್ರಖರ ಹಿಂದುತ್ವವಾದಿಯಾದ ಬಸವನ ಗೌಡ ಯತ್ನಾಳರನ್ನು ಮಂತ್ರಿಸ್ಥಾನದಿಂದ ದೂರ ಇಡಲಾಯುತು. ಯಡಿಯೂರಪ್ಪನವರಿಗೆ ವಿರೋಧ ಪಕ್ಷಕ್ಕಿಂತ ಹೆಚ್ಚುಕಾಟ ಯತ್ನಾಳರೇ ಕೊಡುತ್ತಿದ್ದರು. ಇದು ಹೈಕಮಾಂಡಿನ ಸೂಚನೆಯ ಮೇರೆಗೆ ನಡೆಯುತ್ತಿತ್ತೆಂದು ನಾವು ಊಹಿಸಬಹುದು. ಎಕೆಂದರೆ ಅವರಿಗೆ ಶಿಸ್ತುಕ್ರಮದ ಹೆದರಿಕೆ ಇರಲಿಲ್ಲ. ಅಂತೂ ಇಂತೂ ಒಂದು ದಿನ ಎಲ್ಲಾ ಕಡೆಯಿಂದ ಕೆಡ್ಡತೋಡಿ ಯಡಿಯೂರಪ್ಪರೆಂಬ ಮುದಿ ಸಿಂಹವನ್ನು ಹೊಂಡಕ್ಕೆ ಕೆಡವಲಾಯಿತು. ಅವರಿಗೆ ರಾಜಿನಾಮೆ ಕೊಡುವುದು ಅನಿವಾರ್ಯ ವೆಂಬಂತಾಯಿತು. ಆಗ ಸುಲಭದಲ್ಲಿ ಸೊಲೊಪ್ಪದ ಯಡಿಯೂರಪ್ಪ ತನ್ನ ಪದತ್ಯಾಗ ಅನಿವಾರ್ಯ ಎನ್ನುವ ಪರಿಸ್ಥತಿ ಬಂದಾಗ ತನ್ನ ಮಗ ವಿಜಯೇಂದ್ರರನ್ನು ರಾಜಕೀಯವಾಗಿ ಗಟ್ಟಿಗೊಳಿಸಲು  ಪ್ರಯತ್ನಿಸಿದರು ಅದಕ್ಕೂ ಸಂಘ ಅಥವಾ ಹೈಕಮಾಂಡ್ ಆಸ್ಪದ ಕೊಡಲಿಲ್ಲ. ಆಗ ಯಡಿಯೂರಪ್ಪ ಹೊಸಪಟ್ಟನ್ನು ಹೆಣೆದರು ತಾವು ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದ ಮಠಾಧೀಶರ ಸೇನೆಯನ್ನು ಹೋರಾಟದ ಮುಂಚೂಣಿಯಲ್ಲಿ ಅಖಾಡಕ್ಕೆ ಇಳಿಸಿದರು. ಲಿಂಗಾಯತ ಮುಖ್ಯಮಂತ್ರಿ ಎನ್ನುವ ಹೊಸ ಕಾರ್ಡ್ ಪ್ಲೇ ಮಾಡಲಾಯಿತು. ಗೊಂಬೆಯಾಟದ ಮೇಲಿನ ಸೂತ್ರದಾರರ ಹಿಡಿತ ಈಗ ತಪ್ಪ ತೊಡಗಿತು. ಯಡಿಯೂರಪ್ಪ ಭಾವುಕರಾಗಿ ವಿಧಾನಸೌಧದಲ್ಲಿ ಕಣ್ಣೀರಿನೊಂದಿಗೆ ವಿದಾಯ ಭಾಷಣಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟರು. ಹೈಕಮಾಂಡ್ ಅನಿವಾರ್ಯವಾಗಿ ಯಡಿಯೂರಪ್ಪನವರ ಅನುಭವದ ಪಟ್ಟಿಗೆ ಬಗ್ಗಬೇಕಾಯಿತು. ಯಡಿಯೂರಪ್ಪರ ಶರತ್ತಿನಂತೆ ಮೂಲ ಬಿಜೆಪಿಗರಲ್ಲದ ಬಸವರಾಜ ಬೊಮ್ಮಾಯಿ ನೂತನ ಮುಖ್ಯಂತ್ರಿಯಗಿ ಅಧಿಕಾರ ಹಿಡಿದರು.

ಹೆಸರಿಗನುಗುಣವಾದ ಸ್ವಭಾವ ಹೊಂದಿರುವ ಶಾಂತ ಸ್ವಭಾವದ ಹೊಸ ಮುಖ್ಯಮಂತ್ರಿಯವರನ್ನು ಎರಡೆರಡು ಕಡೆಯಿಂದ ನಿಯಂತ್ರಿಸಲಾಗುತ್ತತ್ತು. ಒಂದುಕಡೆ ಯಡಿಯೂರಪ್ಪ ಇನ್ನೊಂದುಕಡೆ ಹೈಕಮಾಂಡ್ ಹೀಗೆ ಅವರಿಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು.  ತಮ್ಮ ಕುರ್ಚಿಯು ಯಾವತ್ತೂ ಜಾರಬಹುದೆನ್ನುವ ಭಯ ಅವರಲ್ಲೂ ಮೂಡತೊಡಗಿತು. ಭದ್ರತೆಯ ಧೈರ್ಯ ಅವರಿಗೂ ಇರಲಿಲ್ಲ. ಆಡಳಿತದಲ್ಲಿ ಹಿಡಿತ ಸಾಧಿಸಲು ಆಗಲಿಲ್ಲ. ಕೆ ಜಿ ಹಳ್ಳಿ ಡಿಜೆ ಹಳ್ಳಿ, ಶಿವಮೊಗ್ಗ ಕೊಲೆ, ನೆಟ್ಟಾರು ಕೊಲೆ ಮುಂತಾದ ಘಟನೆಗಳಲ್ಲಿ ಗೃಹಮಂತ್ರಿಗಳ ದೌರ್ಬಲ್ಯ ಹಾಗೂ ಮುಖ್ಯಮಂತ್ರಿಗಳ ನಿಧಾನಗತಿಯ ನಡವಳಿಕೆ ಹಿಂದುಕಾರ್ಯಕರ್ತರು ಹತಾಶರಾಗುವಂತೆ ಮಾಡಿತು. ಪಾರ್ಟಿ ಅಧ್ಯಕ್ಷರ ನಿಷ್ಕ್ರಿಯತೆಯಿಂದ ಬೇಸತ್ತ ಹಿಂದೂ ಕಾರ್ಯಕರ್ತರು ಅವರನ್ನು ನೆಟ್ಟಾರಿನಲ್ಲಿ ಕಾರೊಳಗಿದ್ದಂತೆಯೇ ನಡುಗಿಸಿದರು. ಗೃಹಮಂತ್ರಿಗಳು ಕಠಿಣ ಕ್ರಮದ ಕಾಮಿಡಿಯಾಗಿದ್ದರು, ಎ ಬಿ ವಿ ಪಿ ವಿದ್ಯಾರ್ಥಿಗಳು ಇವರ ನಿಷ್ಕ್ರಿಯತೆಗೆ ಬೇಸತ್ತು ತಮ್ಮದೇ ಪಕ್ಷದ ಗೃಹಮಂತ್ರಿಗಳ ಮನೆಗೆ ಮುತ್ತಿಗೆ ಹಾಕಿದರು. ಸಂಸ್ಕೃತ ಭಾಷೆಗೆ ಮಾರಕವಾದ ಶಿಕ್ಷಣ ನೀತಿ ಅನುಸರಿಸಿದ ಹಿಂದೂಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿಯ ವಿರುದ್ಧ ಸಂಸ್ಕೃತಭಾರತೀ ಕೋರ್ಟಿನಲ್ಲಿ ಧಾವೆಧಾಕಲಿಸಿ ಹೋರಾಡಬೇಕಾಯಿತು. ಹಿಂದುಗಳ ಪರಿಸ್ಥಿತಿ ಯಾರನ್ನೂ ನಂಬದಂತಾಯಿತು. ಕಾಂಗ್ರೇಸಿಗರ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರಿಗೆ ಭದ್ರತೆ ಇರಲಿಲ್ಲ ಬಿಜೆಪಿಯಲ್ಲೂ ಹಿಂದುಗಳು ಸಾಯುವುದು ತಪ್ಪಲಿಲ್ಲ. ಇದಕ್ಕೆ ಯಾರು ಹೊಣೆ?

ಇಷ್ಟೆಲ್ಲಾ ನಡೆದರೂ  ಬಲಿಷ್ಟರ ಕೈಗೆ ನಾಯಕತ್ವವನ್ನು ಕೊಡುವ ಗೃಹ ಖಾತೆಯನ್ನು ಸಮರ್ಥರಿಗೆ ನೀಡುವ ಕೆಲಸ ಬಿಜೆಪಿಯಿಂದ ನಡೆಯಲಿಲ್ಲ. ಯಾರ ಹಿಡಿತ ಯಾರಕೈಯ್ಯಲ್ಲೂ ಇರಲಿಲ್ಲ. ಹಿಂದುಗಳೂ ಭ್ರಮನಿರಸನ ಹೊಂದಿದ್ದರು ಸರಕಾರಿ ಕಛೇರಿಗಳಲ್ಲಿ ಸರಿಯಾಗಿ ಕೆಲಸ ನಡೆಯುತ್ತಿರಲಿಲ್ಲ. MLA ಗಳಿಗೆ ಅಧಿಕಾರಿಗಳ ಮೇಲೆ ಹಿಡಿತ ಇರಲಿಲ್ಲ.  ನಾಡಿನ ಜನ ಬೆಸತ್ತಿದ್ದರು. ಇದೇಸಮಯದಲ್ಲಿ 40 ಶೇ ಕಮಿಶನ್ ಆಪಾದನೆ ಗುತ್ತಿಗೆದಾರರ ಸಂಘದ ಕಡೆಯಿಂದ ಬಂತು . ಇದನ್ನು ಮಾಡಿಸಿದವರು ಯಾರೆಂದು ಪತ್ತೆ ಹಚ್ಚಲಾಗಲಿಲ್ಲ. ಇದನ್ನು ಸುಳ್ಳೆಂದು ಸಾಭೀತು ಮಾಡಲೂ ಬಿಜೆಪಿಗರಿಂದ ಆಗಲಿಲ್ಲ. ಮೌನವಾಗಿ ಒಪ್ಪಿಕೊಂಡಂತಾಯಿತು. ತನ್ಮಧ್ಯೆ ಉಡುಪಿಯಲ್ಲಿ ಒಬ್ಬ ಗುತ್ತಿಗೆ ದಾರನ ಆತ್ಮಹತ್ಯೆಯೋ? ಹತ್ಯೇಯೋ? ನಡೆಯಿತು. ಇದರಲ್ಲಿ ಈಶ್ವರಪ್ಪನವರ ಹೆಸರು ತಂದು ಅವರನ್ನು ಮಂತ್ರಿಮಂಡಲದಿಂದ ಹೊರಹಾಕಲಾಯಿತು. ಮುಂದೆ ಅವರನ್ನು ಶಾಶ್ವತವಾಗಿಯೇ ದೂರಮಾಡಲಾಯಿತು. ಹೀಗೆಯೇ ಜನರ ನಿರೀಕ್ಷೆಗೆ ಸ್ಪಂದಿಸದ ಸರಕಾರದಿಂದ ಹಿಂದುಗಳು ಹತಾಶರಾಗಿದ್ದರೆ! ದುರ್ಬಲ ನಾಯಕತ್ವದಲ್ಲಿ ಕಾಂಗ್ರೇಸು ಸರಿಯಾಗಿ ಯೋಜನೆ ರೂಪಿಸಿ ಮುಂದಿನ ಚುನಾವಣೆಗೆ ಸಿದ್ಧತೆ ನಡೆಸ ತೊಡಗಿತು. ಬಿಜೆಪಿ ತಾನು ನೀಡಿದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸೋತಿತು. ನಿಮಗೆ ನೆನಪಿನಲ್ಲಿರುವ ಹಿಂದುಗಳಿಗಾಗಿ ಮಾಡಿದ ಬಿಜೆಪಿಯ ಒಂದಾದರೂ ಆಕರ್ಷಕ ಯೋಜನೆ ನೆಪಿಸಿಕೊಳ್ಳಿ. ನೆನಪಿಗೆ ಬರುವುದಿಲ್ಲ. ಕೆಲಸ ಮಾಡುವುದು ಹೇಗೆ ಮುಖ್ಯವೋ ಅದಕ್ಕೆ ಪ್ರಚಾರ ಕೊಡುವುದೂ ಅಷ್ಟೇ ಮುಖ್ಯ, ಈ ಕೆಲಸ ಬಿಜೆಪಿಯಿಂದ ಆಗಲೀ ಸಂಘದಿಂದ ಆಗಲೀ ಎಲ್ಲರನ್ನೂ ತಲುಪಲು ಆಗಲಿಲ್ಲ.

 

ಸಿದ್ದರಾಮಯ್ಯರ ಹಿಂದಿನ  ಸರಕಾರದ 1 ರೂಪಾಯಿ ಅಕ್ಕಿ, ಶಾದಿ ಭಾಗ್ಯ, ಮೊಟ್ಟೆ ಭಾಗ್ಯ, ಇಂದಿರಾ ಕ್ಯಾಂಟೀನ್ ಇವೆಲ್ಲಾ ಯೋಜನೆಗಳು ಇಂದಿಗೂ ಎಲ್ಲರಿಗೂ ನೆನಪಿದೆ. ಈ ಅವಧಿಯ ಬಿಜೆಪಿ ಸರಕಾರದಲ್ಲಿ ನೆನಪಿರುವುದು ಕಠಿಣ ಕ್ರಮಕೈಗೊಳ್ಳುತ್ತೆವೆ ಎನ್ನುವ ಡೈಲಾಗು, ನಳಿನ್ ಕುಮಾರರ ಕಾರು ಅಲ್ಲಾಡಿದ್ದು, ಕೆ ಜಿ ಹಳ್ಲೀ ಡಿಜಿ ಹಳ್ಳಿ ದೌರ್ಬಲ್ಯ, ಶಿವಮಿಗ್ಗ ಹಾಗೂ ನೆಟ್ಟಾರು ಪ್ರವೀಣ್ ಕೊಲೆ, ಹಾಗೂ 40%, ಕಮಿಶನ್ ಸರ್ಕಾರ ಹೀಗೆ ಸಾಲುಸಾಲು ನಕಾರಾತ್ಮಕ ವಿಷಯಗಳು. ಹಿಂದೂ ಪರವಾದ ಯಾವುದೇ ಯೋಜನೆ ನೆನಪಿಗೆ ಬರುತ್ತಿಲ್ಲ. ಗೋಹತ್ಯೆ ನಿಶೇಧ ಪೇಪರಿನಲ್ಲಿತ್ತು. ಅಲ್ಲಿ ಯಾರನ್ನೂ ಜೈಲಿನಲ್ಲಿ ಕೂರಿಸಲಾಗಲಿಲ್ಲ, ಮತಾಂತರ ನಿಷೇಧ ಕೇವಲ ಪೇಪರಿನಲ್ಲಿತ್ತು ಯಾರೂ ಜೈಲಿಗೆ ಹೊಗಲಿಲ್ಲ. ಕೆಜಿ ಹಳ್ಳಿ ಡಿಜಿ ಹಳ್ಳಿ ಉಗ್ರಗಾಮಿಗಳು ಮೆರವಣಿಗೆಯಲ್ಲಿ ಮನೆಗೆ ಬಂದರು. ಹೀಗೆ ಹಿಂದುಗಳು ಸರ್ಕಾರದಲ್ಲಿನ ನಿಷ್ಕ್ರಿಯತೆಯನ್ನಷ್ಟೇ ಗಮನಿಸಿದರು. ಸಕಾರಾತ್ಮಕ ಅಂಶಗಳು ಮುನ್ನೆಲೆಗೆ ಬರಲೇ ಇಲ್ಲ  ಬಿಜೆಪಿಗಾಗಲಿ ಸಂಘಕ್ಕಾಗಲಿ ತಾವು ನಿಂತಿರುವ ನೆಲ ಟೊಳ್ಳಾಗಿದೆ ಹಿಂದುಗಳು ತಮ್ಮ ದುರ್ಬಲ ಆಡಳಿತದಲ್ಲಿ ಹತಾಶೆ ಗೊಂಡಿದ್ದಾರೆ. ಎನ್ನುವ ಅನುಭವ ಆಗಲೇ ಇಲ್ಲ. ಕಾರು ಅಲ್ಲಾಡಿದ ಸಮಯದಲ್ಲಾದರೂ ಎಚ್ಚೆತ್ತು ಪಕ್ಷದ ಅಧ್ಯಕ್ಷರನ್ನು ಗೃಹಸಚಿವರನ್ನು ಬದಲಿಸಿದ್ದರೆ ಪರಿಸ್ಥಿತಿ ಸುಧಾರಿಸುತ್ತಿತ್ತು. ಆ ಕೆಲಸ ನಡೆಯಲಿಲ್ಲ. ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರಮೇಲಿನ ಪೋಲೀಸ್ ದೌರ್ಜನ್ಯದ ನಂತರವೂ ಇನ್ನೂ ಪಕ್ಷಾಧ್ಯಕ್ಷರ ರಾಜಿನಾಮೆ ಪಡೆಯಲಾಗಿಲ್ಲ ಇದು ದುರಂತ. ಹಾಗೂ ನಾಯಕತ್ವದಮೇಲೆಯೇ ಕಾರ್ಯಕರ್ತರು ವಿಶ್ವಾಸಕಳೆದುಕೊಳ್ಳುವಂತಾಗಿದೆ.

ಇಂತಹ ಸನ್ನಿವೇಶದಲ್ಲಿ ಚುನಾವಣೆ ಬಂತು ಕರ್ನಾಟಕದ ಸೀಟುಗಳ ಪಟ್ಟಿ ಹಿಡಿದುಕೊಂಡಿದ್ದ ಬಿ ಎಲ್ ಸಂತೋಷರು ಹೇಗಾದರೂ ಮಾಡಿ ಕರ್ನಾಟಕದ ಬಿಜೆಪಿಯಲ್ಲಿ ಜಾತಿ ಲಾಭಿ ಕೊನೆಗಾಣಿಸಬೇಕೆನ್ನುವ ಹಟಕ್ಕೆ ಬಿದ್ದಂತಿದ್ದರು. ಸಮುದಾಯದ ಹಿಡಿತಹೊಂದಿದವರು ಹಳೆತಲೆಗಳು ಅವರನ್ನು ಮನೆಗೆ ಕಳುಹಿಸಿ ಹೊಸಬರನ್ನು ಬೇಳೆಸೊಣ ಗುಜರಾತಿನಲ್ಲಿ ಈ ಯೋಜನೆ ಕೈಹಿಡಿದಿದೆ ಎಂಬುದಾಗಿ ಕಾರ್ಯಪ್ರವೃತ್ತರಾದರು. ಹೊಸಬರನ್ನು ತರುವ ಸಮಯದಲ್ಲಿ ಹಳಬರಿಗೆ ಪರ್ಯಾವಾಗಿ ಸಮರ್ಥರನ್ನೇ ಆಯ್ಕೆ ಮಾಡಬೇಕಿತ್ತು ಯಾರು ಎಲ್ಲಿ ಗೆಲ್ಲುತ್ತಾರೆಂದು ವಿಮರ್ಷೆ ಮಾಡಬೇಕಿತ್ತು. ಸಿಟು ತಪ್ಪಿಸುವವರನ್ನು ಮರ್ಯಾದೆಯಿಂದ ನಡೆಸಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಪರಸ್ಪರ ಕರೆದು ಮಾತಾಡಬೇಕಿತ್ತು. ಇದಾವುದೇ ಶಿಷ್ಟಾಚಾರವನ್ನೂ ಪಾಲಿಸದೆ. ಕೈಯ್ಯಲ್ಲಿ ಅಧಿಕಾರವಿದೆಯೆಂದು ಹಲವರನ್ನು ಅವರ ಹಿರಿತನವನ್ನು ಗೌರವಿಸದೆ ಅಗೌರವಯುತವಾಗಿ ಕಿತ್ತು ಬಿಸಾಡಲಾಯಿತು. ಕೆಲವರನ್ನು ಗೆಲ್ಲುವ ಸ್ಥಳ ತಪ್ಪಿಸಿ ಸೊಲುವ ಸ್ಥಳವನ್ನು ನೀಡಲಾಯಿತು. ಪುತ್ತೂರಿನಲ್ಲಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿಗಳ ಸ್ವಪ್ರತಿಷ್ಠೆಗೆ ಅರುಣ್ ಕುಮಾರ್ ಪುತ್ತಿರಿಗೆ ಸೀಟು ತಪ್ಪಿಸಿ ಹಿಂದುಗಳು ಬಿಜೆಪಿಯ ವಿರುದ್ಧನಿಲ್ಲುವಂತೆ ಮಾಡಿ ಬಿಜೆಪಿಯನ್ನು ಸರ್ವನಾಶ ಮಾಡಲಾಯಿತು. ಸವದಿಯವರನ್ನು ಅಂಡರ್ ಎಸ್ಟಿಮೇಟ್ ಮಾಡಿದ್ದರಿಂದ ಅವರ ಕ್ಷೇತ್ರದ ಸುತ್ತಲಿನ ಎಲ್ಲಾ ಕ್ಷೇತ್ರವನ್ನೂ ಕಳೆದುಕೊಳ್ಳುವಂತಾಯಿತು ಸ್ವತಃ ಅವರು 70 ಸಾವಿರಕ್ಕೂ ಹೆಚ್ಚುಮತದಿಂದ ಗೆದ್ದು ತಮ್ಮ ಸಾಮರ್ಥ್ಯ ತೋರಿಸಿದರು. ಶೆಟ್ಟರ್ ಹೊರಹೋಗಿ ಬಿಜೆಪಿ ಲಿಂಗಾಯತರನ್ನು ಮುಗಿಸಲು ಪ್ರಯತ್ನಿಸುತ್ತಿದೆ ಎನ್ನುವ ಭಾವನೆಯನ್ನು ಅವರ ಸಮಾಜದಲ್ಲಿ ಬಿತ್ತತೊಡಗಿದರು. ಕಾಂಗ್ರೇಸು ಬಿಜೆಪಿ ಸೋಮಣ್ಣರನ್ನು ಹರಕೆಯ ಕುರಿಯಾಗಿಸುತ್ತದೆ ಎಂದು ಹೇಳ ತೊಡಗಿದರು. ಸೊಮಣ್ಣ ಎರಡು ಕಡೆ ಸ್ಪರ್ಧಿಸಿಯು ಸೋತರು.

ಇಷ್ಟೆಲ್ಲಾ ಬೆಳವಣಿಗೆಯನ್ನು ನೋಡಿದಾಗ ಅರಿವಾಗುವುದು ಪಕ್ಷದ ಸೋಲು ಗೆಲುವು ನಾಯಕತ್ವದಲ್ಲಿದೆ ಎನ್ನುವುದು. ಮೋದಿಜಿ, ಯೋಗಿಜಿ, ಇದನ್ನು ತೋರಿಸಿಕೊಟ್ಟಿದ್ದಾರೆ. ನಾಯಕ ನಾದವನು ಹೇಗಿರಬೇಕೆನ್ನುವುದಕ್ಕೆ ಇವರು ಉದಾಹರಣೆಯಾಗಿದ್ದಾರೆ. ಡಮ್ಮಿಗಳನ್ನು ಉನ್ನತ ಸ್ಥಾನದಲ್ಲಿ ಕೂರಿಸಿ ಬಿಗ್ ಭಾಸ್ ರೀತಿಯಲ್ಲಿ ತಾನು ಪಕ್ಷ ನಡೆಸುತ್ತೇನೆಂದು ಚಿಂತಿಸುವವರು ಮೂರ್ಖರು. ಕಾಡಿನ ರಾಜ ಸಿಂಹನೇ ಹೊರತು ನರಿ ಕುರಿಗಳಾಗಲು ಸಾಧ್ಯವಿಲ್ಲ. ಹಿಂಬಾಲಕರ ಸಭೆ ಇದನ್ನು ಒಪ್ಪಿದರೂ ಹಿಂದೂ ಸಮಾಜ ಒಪ್ಪುವುದಿಲ್ಲ. ಸಾಮಾನ್ಯ ಕಾರ್ಯಕರ್ತರು ಇದನ್ನು ಒಪ್ಪುವುದಿಲ್ಲ. ಇದು ಪುತ್ತೂರಿನಲ್ಲಿ ಅನುಭವಕ್ಕೆ ಬಂದಿದೆ. ಈಗ ಚುನಾವಣೆ ಮುಗಿದಿದೆ ಇನ್ನಾದರೂ ಸಮರ್ಥರನ್ನು ಪ್ರಾಮಾಣಿಕರನ್ನು ಹೋರಾಟದ ಕಿಚ್ಚಿರುವವರನ್ನು ಭ್ರಷ್ಟಾಚಾರ ರಹಿತರನ್ನು ವಿರೋಧಪಕ್ಷದ ನಾಯಕ ಹಾಗು ಪಕ್ಷದ ಅಧ್ಯಕ್ಷರನ್ನಾಗಿ ಆರಿಸಿ. ಮುಂದಿನ ವರ್ಷದ ಚುನಾವಣೆಗೆ ಸಿದ್ಧರಾಗಬೇಕಿದೆ. ಈಗ ಸಧ್ಯಕ್ಕೆ ಕಣ್ಣಿಗೆ ಕಾಣುವ, ಹಿಂದೂ ಕಾರ್ಯಕರ್ತರು ವಿಶ್ವಾಸ ಇಡಬಹುದಾದ ಪ್ರಚಾರದಲ್ಲಿಯೂ ಇರುವ ತಮ್ಮದೇ ಒಂದು ವ್ಯಕ್ತಿತ್ವವನ್ನು ರೂಪಿಸಿಕೊಂಡುರುವ  ಮುಂಚೂಣಿಯಲ್ಲಿರುವ ಹಿರಿಯರೂ ಆಗಿರುವ ಯೋಗ್ಯರೆಂದರೆ ಬಸವನ ಗೌಡ ಯತ್ನಾಳ್ ಮಾತ್ರ. ಅನಂತಕುಮಾರ್ ಹೆಗಡೆ ಸಮಾಜವನ್ನು ಎಬ್ಬಿಸುವ ಸಾಮರ್ಥ್ಯ ಇದ್ದರೂ ಅನಾರೊಗ್ಯ ಮುಂತಾದ ಕಾರಣದಿಂದ ಸಕ್ರಿಯತೆಯಿಂದ ಹಿಂದೆ ಸರಿದಿದ್ದಾರೆ. ಇನ್ನು ಹಿಂದುಗಳು ವಿಶ್ವಾಸ ಇಡಬಹುದಾದವರು ಯಾರು ಇದ್ದಾರೆ? ಪುನಃ ಜಾತಿ ಸಮೀಕರಣ ಎನ್ನುತ್ತಾ ಪುತ್ತೂರಿನಲ್ಲಿ ಮಾಡಿದಂತೆ ಅವಿವೇಕವನ್ನು ಪ್ರದರ್ಷಿಸಿದರೆ ಪಕ್ಷ   ಕರ್ನಾಟಕದಲ್ಲಿ ಶಾಶ್ವತವಾಗಿ ನೆಲೆಕಳೆದುಕೊಳ್ಳುವುದರಲ್ಲಿ ಸಂಶಯ ಇಲ್ಲ. ಪಕ್ಷದ ಅಧ್ಯಕ್ಷತೆಗೆ ಶೋಭಾ ಕರಂದ್ಲಾಜೆ ಹೆಸರು ಸುನೀಲ್ ಕುಮಾರ್ ಹೆಸರು ಓಡಾಡುತ್ತಿದೆ ಎನ್ನಲಾಗುತ್ತಿದೆ. ಇವರಿಬ್ಬರೂ ಸ್ಥಳಿಯರ ವಿಶ್ವಾಸ ಗಳಿಸಿಲ್ಲ ಇವರು ಇನ್ನೊಬ್ಬರು ನಳಿನ್ ಕುಮಾರ್ ಆಗಬಹುದು. ನಾಯಕರ ಮಾತು ವರ್ತನೆ ಒಂದೇ ರೀತಿ ಇರಬೇಕು. ಕೇವಲ ಭಾಷಣದ ಹಿಂದುತ್ವ ಇಂದು ತಿರಸ್ಕೃತವಾಗಿದೆ. ಪುತ್ತಿಲ ರಂತಹವರನ್ನು ಬೆಳೆಯಲು ಬಿಡಿ. ಜಿಹಾದಿಗಳೊಂದಿಗೆ ಸೇರಿಕೊಂಡು ಉದ್ಯಮ ಸ್ಥಾಪಿಸುವ ಬಿಜೆಪಿ ನಾಯಕರನ್ನು ಪಕ್ಷ ದೂರ ಇಡಲಿ. ಹಿಂದೂ ಕಾರ್ಯಕರ್ತರು ಎಲ್ಲವನ್ನೂ ಗಮನಿಸುತ್ತಿದ್ದಾರೆನ್ನುವ ಅರಿವು ಪಕ್ಷಕ್ಕೂ ಸಂಘಕ್ಕೂ ಶಾಸಕರಿಗೂ ಇರಲಿ. ಹಿಂದುಗಳಿಗೆ ಬೇರೆಗತಿ ಇಲ್ಲ ಅವರಿಗೆ ಬಿಜೆಪಿ ಒಂದೇಗತಿ ಎನ್ನುವ ಬಿಜೆಪಿಗರ ಉದ್ಧಟತನಕ್ಕೆ ಪುತ್ತೂರಿನಲ್ಲಿ ಉತ್ತರ ಸಿಕ್ಕಿದೆ. ಸಮಗ್ರ ಕರ್ನಾಟಕದಲ್ಲಿ ಉತ್ತರ ಸಿಕ್ಕಿದೆ. ಹಿಂದೆ ಕಾಂಗ್ರೇಸ್ ಅಲ್ಪಸಂಖ್ಯಾತರನ್ನು ಬಳಸಿಕೊಂಡು ತನ್ನ ಬೇಳೆ ಬೇಯಿಸಿಕೊಂಡಂತೆ ಇಂದು ಬಿಜೆಪಿ ಹಿಂದೂ ಕಾರ್ಯಕರ್ತರನ್ನು ತನ್ನ ಬೇಳೆಬೇಯಿಸಿಕೊಳ್ಳಲು ಬಳಸುತ್ತಿದೆಯೆಂಬ ಭಾವನೆ ಎಲ್ಲಾ ಹಿಂದೂ ಕಾರ್ಯಕರ್ತರಲ್ಲಿಯೂ ಮೂಡುತ್ತಿದೆ. ಕರ್ನಾಟಕದ ಬಿಜೆಪಿಗರಲ್ಲಿ ಪ್ರಾಮಾಣಿಕ ಹಿಂದುತ್ವ ಮರೆಯಾಗಿದೆ. ಬಿಜೆಪಿ ಸರ್ಕಾರದಲ್ಲಿಕೂಡಾ ಸಾರ್ವಜನಿಕ ದೇವಾಲಯಗಳಿಗೆ ಪಾರ್ಕಿಂಗ್ ಶುಲ್ಕವನ್ನು ಭಕ್ತಾದಿಗಳಿಂದ ವಸೂಲಿಮಾಡುವುದು ನಿಂತಿರಲಿಲ್ಲ. ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರಿಗೆ ಬಿಜೆಪಿಯ ಮಾಜಿ ಎಮ್ಮೆಲ್ಲೆ ಹಾಗೂ ಹಾಲಿ ಸ್ಪರ್ಧಿ ಒಟ್ಟಾಗಿ ಧಿಕ್ಕಾರ ಕೂಗುತ್ತಿದ್ದರೆ ಬಿಜೆಪಿ ಯಾಗಲೀ ಸಂಘವಾಗಲೀ ಮಾತನಾಡುತ್ತಿಲ್ಲ. ಇದರ ಪರಿಣಾಮ ಹಿಂದೂ ಕಾರ್ಯಕರ್ತರಿಗೆ ಪೋಲೀಸರಿಂದ ಮಾರಣಾಂತಿಕ ಹಲ್ಲೆ ನಡೆಯಿತು.  ಇದಕ್ಕೆ ಕಾರಣ ಅಯೋಗ್ಯರಾದ ಬಿಜೆಪಿಯ ಮುಖಂಡರು ಎನ್ನುವುದು ಕಣ್ಣಿಗೆ ಕಾಣುವ ಸತ್ಯ. ಸಂಘದ ಚಿಂತನೆ ರಾಷ್ಟ್ರನಿಷ್ಠೆಯೊಮದಿಗೆ ಸಂಘದ ನೆರಳಿನಲ್ಲಿ ಬೆಳೆದ ಬಿಜೆಪಿಯೂ ರಾಷ್ಟ್ರನಿಷ್ಠವಾಗಿರಬೇಕುತಾನೆ? ಇದು ಈಗ ಜಾತಿ ಸಮೀಕರಣಕ್ಕೆ ಇಳಿದಿದೆ. ಮೀಸಲಾತಿ ಒಳಮೀಸಲಾತಿ ಜಾತೀವಾರು ಸಮೀಕರನ ಇವಾವುದೂ ಬೆಜೆಪಿಯನ್ನು ಗೆಲ್ಲಿಸಲಾರದು. ಪ್ರಖರ ರಾಷ್ಟ್ರನಿಷ್ಟ ಕಾರ್ಯಕರ್ತರೇ ನಾಯಕರಾಗಬೇಕು. ಹೆರಿನೊಂದಿಗೆ ಜಾತಿ ಪ್ರದರ್ಷಿಸುವ ಯಾವುದೇ ವ್ಯಕ್ತಿಗೆ ರಾಜಕೀಯವಾಗಿ ಬಿಜೆಪಿಯಲ್ಲಿ ಸೀಟು ನೀಡಬಾರದು. ರಾಜಕೀಯವಾದ ಅಪೇಕ್ಷೆ ಇದ್ದರೆ ಇಂತಹ ನಾಯಕರು ತಮ್ಮ ಹೆಸರಿನೊಂದಿಗಿರುವ ಜಾತಿ ಅನಿಷ್ಟವನ್ನು ಬದಲಾಯಿಸಿಕೊಳ್ಳಬೇಕು. ಯಾವುದೇ ವ್ಯಕ್ತಿ ಜಾತಿಯನ್ನು ಎದುರಿಟ್ಟು ಶಕ್ತಿಪ್ರದರ್ಷನಕ್ಕೆ ನೋಡಿದರೆ ಅಂತಹವನನ್ನು ಕೂಡಲೇ ತಿದ್ದಬೇಕು. ಶಿಸ್ತುಕ್ರಮಕೈಗೊಳ್ಳಬೇಕು. ಜಾತಿನಿಷ್ಟೆಯಿಂದ ಸಮಾಜವು ಧರ್ಮ ನಿಷ್ಟೆ ಹಾಗೂ ದೇಶನಿಷ್ಟೆಯತ್ತ ಹೊರಳಲು ಪ್ರಚೋದಿಸಬೇಕು. ಸತ್ಯಮೇವ ಜಯತೆ ಎನ್ನುವುದು ಪುರಾತನವಾದ ಮಾತು. ಜಾತಿಯನ್ನು ಒಡೆಯುವುದು ಕಾಂಗ್ರೇಸಿನ ರಾಜನೀತಿ. ಜಾತೀಯತೆಯನ್ನು ಅಳಿಸಿ ರಾಷ್ಟ್ರೀಯತೆಯನ್ನು ಮುನ್ನೆಲೆಗೆ ತರುವುದು ಬಿಜೆಪಿಯ ಮುಖ್ಯಧ್ಯೇಯವಾಗಬೇಕು ಆಗಮಾತ್ರ  ಬಿಜೆಪಿಗೂ ಭಾರತಕ್ಕೂ ಭವಿಷ್ಯ ಇದೆ. ಇಲ್ಲವಾದರೆ ಧರ್ಮವೂ ದೇಶವೂ ಅಂತಿಮವಾಗಿ ಸರ್ವಸ್ವವೂ ನಾಶವಾಗಲಿದೆ. ಮುಂದಿನ ಸಾಲಿನಲ್ಲಿರುವ ನಾಯಕರಿಗೆ ಯಾವಾಗಬುದ್ಧಿಬರುತ್ತದೋ ದೇವರೇ ಬಲ್ಲ. ಕರ್ನಾಟಕದ ಹಿಂದುಗಳನ್ನೂ ಆ ದೇವರೇ ಕಾಪಾಡಬೇಕು.

-ಶ್ರೀಜಿ

ಜೈ ಹಿಂದ್ ಜೈಶ್ರೀರಾಮ್

Leave a Reply