ಮುಂದಿನ ಮತಭಾರತದಲ್ಲಿ ನಮ್ಮಪಾತ್ರವೇನು?

You are currently viewing ಮುಂದಿನ ಮತಭಾರತದಲ್ಲಿ ನಮ್ಮಪಾತ್ರವೇನು?

“ಲೋಕಕ್ಷೇತ್ರೇ ಮತಕ್ಷೇತ್ರೇ”       ನಾನೂ ರಾಷ್ಟ್ರವಾದಿ ಎನ್ನುವವರು ಚಿಂತಿಸಬೇಕು. ನಮ್ಮ ದೇಶವು ಜ್ಞಾನ ಹಾಗೂ ಸಂಸ್ಕೃತಿಯಲ್ಲಿ ವಿಶ್ವದಲ್ಲಿಯೇ ಅಗ್ರಗಣ್ಯವಾಗಿತ್ತು. ಪ್ರಚೀನ ಭಾರತವು ವಿಶ್ವಕ್ಕೇ ಗುರುವಿನ ಸ್ಥಾನದಲ್ಲಿತ್ತು. ಪ್ರಪಂಚಕ್ಕೇ ಜ್ಞಾನದಾನವನ್ನುಮಾಡುತ್ತಾ ಜಗತ್ತಿಗೇ ಮಾದರಿಯಾಗಿತ್ತು. ಮುಂದೆ ದುರ್ಜನರ ಆಕ್ರಮಣದಿಂದ ನಮ್ಮ ದೇಶದ ಲೂಟಿಯಾಯಿತು. ನಮ್ಮ ಸಂಸ್ಕೃತಿಯ ಮೇಲೆ ಅನೇಕರೀತಿಯ ದಾಳಿಗಳು ನಡೆದವು. ನಮ್ಮ ದೇವಾಲಯಗಳನ್ನು ನಾಶಮಾಡಲಾಯಿತು. ಈಗಲೂ ಹಿಂದೂಸಂಸ್ಕೃತಿಯನ್ನು ತುಳಿಯಲು, ನಾಶಮಾಡಲು ದೇಶದೊಳಗಿನ ಹಾಗೂ ಹೊರಗಿನ ದುರ್ಜಜನರು ಮತ್ತು ಮಿಶ್ರತಳಿಯ ವಿಶೇಷ ಜನಗಳೂ ನಿರಂತರ ಕ್ರಿಯಾಶೀಲರಾಗಿದ್ದಾರೆ. ಹಿಂದುಗಳಿಗೆ ನಿಜವಾದ ಸ್ವಾತಂತ್ರ್ಯಬಂದಿದ್ದು 2014 ನೇ ಇಸವಿಯಲ್ಲಿ ಎಂಬುದಾಗಿ ಅನೇಕ ಹಿರಿಯರು ತಮ್ಮ ಮಾತುಗಳಲ್ಲಿ ಹೇಳಿರುವುದನ್ನೂ ನಾವು ಕೇಳಿದ್ದೇವೆ. ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಹಾಗೂ ಪರಕೀಯರ ಆಡಳಿತದ ದೌರ್ಜನ್ಯ ದಿಂದ ತಪ್ಪಿಸಿಕೊಳ್ಳುವುದು ನಮಗೆ ಅತಿ ಮುಖ್ಯವಾಗಿದೆ. ಇವೆರಡೂ ಇಂದು ನಮ್ಮಅಧೀನದಲ್ಲಿಯೇ ಇದೆ.

ಪ್ರಜಾಪ್ರಭುತ್ವದಲ್ಲಿ ನಮ್ಮನ್ನು ರಕ್ಷಿಸುವ ರಾಜನನ್ನು ಆರಿಸುವವರು ನಾವೇ ಆಗಿದ್ದೇವೆ.  ರಾಜರಲ್ಲೂ ಎರಡು ರೀತಿ ಇರುತ್ತಾರೆ. ಸ್ವಯಂ ಕೆಲಸಮಾಡಿ ಊಟಮಾಡುವವನು ಹಾಗೂ ಬಿಟ್ಟಿಸಿಕ್ಕಿದ್ದನ್ನು ಬಾಚಿತಿನ್ನುವವನು. ಈ ಎರಡರಲ್ಲಿ ಶ್ರೀಕೃಷ್ಣನು ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷುಕದಾಚನ ಎಂಬುದಾಗಿ ನಿಷ್ಕಾಮ ಕರ್ಮವನ್ನು ಮಾಡಲು ನಮಗೆ ಹಿಂದುಗಳಿಗೆ ಬೋಧಿಸಿದ್ದಾನೆ. ನಿಷ್ಕಾಮ ಕರ್ಮವನ್ನು ಆತ್ಮಸಂತೋಷಕ್ಕಾಗಿಯೂ, ದೇಶ ಹಾಗೂ ಧರ್ಮದ ರಕ್ಷಣೆಗಾಗಿಯೂ ನಾವು ಮಾಡಬೇಕು. ಮನುಷ್ಯನ ಜೀವನ ಕೇವಲ ತಿಂದು ಬದುಕುವುದಕ್ಕಾಗಿ ಇರುವುದಲ್ಲ. ಹೆಸರು, ಅಧಿಕಾರ, ಸಂಪತ್ತು, ಸೌಂದರ್ಯ ಇವೆಲ್ಲವೂ ಕ್ಷಣಿಕ ಸಂತೋಷದಾಯಕ ಆದರೆ ಫಲಾಪೇಕ್ಷೆ ಇಲ್ಲದ ಕೆಲಸ ಶಾಶ್ವತ ಆನಂದವನ್ನು ನೀಡುತ್ತದೆ. ಆದುದರಿಂದ ನಾವೆಲ್ಲರೂ ನಮ್ಮ ದೇಶದ ಅಭ್ಯುದಯಕ್ಕಾಗಿ, ಸನಾತನಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ,  ನಮ್ಮ ಜೀವಿತಾವಧಿಯ ಸಾರ್ಥಕತೆಗಾಗಿ ಹಾಗೂ ಹಾಗೂ ನಮ್ಮ ಮುಂದಿನ ಸಂತತಿಯ ಉಜ್ವಲ ಭವಿಷ್ಯಕ್ಕಾಗಿ ಇಂದಿನಿಂದ ಒಂದೂವರೆ ತಿಂಗಳು ನಿಸ್ವಾರ್ಥವಾಗಿ ದೇಶಸೇವೆಯ ಕೆಲಸವನ್ನು ಮಾಡಬೇಕಿದೆ.

“ಯಥಾ ರಾಜಾ ತಥಾ ಪ್ರಜಾ” ಎಂಬ ಮಾತೊಂದಿದೆ ಇದು ರಾಜರ ಆಡಳಿತದ ಕಾಲದ ಗಾದೆ. ಇಂದು ಪ್ರಜಾಪ್ರಭುತ್ವದ ಕಾಲ ಇದರಲ್ಲಿ ಗಾದೆ ಪರಿವರ್ತಿತ ಗೊಂಡಿದೆ ಯಥಾ ಪ್ರಜಾ ತಥಾ ರಾಜ ಎಂಬಂತಾಗಿದೆ. ಭಾರತದಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ತಲಾ ಹತ್ತುವರ್ಷಗಳಂತೆ ನಾವು ಎರಡು ರಾಜಕೀಯ ಆಡಳಿತವನ್ನು ನೋಡಿದ್ದೇವೆ. ಮೊದಲನೆಯದು ಗುಲಾಮೀ ಮನಸ್ಥಿತಿಯ, ವಿದೇಶೀ ಚಿಂತನೆಯ, ಭ್ರಷ್ಟಾಚಾರ ಸಹಿತವಾದ ದೇಶ-ಧರ್ಮ-ಸಂಸ್ಕೃತಿ-ಪರಂಪರೆ ಎಲ್ಲವನ್ನೂ ವಿರೋಧಿಸುವ ಭಯೋತ್ಪಾದಕರನ್ನು, ಶತೃದೇಶಗಳನ್ನು, ರಾಷ್ಟವಿರೋಧಿಗಳನ್ನು ಓಲೈಸುವ ರಕ್ಷಿಸುವ ಹಾಗೂ ಪಾಲಿಸುವ ಹಿಂದೂವಿರೋಧಿ ನಕಾರಾತ್ಮಕ ಆಡಳಿತ. ಇನ್ನೊಂದು ಈ ನೆಲದ ಸಂಸ್ಕೃತಿ-ಪರಂಪರೆ-ಚರಿತ್ರೆ-ಸ್ವಾಭಿಮಾನ ಇವುಗಳನ್ನು ರಕ್ಷಿಸುವ, ಶತೃಗಳನ್ನು ಅವರ ಮನೆಯಂಗಳದಲ್ಲಿಯೇ ಹೊಡೆದುರುಳಿಸುವ, ಭಯೋತ್ಪಾದಕರನ್ನು ದಾರಿಯಲ್ಲಿಯೇ ಯಮಪುರಿಗೆ ಅಟ್ಟುವ, ಭ್ರಷ್ಟರನ್ನು ಯಾವುದೇ ಓಲೈಕೆ ಇಲ್ಲದೆ ಸೆರೆಮನೆಗೆ ಕಳುಹಿಸುವ ಹಿಂದೂಕಾರ್ಯಕರ್ತರಿಗೆ ಜೀವನದ ಆಸೆಯನ್ನು ಚಿಗುರಿಸಿದ ಸಮಗ್ರ ಭಾರತೀಯರ ಬದುಕಿಗೆ ಬೆಳಕುಚೆಲ್ಲುವ ಅಭಿವೃದ್ಧಿಯೊಂದಿಗೆ ಸಾಗುತ್ತಿರುವ ಚೇತೋಹಾರಿ ಆಡಳಿತ. ಇವೆರಡನ್ನೂ ನಾವು ನೋಡಿದವರಾಗಿದ್ದೇವೆ.

ಈಗ ನಮ್ಮ ಮುಂದೆ ಎರಡು ಉದಾಹಣೆಗಳಿವೆ. ಒಂದನೆಯದು, ದಿನದಲ್ಲಿ ಹದಿನೆಂಟು ಗಂಟೆ ಕೆಲಸಮಾಡವ ತನ್ಮೂಲಕ ದುಡಿದು ತಿನ್ನುವವರಿಗೆ ಪ್ರೇರಣೆಯನ್ನು ನೀಡುತ್ತಿರುವ ದೇಹಲಿಯ ಮಹಾರಾಜನ ಮಾದರಿ. ಇನ್ನೊಂದು ಯಾರೋ ಕೂಡಿಟ್ಟಿದ್ದನ್ನು ಬಿಟ್ಟಿ ಹಂಚುತ್ತಾ ದುಡಿಯುವವರ ಜೇಬುಕತ್ತರಿಸುತ್ತಾ, ಸೊಮಾರಿಗಳನ್ನು ಬೆಳೆಸುತ್ತಾ, ರಾಜ್ಯವನ್ನು ಆರ್ಥಿಕವಾಗಿ ದಿವಾಳಿತೆಗೆಯುತ್ತಾ ಸಾಗುವ ಬೆಂಗಳೂರಿನ ಮರಿ ರಾಜನ ಮಾದರಿ. ನಮ್ಮೆದುರಿಗಿನ ಈ ಎರಡು ಮಾದರಿಗಳಲ್ಲಿ ನಾವು ಯಾವ ರಾಜನ ವಿಚಾರವನ್ನು ಬೆಂಬಲಿಸಬೇಕೆನ್ನುವ ಅರಿವು ನಮಗೆ ಸರಿಯಾಗಿ ಇರಬೇಕು. ಎದುರಿಗಿರುವ ಮಹಾಭಾರತದ ಲೋಕತಂತ್ರದ ಮತಯುದ್ಧದಲ್ಲಿ ನಾವು ಶ್ರೀಕೃಷ್ಣ, ಶ್ರೀರಾಮರ ಆದರ್ಷ ವಿಚಾರಗಳನ್ನೊಳಗೊಂಡ ರಾಷ್ಟ್ರಾಧಾರಿತ ಧರ್ಮಪಥದಲ್ಲಿ ನಡೆಯುವ ಸಾತ್ವಿಕ ಪಕ್ಷದೊಂದಿಗೆ ನಿಲ್ಲಬೇಕಾ? ರಾಮಾಯಣವೇ ಸುಳ್ಳು ಮಹಾಭಾರತವೇ ಸುಳ್ಳು ಅಥವಾ  ಶ್ರೀರಾಮ, ಶ್ರೀಕೃಷ್ಣರ ಅಸ್ತಿತ್ವವೇ ಸುಳ್ಳು, ಇವರ ದೇವಾಲಯಗಳನ್ನು ನಾಶಮಾಡುತ್ತೇವೆ. ಎನ್ನುವ ದೇಶದ್ರೋಹೀ ವಿದೇಶೀ ತಾಮಸ ಚಿಂತಕರ ಅಧರ್ಮದ ಪಕ್ಷವನ್ನು ಬೆಂಬಲಿಸಬೇಕಾ? ಎನ್ನುವುದು ಪ್ರಶ್ನೆ! ಇದರ ಉತ್ತರ ನಮಗೆ ಸ್ಪಷ್ಟವಾಗಿ ಗೊತ್ತಿರಬೇಕು.

ತ್ರೇತಾಯಗದಲ್ಲಿ  ಸೀತಾಮಾತೆಯ ರಕ್ಷಣೆಗಾಗಿ ರಾಮ ರಾವಣರ ಮಧ್ಯೆ ಅಂದರೆ ನರ ಮತ್ತು ರಾಕ್ಷಸರ ನಡುವೆ ಯುದ್ಧನಡೆದಿತ್ತು. ದ್ವಾಪರಾಯುಗದಲ್ಲಿ ಧರ್ಮದ ರಕ್ಷಣೆಗಾಗಿ ಪಾಂಡವರ ಕೌರವರ ಮಧ್ಯೆ ಅಂದರೆ ಧರ್ಮ ಅಧರ್ಮದ ನಡುವೆ ಯುದ್ಧನಡೆದಿತ್ತು. ಕಲಿಯುಗದಲ್ಲಿ ಇಂದು ಭಾರತಮಾತೆಯ ರಕ್ಷಣೆಗಾಗಿ ಎರಡು ಭಿನ್ನ ಚಿಂತನೆಗಳ ನೆಲೆಯಲ್ಲಿ ನರೇಂದ್ರ ಹಾಗೂ ಕರೇಂದ್ರರ ನಡುವೆ ರಣರಂಗ ಸಿದ್ಧವಾಗಿದೆ. ಭಾರತದೇಶದ, ಸಂಸ್ಕೃತಿ ಹಾಗೂ ಪರಂಪರೆಯ ರಕ್ಷಣೆಯ ಸಾತ್ವಿಕ ಚಿಂತನೆ ಒಂದೆಡೆಯಾದರೆ, ಇದಕ್ಕೆ ಪ್ರತಿಯಾಗಿ ಸಜ್ಜನರ ಸಂಪೂರ್ಣ ನಾಶದೊಂದಿಗೆ ವಿದೇಶೀ ಮತಾಂತರವಾದಿಗಳನ್ನು, ಭಯೋತ್ಪಾದಕ ಜಿಹಾದಿಗಳನ್ನು, ನಗರನಕ್ಸಲರನ್ನೂ ಬೆಂಬಲಿಸುವ, ರಕ್ಷಿಸುವ ಹಾಗೂ ಬಿಟ್ಟಿಭಾಗ್ಯಗಳಿಂದ ಸಜ್ಜನರ ಸಂಪತ್ತನ್ನು ಬೇಕಾಬಿಟ್ಟಿ ಭಕ್ಷಿಸುವ  ಹೇಯ ತಾಮಸ ಚಿಂತನೆ. ಈ ಎರಡು ಚಿಂತನೆಗಳ ನಡುವೆ ಸದ್ಯದಲ್ಲಿಯೇ ತಾರ್ಕಿಕ ನೆಲೆಗಟ್ಟಿನಲ್ಲಿ ಮತಯುದ್ಧನಡೆಯಲಿದೆ.

ನಮ್ಮ ಹಿರಿಯರು ಎಂದೋ ಮಾಡಿದ ತಪ್ಪಿನಿಂದ ಒಂದುಸಾವಿರವರುಷ ನಾವು ಪರಕೀಯರಿಂದ ದಾಸ್ಯವನ್ನು ಅನುಭವಿಸಿದೆವು. ಇಪ್ಪತ್ತು ವರ್ಷಗಳ ಹಿಂದೆ ಮಾಡಿದ ತಪ್ಪಿನಿಂದ ಹತ್ತು ವರ್ಷ ಮಾತನಾಡದ ಮೂಕ ರಾಜನನ್ನು ದೆಹಲಿಯಲ್ಲಿ ಕುಳ್ಳಿರಿಸಿ A ಇಂದ  Z  ವರೆಗಿನ ಎಲ್ಲ ಅಕ್ಷರಗಳಲ್ಲೂ ಭ್ರಷ್ಟಾಚಾರ ಮಾಡಿ  ದೇಶದ ಬೊಕ್ಕಸದ ಲಕ್ಷಾಂತರ ಕೋಟಿರೂಪಾಯಿಗಳನ್ನು ಲೂಟಿಮಾಡಿದಕರೇಂದ್ರರ ಕಾಲವನ್ನೂ ನೋಡಿದೆವು. ನಂತರ 2014 ರಲ್ಲಿ ದೇಶದ ಸಂಸ್ಕೃತಿಯನ್ನು ಸ್ವತಂ ಆಚರಣೆಯಲ್ಲಿ ಅಳವಡಿಸಿಕೊಂಡು ಭಾರತದ ಪಾರಂಪರಿಕ ಶ್ರೇಷ್ಠತೆಯನ್ನು ವಿಶ್ವಕ್ಕೇ ಪರಿಚಯಿಸುತ್ತಾ ಈ ಸ್ವದೇಶವನ್ನು ಪರಮವೈಭವದೆಡೆಗೆ ಕೊಂಡೊಯ್ಯುತ್ತಿರುವ ವಿಶ್ವದಲ್ಲಿಯೇ ಭಾರತವನ್ನು ಗುರುವಿನ ಸ್ಥಾನದಲ್ಲಿ ಪುನಃಪ್ರತಿಷ್ಠಾಪಿಸಲು ಹಗಲಿರುಳೆನ್ನದೆ ಕಳೆದ ಇಪ್ಪತ್ತೈದು ವರ್ಷಗಳಿಂದ ರಜೆಇಲ್ಲದೆ ದುಡಿಯುತ್ತಿರುವ ಕಾಯಕ ಸಂತ ನರೇಂದ್ರನನ್ನೂ ರಾಜನಾಗಿ ನೋಡಿದ್ದೇವೆ.

ಆತ್ಮಸಾಕ್ಷಿ ಒಪ್ಪುವಂತಹ ಧೀಮಂತ ಈ ವ್ಯಕ್ತಿಯು ಮುಂದೆಯೂ ಭಾರತದ ಸ್ವಾಭಿಮಾನದ ಪ್ರತೀಕವಾಗಿ ದೆಹಲಿಯ ರಾಜಸಿಂಹಾಸನದಲ್ಲಿ ವಿರಾಜಮಾನರಾಗಬೇಕಿದ್ದಲ್ಲಿ ನಾವೆಲ್ಲರೂ ಮುಂದಿನ ಒಂದೂವರೆ ತಿಂಗಳು ನಡೆಯುವ ಮತದಾನದ ಮಹಾಯುದ್ಧದಲ್ಲಿ ವೀರ ಸೈನಿಕರಾಗಿ ಹೋರಾಡಬೇಕು. ಮನೆಯಲ್ಲಿ ಇಂದು ನಾವು ನೆಮ್ಮದಿಯಲ್ಲಿ ಊಟಮಾಡುತ್ತಾ ಇದ್ದರೆ! ನಿಶ್ಚಿಂತೆಯಿಂದ ನಿದ್ದೆಮಾಡುತ್ತಿದ್ದರೆ! ಮನೆಯಿಂದ ಹೊರಹೋದ ಹಿಂದೂ ಸಹೋದರಿಯರು ಮತ್ತು ತಾಯಂದಿರು ಸಂಜೆ ಸುರಕ್ಷಿತವಾಗಿ ಮನೆಸೇರುತ್ತಾರೆ ಎನ್ನುವ ಸ್ವಲ್ಪವಾದರೂ ಧೈರ್ಯನಮ್ಮಲ್ಲಿದ್ದರೆ! ಅದಕ್ಕೆ ಶಿವಭಕ್ತನೂ, ರಾಮಭಕ್ತನೂ, ಆಗಿರುವ ಹತ್ತು ವರ್ಷಗಳಿಂದ ನಿರಂತರ ನೂರಾ ನಲವತ್ತು ಕೋಟಿ ಭಾರತೀಯರ ಹಿತವನ್ನೇ ಚಿಂತಿಸುತ್ತಾ ದೆಹಲಿಯಲ್ಲಿ ವಿರಾಮವಿಲ್ಲದೆ ಅಹರ್ನಿಶಿ ಕರ್ತವ್ಯವೆನ್ನುವ ಚ್ಯುತಿಇಲ್ಲದ ಕಠೋರವಾದ ತಪಸ್ಸನ್ನಾಚರಿಸುತ್ತಿರುವ ಮಹಾರಾಜನಾಗಿದ್ದೂ ಜನಸೇವಕನೆಂದು ಕರೆದುಕೊಳ್ಳುತ್ತಿರುವ ಅದಕ್ಕನುಗುಣವಾಗಿ ಬದುಕುತ್ತಿರುವ ನರೇಂದ್ರನೇ ಕಾರಣ. ಆದುದರಿಂದ ಆತನ ಅಧಿಕಾರದ ರಕ್ಷಣೆಯೇ ನಮ್ಮೆಲ್ಲರ ಆತ್ಮರಕ್ಷಣೆಯಾಗಿದೆ. ಈ ಪವಿತ್ರಧರ್ಮಕಾರ್ಯಕ್ಕಾಗಿ ನಾವೆಲ್ಲರೂ ಮುಂದಿನ ನಲವತ್ತೈದು ದಿನಗಳಕಾಲ ಸುಖದ ಸುಪ್ಪತ್ತಿಗೆಯಿಂದ ಹಾಗೂ ಸ್ವಾರ್ಥಚಿಂತನೆಗಳಿಂದ ಹೊರಬರಬೇಕು. ನಾವು ಸುರಕ್ಷಿತವಾಗಿದ್ದೇವೆ ಎನ್ನುವ ಮಾಯಾಭ್ರಮೆಯನ್ನು ಕಳಚಿ ಮುಂದಿನ ಮಹಾ ಮತಯುದ್ಧದಲ್ಲಿ  ವಿಶ್ವವಂದ್ಯ ಧರ್ಮರಾಜನ ಜಯಕ್ಕಾಗಿ ಪ್ರತಿಯೊಬ್ಬರೂ ಶಕ್ತಿಮೀರಿ, ನಮ್ಮ ಸಾಮರ್ಥ್ಯಮೀರಿ ಸಮಾಜದೊಳಗೆ ಕೆಲಸಮಾಡಬೇಕಿದೆ ಮತ್ತು ಹೋರಾಡಬೇಕಿದೆ.

ಇಂದಿನ ಯುದ್ಧಭೂಮಿ ಹಿಂದಿನ ಕುರುಕ್ಷೇತ್ರದಂತಿಲ್ಲ. ಪ್ರತಿಯೊಂದು ಮತಗಟ್ಟೆಯೂ ರಣರಂಗವೇ. ಅಲ್ಲಿನ ಮತದಾರರೇ ಅಲ್ಲಿನ ಸೈನಿಕರು. ಕಾರ್ಯಕರ್ತರೇ ಸೇನಾನಾಯಕರು. ನಮ್ಮೆಲ್ಲರ ಮತಗಳೇ ಶತ್ರುಗಳನ್ನು ನಾಶಮಾಡುವ ವಿಷಬಾಣಗಳು, ನಮ್ಮೆಲ್ಲರ ಪ್ರೇರಣಾತ್ಮಕ ಮಾತೇ ರಣರಂಗದ ಪಾಂಚಜನ್ಯ. ನಮ್ಮೆಲ್ಲರ ಲೇಖನಿಯೇ ಶತ್ರುಚಿಂತನೆಯ ತಲೆತೆಗೆಯುವ ವಜ್ರಾಯುಧ. ಈ ಸುಧೀರ್ಘ ರಣರಂಗದಲ್ಲಿ ನಮ್ಮ ನಿಷ್ಕ್ರಿಯತೆಯೇ ಆತ್ಮಹತ್ಯೆಯ ಯಮಪಾಶ. ನಮ್ಮೆಲ್ಲರ  ನಕಾರಾತ್ಮಕವಾದ ಮಾತುಗಳೇ ಭಾರತಮಾತೆಯನ್ನುದಾಸ್ಯಕ್ಕೆ ದೂಡಬಹುದಾದ ಬಂಧನದ ಸಂಕೋಲೆ. ನಮ್ಮ ಉದಾಸೀನತೆಯೇ ಉಗ್ರವಾದದ ಕೈಗಳಿಗೆ ನೀಡುವ ಆನೆಬಲ. ಆದುದರಿಂದ ನಮ್ಮ ಅಮೂಲ್ಯವಾದ ಒಂದೊಂದು ಮತವೂ ದೆಹಲಿಯ ಧರ್ಮ ಸಿಂಹಾಸನಾಧೀಶನನ್ನು ಪುನಪ್ರತಿಷ್ಠಾಪಿಸುವ ಸ್ಥಂಭಗಳನ್ನು ಭದ್ರಗೊಳಿಸುವ ಇಟ್ಟಿಗೆಗಳಾಗಲಿ ಹಾಗೂ  ಹಸನ್ಮುಖಿಯಾದ ಭಾರತಮಾತೆಯ ಪಾದಕಮಲಗಳನ್ನು ಚುಂಬಿಸುವ ಅರಳಿದ ಕಮಲದ ಪುಷ್ಪಗಳೇ ಆಗಿರಲಿ.

ನಮ್ಮನ್ನು ಪ್ರತಿನಿಧಿಸುವ ಸ್ಥಳೀಯ ವ್ಯಕ್ತಿ ಯಾರೇ ಆಗಿರಲಿ ಆತ ಕೇವಲ ನಮ್ಮ ಮತಪುಷ್ಪವನ್ನು ದೆಹಲಿ ಸಿಂಹಾಸನದ ಚಕ್ರವರ್ತಿಯಪದತಲಕ್ಕೆ ತಲುಪಿಸುವ ಒಬ್ಬ ವಾಹಕನಾಗಿರುತ್ತಾನೆ. ಅಂತಹ ವಾಹಕನು ಕಮಲಪುಷ್ಪಗಳಿಂದ ಶ್ರೀರಾಮನನ್ನು ಪೂಜಿಸುವ ಶ್ರೀ ರಾಮಭಕ್ತರ ಪ್ರತಿನಿಧಿಯೋ? ಕರಾಳಹಸ್ತದಿಂದ ಬಾಂಬನ್ನು ಸಿಡಿಸುತ್ತಾ ಭಾರತಮಾತೆಯ ದೇಹವನ್ನು ಛಿದ್ರಗಳಿಸುವ ರಾಮಮಂದಿರವನ್ನೇ ಒಡೆಯುತ್ತೇನೆನ್ನುವ ಭಯೋತ್ಪಾದಕರ ಪೋಷಕಕರಾದ ಕರೇಂದ್ರರ ಪ್ರತಿನಿಧಿಯೋ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಿ. ಇದು ವೈಚಾರಿಕ ಯುದ್ಧ ಇಬ್ಬರಿಗೂ ಇದು ಅಳಿವು ಉಳಿವಿನ ಪ್ರಶ್ನೆ, ರಾಷ್ಟವಾದಿಗಳಿಗೆ ಭವಿಷ್ಯದ ಪ್ರಶ್ನೆ. ಆದುದರಿಂದ ನಾವೂ ಮತದಾನ ಮಾಡೋಣ. ಹೆಚ್ಚಿನ ಸಂಖ್ಯೆಯಲ್ಲಿ ಪರಿಚಿತರಿಂದ ಮತದಾನ ಮಾಡಿಸೋಣ. ರಾಷ್ಟ್ರೀಯ ವಿಚಾರಗಳನ್ನು ರಕ್ಷಿಸುವ ರಾಜನನ್ನು ಉಳಿಸಿಕೊಳ್ಳೋಣ. ಈ ಮೂಲಕ ಭಾರತ ಮಾತೆಯನ್ನು ಪರಮ ವೈಭವಕ್ಕೆ ಕೊಂಡೊಯ್ಯುವ ನರೇಂದ್ರನ ಕಾಯಕದಲ್ಲಿ ನಾವೂ ಅಳಿಲು ಸೇವೆ ಸಲ್ಲಿಸೋಣ. ವೈಮನಸ್ಸು ಬಿಟ್ಟು ವೈಚಾರಿಕವಾಗಿ ಸಂಘಟಿತರಾಗೋಣ. ಸಚ್ಚಿಂತನೆಯನ್ನು ಮಾಡೋಣ. ಸಾಮೂಹಿಕವಾಗಿ ಎಲ್ಲಾ ರಂಗಗಳಿಂದಲೂ ಶತೃಗಳ ಛದ್ಮದಾಳಿಯನ್ನು ಹಿಮ್ಮೆಟ್ಟಿಸೋಣ. ಕ್ಷಣಿಕ ಸುಖದ ಬಿಟ್ಟಿ ಭಾಗ್ಯಗಳ ಗುಂಗಿನಲ್ಲಿ ನಮ್ಮ ಮುಂದಿನ ಸಂತತಿಯನ್ನು ಶಾಶ್ವತವಾಗಿ ನರಕಕ್ಕೆ ದೂಡುವವರ ಬಲೆಯಲ್ಲಿ ಬೀಳದಿರೋಣ, ಭಾರತಮಾತೆಯನ್ನು ಪುನಃ ವಿದೇಶೀಮಿಶ್ರತಳಿಗಳಿಗೆ ಒತ್ತೆಇಡಲು ಮುಂದಾದ ಕೊಳಕು ಕೈಯನ್ನು ಗಟ್ಟಿಗೊಳಿಸಲು ನಾಚಿಕೆಪಡದಂತಹ ಅಧಿಕಾರದಾಹಿ ಕ್ಷುದ್ರಜನರನ್ನು ಬುಡಸಹಿತ ಅಲ್ಲಾಡಿಸುತ್ತಾ ಸಮಾಜವನ್ನು ಸ್ವಚ್ಛಮಾಡೋಣ.

ಹಿರಿಯರು ಹೇಳಿದಮಾತು ದೇಶ ಸಮಾಜ ಸಂಸ್ಕೃತಿ ಇವೆಲ್ಲವೂ ಹಾಳಾದರೆ ಅದು ದುರ್ಜನರ ಸಕ್ರಿಯತೆಯಿಂದ ಅಲ್ಲ ಬದಲಾಗಿ ಆ ಸಮಾಜದಲ್ಲಿನ ಸಜ್ಜನರ ನಿಷ್ಕ್ರಿಯತೆಯಿಂದಾಗಿ ಎಂಬುದಾಗಿ.  ಹೀಗಾಗದಿರಲಿ, ಮುಂದಿನ ಒಂದೂವರೆ ತಿಂಗಳು ರಾಷ್ಟ್ರೀಯ ಚಿಂತನೆಯ ಪ್ರತಿಯೊಬ್ಬರೂ ಸಕ್ರಿಯರಾಗೋಣ ಹಾಗೂ ಭಾರತಮಾತೆಯ ರಕ್ಷಣೆಗಾಗಿ ಅಳಿಲುಸೇವೆಸಲ್ಲಿಸಲು ಸಿದ್ಧರಾಗೋಣ.

ಭಗವದ್ಗೀತೆಯಲ್ಲಿ ಕೃಷ್ಣನೇ ಹೇಳಿದ ಒಂದು ಮಾತು

ಅಧಿಷ್ಠಾನಂ ತಥಾ ಕರ್ತಾ ಕರಣಂಚ ಪೃಥಗ್ವಿದಂ |

ವಿವಿಧಾಶ್ಚ ಪೃಥಕ್ಚೇಷ್ಟಾ ದೈವಂ ಚೈವಾತ್ರ ಪಂಚಮಮ್‌ ||

ಶ್ಲೋಕದ ಅನ್ವಯಾರ್ಥ ಹೀಗಿದೆ.

ಅಧಿಷ್ಠಾನಮ್ – ಕೆಲಸಮಾಡುವ ಸ್ಥಳ, ತಥಾ-ಹಾಗೆಯೇ, ಕರ್ತಾ- ಕೆಲಸಮಾಡುವ ವ್ಯಕ್ತಿ, ಪೃಥಗ್ವಿಧಮ್ – ಭಿನ್ನ ಭಿನ್ನವಾದ, ವಿವಿದಾಃ- ನಾನಾವಿಧವಾದ, ಕರಣಮ್ – ಸಾಧನಗಳು, ಚ-ಮತ್ತು, ಪೃಥಕ್ – ಬೇರೆ ಬೇರೆ, ಚೇಷ್ಟಾಃ- ಪ್ರಯತ್ನಗಳು, ಚ-ಮತ್ತು, ದೈವಂ –ದೇವರು (ಅದೃಷ್ಠ), ಏವ-ಖಂಡಿತವಾಗಿ, ಅತ್ರ-ಇಲ್ಲಿ, ಪಂಚಮಮ್ = ಐದನೆಯವನು.

ನಮ್ಮಲ್ಲಿ ಎಷ್ಟೋಜನರಿಗೆ ಎಲ್ಲವನ್ನೂ ದೇವರೇ ಮಾಡುತ್ತಾನೆ ನಾವು ಮಾಡುವುದು ಏನೂ ಇಲ್ಲ ಎನ್ನುವ ಮೂರ್ಖ ಭ್ರಮೆ ಇದೆ. ಅನೇಕ ಉದರಪೋಷಕ ಪ್ರವಚನಕಾರರೂ ಇದೇ ಪುಂಗಿಯನ್ನು ಸದಾ ಊದುತ್ತಿರುವುದನ್ನು ನಾವು ನೋಡುತ್ತೇವೆ. ಅಂತಹವರು  ಶ್ರೀಕೃಷ್ಣನು ಮೇಲೆ ಹೇಳಿದ ಮಾತನ್ನು ಅರ್ಥಮಾಡಿಕೊಳ್ಳುವುದು ಉತ್ತಮ.

ಯಾವುದೇ ಒಂದು ಕೆಲಸದ ಯಶಸ್ಸಿಗೆ ಐದು ಅಂಶಗಳು ಕಾರಣವಾಗುತ್ತವೆ ಎನ್ನುವುದು ಕೃಷ್ಣನ ಉಪದೇಶ. ಕೆಲಸಮಾಡುವ ಸ್ಥಳ, ಮಾಡುವ ವ್ಯಕ್ತಿ, ಭಿನ್ನ ಭಿನ್ನ ಸಾಧನಗಳು, ನಾನಾವಿಧದ ಪ್ರಯತ್ನಗಳು, ಮತ್ತು ಐದನೆಯದಾಗಿ ಭಗವಂತನ ಕೃಪೆ (ಅದೃಷ್ಟ). ಅಂದರೆ ಕೆಲಸದಲ್ಲಿ ಶೇಕಡಾ 80 ರಷ್ಟು ಮನುಷ್ಯಪ್ರಯತ್ನವೇ ಗುರಿತಲುಪುವಲ್ಲಿ ಮುಖ್ಯವಾಗಿರುತ್ತದೆ. ಎಲ್ಲದನ್ನೂ ದೇವರೇಮಾಡುತ್ತಾನೆಂದು ಪೂಜೆಮಾಡುತ್ತಾಕೂತರೆ ಅದರಿಂದ ಕಾರ್ಯಸಿದ್ಧಿಯಾಗುವುದಿಲ್ಲ ಎಂಬುದು ಅರ್ಥ. ಮಹಾಭಾರತದಲ್ಲಿ ಪಾಂಡವರ ಪರವಾಗಿ ಯುದ್ಧವನ್ನು ಮಾಡಲು ಕೃಷ್ಣನು ಅರ್ಜುನನ್ನು ಪ್ರೇರೇಪಿಸುತ್ತಾನೆ. ತಾನೇ ಮಾಡಿ ಮುಗಿಸಲಿಲ್ಲ ಎನ್ನುವುದು ಸಮಾಜಕ್ಕೆ ನೀಡಿದ ಕರ್ತವ್ಯಪರತೆಯ ಸಂದೇಶವಾಗಿದೆ. ನಾವು ಶ್ರೀ ಕೃಷ್ಣನ ಮಾರ್ಗದರ್ಷನದಂತೆ ನಡೆಯೋಣ. ಎಂಬತ್ತು ಶೇಕಡಾ ಮುಂದಿನ ಮಹಾಯುದ್ಧದಲ್ಲಿ ನಮ್ಮೆಲ್ಲಾ ಆಸ್ಥಿಕ ಬಾಂಧವರ ಪ್ರಯತ್ನ ಹೋರಾಟ ಸಕ್ರಿಯ ಭಾಗೀದಾರಿಕೆ ಇರಲಿ ಉಳಿದ 20 ಶೇಕಡಾ ಕೆಲಸವನ್ನು ಅಯೋಧ್ಯೆಯ ಬಾಲರಾಮನೋ, ಕಾಶಿಯ ವಿಶ್ವನಾಥನೋ ಮಾಡುತ್ತಾರೆ. ಮುಂದಿನ ಐದುವರ್ಷಗಳಲ್ಲಿ ಮಥುರಾದಲ್ಲಿ ಸುಂದರ ಕೃಷ್ಣಮಂದಿರವನ್ನು ನೋಡುವ ಭಾಗ್ಯನಮ್ಮದಾಗಲಿ.

ಒಂದು ಸುಭಾಷಿತ ಹೀಗೆ ಹೇಳುತ್ತದೆ.

ಕರ್ತಾ ಕಾರಯಿತಾ ಚೈವ ಪ್ರೇರಕಶ್ಚಾನುಮೋದಕಃ |

ಸುಕೃತೇ ದುಷ್ಕೃತೇ ಚೈವ ಚತ್ವಾರಃ ಸಮಭಾಗಿನಃ ||

ಇದರ ಅರ್ಥ ಹೀಗಿದೆ ಯಾವುದೇ ಕೆಲಸವನ್ನು ಕರ್ತಾ ಎಂದರೆ ಮಾಡುವವನು, ಕಾರಯಿತಾ ಎಂದರೆ ಮಾಡಿಸುವವನು, ಪ್ರೇರಕಃ ಎಂದರೆ ಆಕೆಲಸಮಾಡಲು ಪ್ರೇರಣೆಯನ್ನು ನೀಡುವವನು ಹಾಗೆಯೇ ಅನುಮೋದಕಃ ಎಂದರೆ ಉತ್ತಮಕೆಲಸ ನೀನುಮಾಡಬಹುದು ಎಂಬುದಾಗಿ ಬೆಂಬಲಿಸುವವನು. ಈ ನಾಲ್ವರಿಗೂ ಮಾಡಿದಕೆಲಸದ ಕಾರಣದಿಂದ ಉಂಟಾಗುವ ಫಲಿತಾಂಶ ರೂಪವಾದ ಪುಣ್ಯವಾಗಲೀ, ಪಾಪವಾಗಲೀ ಸಮಾನವಾಗಿ ಹಂಚಿಕೆಯಾಗುವುದೆಂಬುದು ಅರ್ಥ.

ಆದುದರಿಂದ ನಾವೆಲ್ಲರೂ ಭಾರತೀಯರೂ ಈ ದೇಶ, ಇಲ್ಲಿನ ಧರ್ಮ, ಸಂಸ್ಕೃತಿ, ಹಾಗೂ ಪರಂಪರೆಯ ರಕ್ಷಣೆಯ ಕಾರ್ಯದಲ್ಲಿ ಕರ್ತರೂ, ಕಾರಯಿತರೂ, ಪ್ರೇರಕರೂ, ಅನುಮೋದಕರೂ, ಆಗೋಣ ದೇಶದ್ರೋಹಿಗಳಿಂದ ಕೂಡಿದ ಅಧರ್ಮದ ಪಕ್ಷದವರವಿರುದ್ಧ ಸಂಘಟಿತರಾಗಿ ಹೋರಾಟ ಮಾಡೋಣ. ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯುವ ಈ ಮಹಾಭಾರತದ ಮತದಾನದ ಮಹಾಯುದ್ಧದಲ್ಲಿ ನಾವು ಕರ್ನಾಟಕದ ಸಮರೋತ್ಸಾಹಿಗಳು ತ್ರಿಕರಣ ಪೂರ್ವಕವಾಗಿ ಕಾಯಾ ಮನಸಾ ವಾಚಾ ಭಾಗಿಯಾಗೋಣ.

ನಮ್ಮ ಜೀವಿತಾವದೀಯಲ್ಲಿ ತಾಯಿ ಭಾರತಿಯ ಸೇವೆಮಾಡಲು ನಮಗಿರುವ ಸುಲಭ ಹಾಗೂ ಸರಳ ಅವಕಾಶವೇ ರಾಷ್ಟ್ರಹಿತ ಆಧಾರಿತ ಮತದಾನ. ನಮ್ಮೆಲ್ಲರ ಮನಸ್ಸು ಸ್ವಚ್ಛವಾಗಲಿ. ಒಳಕಣ್ಣು ಮುಂದಿನ ಪೀಳಿಗೆಯ ಭವಿಷ್ಯವನ್ನು ನೋಡಲಿ. ವಿಷ್ಣುಕರಶೋಭಿತ ಪದ್ಮಪುಷ್ಪವು ಮತದಾನದ ದಿನ ನಮ್ಮೆಲ್ಲರ ಕರಕಮಲಗಳಿಂದ ಭಾರತಮಾತೆಯ ಚರಣಗಳನ್ನು ಅರ್ಚಿಸಲಿ. ಅದು ಪ್ರಸಾದರೂಪದಲ್ಲಿ ನರೇಂದ್ರನ ಮುಡಿಗೇರಲಿ.  ಸಮಾನ ಸಮಯದಲ್ಲಿ ದುಷ್ಟಶಕ್ತಿಗಳಿಂದ ಪೋಶಿಸಲ್ಪಡುತ್ತಿರುವ ಭಯೋತ್ಪಾದಕರ ಕರಾಳ ಹಸ್ತವು ಶಾಶ್ವತವಾಗಿ ವಿನಾಶವಾಗಲಿ. ಸತ್ಯಮೇವಜಯತೇ,  “ಒಗ್ಗಟ್ಟಿನಲ್ಲಿ ಬಲವಿದೆ” “ಆರಬ್ಧಂ ಉತ್ತಮಜನಾಃ ನ ಪರಿತ್ಯಜಂತಿ”

ವಂದನೆಗಳು.

ಜೈ ಹಿಂದ್‌, ಜೈ ಶ್ರೀರಾಮ್‌.

Leave a Reply