“ ಅಗೋಚರ ಅಪಾಯದಲ್ಲಿ ಹಿಂದೂ ಸಂಸ್ಕೃತಿ ಹಾಗೂ ಸ್ವಾಭಿಮಾನ ಮರೆತಿರುವ ಹಿಂದುಗಳು”
ನಾವು ಈ ಮೇಲಿನ ತಲೆಬರಹದಡಿಯಲ್ಲಿ ಯೋಚಿಸಿದಾಗ ನಮ್ಮ ಮುಂದೆ ಅನೇಕ ಬಿಂದುಗಳು ಸುಳಿಯುತ್ತವೆ. ಭಾರತದ ಸಂಸ್ಕೃತಿಯು ವಿದೇಶೀ ದುಷ್ಟಶಕ್ತಿಗಳ ಶಡ್ಯಂತ್ರದಲ್ಲಿ ಸಿಲುಕಿ ಇದರ ಸುಳಿಯಲ್ಲಿ ಮುಂದಿನ ಅಪಾಯವನ್ನೇ ಅರಿಯದೆ ಅಧಃಪತನಕ್ಕೆ ಜಾರುತ್ತಿರುವುದನ್ನು ನಾವು ನಮ್ಮ ಸುತ್ತಮುತ್ತ ನೋಡುತ್ತಿದ್ದೇವೆ. ಹಿಂದು ಯುವಜನತೆ ಕೌಟುಂಬಿಕ ಪರಂಪರೆಯಿಂದ ಬಂದ ಸಂಸ್ಕೃತಿಯಿಂದ ವಿಮುಖರಾಗುತ್ತಾ ಉತ್ತಮವಾದ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.
ಇದಕ್ಕೆ ಕಾರಣಗಳನ್ನು ಒಂದೊಂದಾಗಿ ಪಟ್ಟಿಮಾಡುತ್ತಾ ಹೋದರೆ ಅನೇಕ ಕಾರಣಗಳು ಗೋಚರಿಸುತ್ತವೆ.
- ಧರ್ಮ ಶಿಕ್ಷಣನೀಡದ ತಂದೆ ತಾಯಿಯರು. ಕಳೆದ ಎಪ್ಪತ್ತೈದು ವರ್ಷಗಳ ಹಿಂದೆ ಬ್ರಿಟಿಷರು ಭಾರತ ತೊರೆದನಂತರ ಮೊದಲ ಪ್ರಧಾನಿಯವರ ಹಲವು ತಪ್ಪುಗಳಿಂದ ಭಾರತ ಎದುರಿಸಬೇಕಾದ ಆರ್ಥಿಕ ಸಂದಿಗ್ಧತೆ, ಪಾಕಿಸ್ಥಾನ, ಚೀನಾ ವಿರುದ್ಧದ ಯುದ್ಧಗಳು ಮುಂತಾದ ಕಾರಣಗಳಿಂದ ಭಾರತದ ಸಾಮಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿತ್ತು. ಸಮಾಜದಲ್ಲಿ ಸಾಮಾಜಿಕ ಪರಿಸ್ಥಿತಿ, ಶೈಕ್ಷಣಿಕ ಪ್ರಗತಿ ಎಲ್ಲವೂ ಅತ್ಯಂತ ಕೆಳಮಟ್ಟದಲ್ಲಿತ್ತು. ಬಡತನ ವ್ಯಾಪಕವಾಗಿತ್ತು. ಅಂತಹ ಸಮಯದಲ್ಲಿ ಹಿಂದು ಪಾಲಕರು ತಮ್ಮ ಮಕ್ಕಳು ಚೆನ್ನಾಗಿ ಓದಲಿ ಉತ್ತಮ ಉದ್ಯೋಗಪಡೆಯಲಿ ಎನ್ನುವ ಮನಸ್ಥಿತಿಯಿಂದ ಇಂಗ್ಲೀಷ್ ಮೀಡಿಯಂನಲ್ಲಿ ಕಮ್ಯುನಿಸ್ಟ್ ಪ್ರೇರಿತ ಪಠ್ಯವನ್ನು ಮಕ್ಕಳಿಗೆ ಕಲಿಸತೊಡಗಿದರು. ಇಲ್ಲಿ ಮಿಷನರಿಗಳು ಭಾರತೀಯ ಸಂಸ್ಕೃತಿಯನ್ನು ನಾಶಮಾಡುವ ಕೆಲಸವನ್ನು ವ್ಯವಸ್ಥಿತವಾಗಿ ಮಕ್ಕಳ ಮನಸ್ಸಿನಲ್ಲಿ ಎಳೆವೆಯಿಂದಲೇ ಬಿತ್ತ ತೊಡಗಿದರು. ಧರ್ಮ ಶಿಕ್ಷಣದ ಕೊರತೆ ಇದ್ದ ಅಮಾಯಕ ಬಡ ತಂದೆ ತಾಯಿಗಳಿಗೆ ಇದು ಅರ್ಥವೇ ಆಗುತ್ತಿರಲಿಲ್ಲ ಅವರು ಮುಗ್ದರಾಗಿದ್ದರು. ಮನೆಯಲ್ಲಿಯೂ ಸದಾ ಓದು ಓದು ಎನ್ನುತ್ತಾ ಪರಂಪಾರಾಗತವಾಗಿ ಬಂದ ಗೃಹಸಂಸ್ಕೃತಿಯಿಂದ ಮಕ್ಕಳನ್ನು ದೂರವಾಗಿಸಿದರು.
- ಹಿಂದೂ ವಿರೋಧಿ ಕಾಂಗ್ರೇಸ್ ಸರಕಾರ– ಕಂಗ್ರೇಸ್ ಪಕ್ಷ ಸ್ವತಂತ್ರ ಬಂದಾಗಿನಿಂದಲೂ ಮುಸಲ್ಮಾನರ ಪಕ್ಷಪಾತಿಯಂತೆ ವರ್ತಿಸುತ್ತಾ ಹಿಂದೂಗಳನ್ನು ಧಾರ್ಮಿಕವಾಗಿ, ಸಾಮಾಜಿಕವಾಗಿ ತುಳಿಯತೊಡಗಿತು. ಹಿಂದೂ ದೇವಾಲಯಗಳನ್ನು ಸರಕಾರೀಕರಣ ಮಾಡಿ ದೇವಾಲಯದ ಹಣ ಹಿಂದುಗಳಿಗೆ ಸಿಗದಂತೆ ಮಾಡಿತು ಹಾಗೂ ಮುಸಲ್ಮಾನರಿಗೆ ಹಜ್ ಯಾತ್ರೆಗೆ ಸರಕಾರೀ ಸಬ್ಸಿಡಿ ಕೊಡತೊಡಗಿತು, ಶಾಲಾಪುಸ್ತಕಗಳಲ್ಲಿ ಲೂಟಿಕೋರರ ತಿರುಚಿದ ಇತಿಹಾಸ ಬರೆಸಿ ಭಾರತದ ನೈಜ ಶೌರ್ಯದ ಇತಿಹಾಸವನ್ನು ಮರೆಮಾಚಿತು. 33 ಸಾವಿರ ದೇವಾಲಯಗಳನ್ನು ಕೆಡವಿದ ಭಾರತವನ್ನು ಲೂಟಿಮಾಡಲು ಬಂದ ಮೊಗಲರನ್ನು ಸುಧಾರಣಾವಾದಿಗಳಂತೆ ಚಿತ್ರಿಸಲಾಯಿತು. ಭೂಮಸೂದೆಯನ್ನು ಜಾರಿಗೆ ತಂದು ದೇವಾಲಯಗಳ ಆಸ್ಥಿಗಳನ್ನು ದೇವಾಲಯಗಳ ಕೈ ತಪ್ಪುವಂತೆ ಮಾಡಿತು. ಹಾಗೂ ಓಟಿಗಾಗಿ ಜಾತಿ ಜಾತಿಗಳ ಮಧ್ಯೆ ದ್ವೇಷಸೃಷ್ಟಿಸಿ ತಾನು ಅಧಿಕಾರ ಅನುಭವಿಸಿತು. ಅಹಿಂದ ಎನ್ನುತ್ತಾ ಹಿಂದು ಸಮಾಜವನ್ನು ವಿಭಜಿಸಿತು.
- ಮಾಧ್ಯಮಗಳು – ವಿದೇಶೀ ಹಣದಿಂದ ನಡೆಯುವ ಮಾಧ್ಯಮಗಳು ಪಾಶ್ಚಾತ್ಯ ವಿಚಾರಗಳನ್ನು ವೈಭವೀಕರಿಸಿ ತೋರಿಸುತ್ತಾ ಭಾರತೀಯವಾದುದನ್ನು ತಾತ್ಸಾರ ಮಾಡಿದರು. ಇದರಿಂದಾಗಿ ಯುವಜನರು ಆಧುನಿಕ ಫ್ಯಾಶನ್ ಎನ್ನುತ್ತಾ ಅಡ್ಡದಾರಿಗೆ ಎಳೆಯಲ್ಲಪಟ್ಟರು. ಕಮ್ಯುನಿಸ್ಟರನ್ನು ಬೆಳಿಸಿದ ಕಾಂಗ್ರೇಸಿಗರು ಈಮೂಲಕ ಭಾರತೀಯತೆಯನ್ನು ಹಾಸ್ಯಾಸ್ಪದ ವಾಗಿ ತೋರಿಸುವ ಚಲನ ಚಿತ್ರಗಳನ್ನು, ಧಾರವಾಹಿನಿಗಳನ್ನು, ಪ್ರೋತ್ಸಾಹಿಸುತ್ತಾ ಪತ್ರಿಕಾ ಲೇಖನಗಳನ್ನೂ ಬರೆಸತೊಡಗಿದರು. ಹಿಂದೂ ವಿರೋಧಿಗಳಿಗೆ ಸರಕಾರೀ ನಿವೇಶನಗಳು, ಜ್ಞಾನಪೀಠ, ಬಸವ ಮುಂತಾದ ಪ್ರಶಸ್ತಿಗಳೂ ಬಹುಮಾನರೂಪದಲ್ಲಿ ಸಿಗತೊಡಗಿದುವು. ಇದರಿಂದಲೂ ಜನರು ಭ್ರಮೆಗೆ ಒಳಗಾದರು. ಹಿಂದುತ್ವವನ್ನು ಅಪಹಾಸ್ಯಮಾಡುವುದು ಒಂದು ಹೆಗ್ಗಳಿಕೆಯಾಗುವಂತೆ ಮಾಧ್ಯಮಗಳು ಹಾಗೂ ಸರಕಾರಗಳು ಪ್ರಚಾರ ಮಾಡಿದುವು.
- ಮುಸಲ್ಮಾನರು ಹಾಗೂ ಕ್ರಿಶ್ಚಿಯನ್– ಕ್ರಿಶ್ಚಯನ್ ಮಿಷನರಿಗಳು ವಿದೇಶೀ ದೇಣಿಗೆ ಪಡೆದು ಭಾರತದಲ್ಲಿ ಅವ್ಯಾಹತವಾಗಿ ಹಿಂದುಗಳನ್ನು ಮತಾಂತರಿಸತೊಡಗಿದರು. ಕಾಂಗ್ರೇಸ್ ಸರ್ಕಾರ ಇಂತಹ ಕುಕೃತ್ಯಗಳಿಗೆ ಅಭಯ ಹಸ್ತ ನೀಡಿತು. ಅಲ್ಲದೆ ಸ್ವಯಂ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ನಮ್ಮ ಹಿರಿಯರು ತಾವು ಸೆಕ್ಯುಲರ್ ಎನ್ನುವ ಭ್ರಮೆಯಲ್ಲಿ ಮತಾಂತರಿಗಳ ಕುತಂತ್ರವನ್ನು ನೋಡಿಯೂ ಕುರುಡರಂತೆ ವರ್ತಿಸಿದರು. ಅಮಾಯಕರು ಇಂತಹವರ ಬಲೆಗೆ ಬೀಳತೊಡಗಿದರು. ಕಾಶ್ಮೀರ ಹತ್ಯಾಕಾಂಡ, ಮರಾಡ್ ಹತ್ಯಾಕಾಂಡ, ಗೋದ್ರಾಹತ್ಯಾಕಾಂಡ, ಈಗ ಕೇರಳಸ್ಟೋರಿ, ಇವೆಲ್ಲವೂ ಮುಸಲ್ಮಾನರ ಕೊಡುಗೆಗಳಾಗಿವೆ. ಹಾಗೂ ಮಲಗಿದಹಿಂದುಗಳು ಎದುರಿಸುತ್ತಿರುವ ಭೀಕರ ಕರಾಳ ಸತ್ಯಕತೆಯಾಗಿದೆ.
- ಬೇಜವಾಬ್ದಾರಿಯ ಯುವಜನತೆ– ಇಂದಿನ ಯುವಜನತೆ ನೈತಿಕತೆಯನ್ನು ತೊರೆದು ಮೋಜು ಮಸ್ತಿಯ ಜಾಲಿ ಮೂಡಿನಲ್ಲೆ ಬೆಳೆಯತೊಡಗಿದೆ. ಇವರುಗಳು ಪಬ್ಬು ಕ್ಲಬ್ಬುಗಳದಾಸರಾಗ ತೊಡಗಿದರು, ಅಶ್ಲೀಲತೆ ಸರ್ವತ್ರ ಸಾಮಾನ್ಯವಾಗತೊಡಗಿತು. ಧೂಪಾನ, ಮದ್ಯಪಾನ, ಡ್ರಗ್ಸ್, ಲೀವಿಂಗ್ ಟುಗೆದರ್, ಜೂಜು, ಬೆಟ್ಟಿಂಗ್ ಮುಂತಾದ ಅನಿಷ್ಟಪದ್ದತಿಗಳು ಹಿಂದೂ ಸಮಾಜದಲ್ಲಿ ಹೆಚ್ಚಾಗ ತೊಡಗಿತು. ಇಂತಹವರು ಧಾರ್ಮಿಕ ಹಾಗೂ ನೈತಿಕ ವ್ಯಕ್ತಿತ್ವದಿಂದ ದೂರವಾಗತೊಡಗಿದರು.
- ವ್ಯವಹಾರೀ ಮನಸ್ಥಿತಿಯ ಧಾರ್ಮಿಕ ಕೇಂದ್ರಗಳು– ಉತ್ತಮ ಆದಾಯಬರುವ ದೇವಾಲಯಗಳು ಸರಕಾರದ ಹಿಡಿತದಲ್ಲಿವೆ. ಮಠಮಂದಿರಗಳು ಸ್ವಯಂ ವ್ಯಾಪಾರಕ್ಕೆ ಇಳಿದಿವೆ, ಸರಕಾರಗಳ ಅನುದಾನಗಳಿಗಾಗಿ ಭಿಕ್ಷಾಪಾತ್ರೆ ಹಿಡಿದಿವೆ. ರಾಜಕೀಯ ಮಧ್ಯವರ್ತಿಗಳಂತೆ ಕೆಲವು ಮಠದ ಸ್ವಾಮೀಜಿಗಳು ಲಾಭಿಮಾಡುವುದು, ಬ್ಲಾಕ್ ಮೇಲ್ ಮಾಡುವುದು, ರಾಜಕೀಯ ಪಕ್ಷಗಳನ್ನು ಗದರಿಸುವುದು, ಓಲೈಸುವುದು, ಪ್ರಭಾವ ಬೀರುವುದು ಮುಂತಾದುವನ್ನು ಮಾಡುತ್ತಾ ಜನರ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದಾರೆ.
- ಭ್ರಷ್ಡ ಸರಕಾರೀ ಅಧಿಕಾರಿಗಳು– ಎಲ್ಲೆಡೆ ವಿಳಂಬ ನೀತಿ ಹಾಗೂ ಲಂಚ ಇವು ಸರಕಾರೀ ಕಛೇರಿಗಳಲ್ಲಿ ಮಿತಿಮೀರಿದೆ. ಇದಕ್ಕೆ ಆಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಹಾಗೂ ನಾಯಕರೇ ಕಾರಣರಾಗಿದ್ದಾರೆ ಎನ್ನಬಹುದು. ಇಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ 40% ಸರಕಾರ ಎನ್ನುವ ಹಣೆಪಟ್ಟಿಯನ್ನು ವಿರೋಧಿಗಳು ಕಟ್ಟಿದರು. ಇದು ಸುಳ್ಳು ಎಂದು ಜನ ನಂಬುವಂತಹ ವಿಶ್ವಾಸಾರ್ಹತೆಯನ್ನು ಬಿಜೆಪಿ ನಾಯಕರು ತಮ್ಮ ಆಡಳಿತದಲ್ಲಿ ತೋರಿಸಲಿಲ್ಲ.
- ಜವಾಬ್ದಾರಿ ಮರೆತ ಮತದಾರರು– ಹಿಂದುಗಳನ್ನು ನಾಶಮಾಡುವ ಸ್ಪಷ್ಠ ಉದ್ದೇಶದಲ್ಲಿ ಇಂದು ಅಲ್ಪಸಂಖ್ಯಾತ ಜಿಹಾದಿಗಳು ಸಕ್ರಿಯರಾಗಿದ್ದಾರೆ. ಅವರು ಒಗ್ಗಟ್ಟಿನಿಂದ ಹಿಂದೂ ಹಿತಕ್ಕೆ ವಿರೋಧವಾಗಿ ಮತದಾನ ಮಾಡುತ್ತಿದ್ದಾರೆ. ಹಿಂದುಗಳಲ್ಲಿ ವಿದ್ಯಾವಂತರು ಮತದಾನಮಾಡದೆ ಮನೆಯಲ್ಲಿ ಕುಳಿತುಕೊಂಡು ತಾವು ಈ ದೇಶದಲ್ಲಿ , ಈ ಸಮಾಜದಲ್ಲಿ ಬದುಕಲು ಅಯೋಗ್ಯರು ಎನ್ನುವುದನ್ನು ಸಾಬೀತುಮಾಡುತ್ತಾ ಸ್ವಯಂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಠಮಂದಿರಗಳು, ಸ್ವಾಮಿಗಳು ಇಂತಹವರನ್ನು ಜಾಗ್ರತಿಗೊಳಿಸುತ್ತಿಲ್ಲ. ಸ್ವಯಂ ಹಣಸಂಪಾದಿಸುವುದು ಹೇಗೆ ಎಂದು ಲೆಕ್ಕಹಾಕುತ್ತಾ ಕುಳಿತಿವೆ.
- ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಜನಪ್ರತಿನಿಧಿಗಳು–ಕಾಂಗ್ರೇಸ್ ತಾನು ಹಿಂದೂ ವಿರೋಧಿ ಎಂಬುದಾಗಿ ಘಂಟಾಘೋಷವಾಗಿ ಸಾರುತ್ತಿದೆ. ಹಿಂದುಗಳ ಪಕ್ಷ ಎನ್ನುವ ಬಿಜೆಪಿ ಚುನಾವಣಾ ಹಿಂದುತ್ವವನ್ನು ಮಾತ್ರ ಅನುಸರಿಸಿದಂತೆ ಕಾಣುತ್ತಿದೆ. ಪ್ರಖರ ಹಿಂದುತ್ವವಾದಿಗಳನ್ನು ಸ್ಥಳೀಯ ಬಿಜೆಪಿ ನಾಯಕರು ಬೆಳೆಯಲು ಬಿಡುತ್ತಿಲ್ಲ. ಹಿಂದೂ ಕಾರ್ಯಕರ್ತರ ಕೊಲೆಗಳನ್ನು ತಮ್ಮ ರಾಜಕೀಯ ಮೆಟ್ಟಿಲುಗಳಾಗಿ ಬಳಸಿಕೊಳ್ಳುತ್ತಿದ್ದಾರೆ. ಕಾರ್ಯಕರ್ತರ ತೊಂದರೆಗಳಿಗೆ ಬೆಂಬಲವಾಗಿ ನಿಲ್ಲುತ್ತಿಲ್ಲ. ಹಿಂದುತ್ವದ ಹೆಸರಿನಲ್ಲಿ ಗೆದ್ದು ದೊಡ್ಡದೊಡ್ಡನಾಯಕರಾಗಿ ಬೆಳೆದವರು ಇಂದು ಹಿಂಬದಿಯಿಂದ ಜಿಹಾದಿಗಳೊಂದಿಗೆ ಸೇರಿ ಉದ್ದಿಮೆಯ ಪಾಲುದಾರಿಕೆಯನ್ನು ಹೊಂದುತ್ತಿದ್ದಾರೆ ಎಂಬುದಾಗಿ ಜನಸಾಮಾನ್ಯರು ಮಾತನಾಡುತ್ತಾರೆ. ಇದಲ್ಲದೆ ದೊಡ್ಡಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಭಾಷಣಗಳಲ್ಲಿ ಮಾತ್ರ ಹಿಂದುತ್ವ ಅಡಗಿದೆ. ಶೌರ್ಯವಿಲ್ಲದ ಅಪ್ರಯೋಜಕರು ಮುಖ್ಯಮಂತ್ರಿಗಳು, ಗೃಹಮಂತ್ರಿಗಳೂ ಆಗುತ್ತಾ ಕಠಿಣ ಕ್ರಮಕೈಗೊಳ್ಳುತ್ತೇವೆ ಎನ್ನುವ ಹೊಸಕಾಮಿಡಿಯ ಸೃಷ್ಟಿಗೆ ಕಾರಣರಾಗಿದ್ದಾರೆ. ಜನರ ಬೆಂಬಲವೇ ಇಲ್ಲದ ಒಬ್ಬ ಅಪ್ರಯೋಜಕ ಅಹಂಕಾರೀ ವಿದೂಷಕ ರಾಜ್ಯಧ್ಯಕ್ಷರಾಗುತ್ತಾರೆ. ಗ್ರಾಮಪಂಚಾಯತಿ ಚುನಾವಣೆಗೂ ಮೋದಿ ಹೆಸರು ಹೇಳಿ ಓಟುಕೇಳುವಂತ ದೈನೇಸೀ ಸ್ಥಿತಿಗೆ ಪಕ್ಷ ಬಂದಿದೆ. ಎಂದು ಜನಮಾತನಾಡುತ್ತಿದ್ದಾರೆ ಇದಕ್ಕೆ ಹೊಣೆಗಾರರು ಯಾರು?
- ಸಿಧ್ಧಾಂತಕ್ಕೆ ಬೆನ್ನುಹಾಕಿ ಕಣ್ಣುಮುಚ್ಚಿಕುಳಿತಿರುವ ಸಂಘದ ಹಿರಿಯರು – ಇಂದು ಸಂಘವು ಬಿಜೆಪಿಯಮೇಲಿನ ತನ್ನಹಿಡಿತವನ್ನು ಕಳೆದುಕೊಂಡಂತೆ ತೋರುತ್ತಿದೆ. ಕಂಡ ಕಂಡವರು ಸಿದ್ದಾಂತದ ಗಂಧಗಾಳಿಯೇ ಇಲ್ಲದವರು ಇಂದು ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಬಂದು ತುಂಬಿಕೊಳ್ಳುತ್ತಿದ್ದಾರೆ. ಬಿಜೆಪಿ ಇಂತಹವರಿಗೆ ವಿಶೇಷವಾಗಿ ಮಣೆಹಾಕಿ ಸ್ವಾಗತಿಸುತ್ತಿದೆ. ಸಂಘದಹಿರಿಯರು ರಾಜಕೀಯಮಾಡುವುದು ನಮ್ಮ ಕೆಲಸವಲ್ಲ, ನಮಗೆ ಯಾರೂ ಅಸ್ಪೃಷ್ಯರಲ್ಲ ಎನ್ನುತ್ತಾ ಅಧಿಕಾರದಲ್ಲಿರುವವರ ತಪ್ಪುಗಳನ್ನು ಎತ್ತಿ ತೋರಿಸುತ್ತಿಲ್ಲ. ಭ್ರಷ್ಟರನ್ನು ಪ್ರಶ್ನಿಸುತ್ತಿಲ್ಲ, ಕೇಂದ್ರಕ್ಕೆ ಸರಿಯಾದ ಎಚ್ಚರಿಕೆಯ ಮಾಹಿತಿಯನ್ನು ನೀಡುತ್ತಿಲ್ಲ. ಸಂಘದ ಪ್ರಾಮಾಣಿಕ ಕಾರ್ಯಕರ್ತರನ್ನು ಮುಂಚೂಣಿ ನಾಯಕರನ್ನಾಗಿ ಬೆಳೆಸುತ್ತಿಲ್ಲ. ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಇವರಿಗೆ ಟಿಕೆಟ್ ತಪ್ಪಿಸಿದವರು ಯಾರು? ಉತ್ತರ ಎಲ್ಲರಿಗೂ ಗೊತ್ತಿದೆ ಯೋಗ್ಯತೆ ಇಲ್ಲದೆ ಕೇಂದ್ರದಿಂದ ಅಪ್ರಯೋಜಕಎಂದು ಪರಿಗಣಿಸಲ್ಪಟ್ಟು ಮೂಲೆಗುಂಪಾದ ಮಾಜಿಮುಖ್ಯಮಂತ್ರಿ ಹಾಗೂ ಜನರವಿಶ್ವಾಸ ಕಳೆದುಕೊಂಡು ಮೂಲೆಗುಂಪಾಗುತ್ತಿರುವ ವಿದೂಷಕಪಾತ್ರಧಾರಿ ಪಾರ್ಟಿ ಅಧ್ಯಕ್ಷ ಹಾಗೂ ಟಿಕೆಟ್ ವಂಚಿತ ಮಾಜಿ ಶಾಸಕರು ಈಮೂವರು ಪುತ್ತಿಲ ಅವರ ಜನಪ್ರಿಯತೆಯನ್ನು ಸಹಿಸದೆ ಅವರು ಬೆಳೆದರೆ ತಾವು ಮೂಲೆಗುಂಪಾಗುತ್ತೇವೆನ್ನುವ ಭಯದಿಂದ ಟಿಕೆಟ್ ತಪ್ಪಿಸಿದ್ದು ಚಿಕ್ಕಮಗುವಿಗೂ ತಿಳಿದಿರುವ ವಿಷಯ. ಈ ಅನ್ಯಾಯವನ್ನು ಸಂಘ ವಿರೋಧಿಸಬೇಕಿತ್ತು. ಸ್ವಾರ್ಥಕ್ಕಾಗಿ ಪಕ್ಷದ ಹಿತವನ್ನು ಬಲಿಕೊಡುತ್ತಿರುವ ಅಯೋಗ್ಯರನ್ನು ಸಮರ್ಥನೆಮಾಡುತ್ತಿರುವ ಸಂಘದ ಹಿರಿಯರ ತಲೆಯಲ್ಲಿ ಏನಿದೆ? ತಮ್ಮದೇ ಕಾರ್ಯಕರ್ತರಿಂದ ಇಂದು ಸಂಘದ ಹಿರಿಯರು ಛಿ, ತೂ, ಹೇಳಿಸಿಕೊಳ್ಳುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇಡೀಜೀವನವನ್ನೇ ಹಿಂದೂ ಸಮಾಜಕ್ಕೆ ಅರ್ಪಣೆಮಾಡಿದ ಪ್ರಖರ ಹಿಂದುತ್ವವಾದಿ ಪ್ರಮೋದ್ ಮುತಾಲಿಕರಿಗೆ ಕರ್ನಾಟಕದಲ್ಲಿ ಒಂದು ಅವಕಾಶ ಕೊಡಲು ಬಿಜೆಪಿ ಸಿದ್ಧವಿಲ್ಲ. ಅನೇಕ ಹಿಂದೂನಾಯಕರನ್ನು ವ್ಯವಸ್ಥಿತವಾಗಿ ಬದಿಗೆ ಸರಿಸಿದ್ದು ಬಿಜೆಪಿಯ ಸಾಧನೆಯಾದರೆ, ಇಲ್ಲಿ ಸಂಘದ ನಿಷ್ಕ್ರಿಯತೆಯೂ ಎದ್ದುಕಾಣುತ್ತಿದೆ. ಇಂದು ಯುವಜನತೆ ಸಂಘದಿಂದ ದೂರಾಗುತ್ತಿರುವುದು ಭಾಸವಾಗುತ್ತಿದೆ. ತಪ್ಪುಗಳನ್ನು ಎತ್ತಿಕೇಳುವವರನ್ನು ಸಂಘವೇ ದೂರ ಇಡುತ್ತದೆ ಎನ್ನುವ ಭಾವನೆ ಪ್ರಾಮಾಣಿಕ ಸ್ವಯಂಸೇವಕರ ಮನದಲ್ಲಿ ಮೂಡಲಾರಂಭಿಸಿದೆ.
- ಹೆಚ್ಚುತ್ತಿರುವ ಅಲ್ಪಸಂಖ್ಯಾತರ ಜನಸಂಖ್ಯೆ– ಮುಸಲ್ಮಾನರು ಹಾಗೂ ಕ್ರಿಶ್ಚಿಯನ್ನರು ವ್ಯವಸ್ಥಿತವಾಗಿ ಮತಾಂತರ ಮಾಡುತ್ತಾ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಹಿಂದುಗಳು ಒಂದುಮಕ್ಕಳಿಗೆ ಸೀಮಿತರಾಗಿ ವೇಗವಾಗಿ ಅಲ್ಪಸಂಖ್ಯಾತರಾಗುತ್ತಿದ್ದಾರೆ. ಹಿಂದುಗಳ ಮಕ್ಕಳು ವಿದೇಶದಲ್ಲಿ ಉದ್ಯೋಗ ಅರಸುತ್ತಿದ್ದಾರೆ. ಭಾರತದಲ್ಲಿರುವ ಉದ್ದಿಮೆಗಳು, ಅಂಗಡಿವ್ಯಾಪಾರಗಳು ಜಿಹಾದಿಗಳ ಪಾಲಾಗುತ್ತಿವೆ. ಹಳ್ಳಿಗಳು ವೃದ್ದಾಶ್ರಮಗಳಾಗುತ್ತಿವೆ. ಪ್ರಜಾಪ್ರಭುತ್ವದಲ್ಲಿ ಸಂಖ್ಯೆಯೇ ಪ್ರಧಾನವಾಗಿದೆ. ಹಿಂದುಗಳು ಈವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು.
- ಸೆಕ್ಯುಲರ್ ಮನಸ್ಥಿತಿಯ ಹಿಂದೂ ಶಿಕ್ಷಣ ಸಂಸ್ಥೆಗಳು– ಮಿಷನರಿ ಶಾಲೆಗಳು ನಮ್ಮ ಹಿಂದು ಸಂಸ್ಕೃತಿಯ ನಾಶಕ್ಕೆ ಕಟಿಬದ್ಧವಾಗಿವೆ. ಆದರೆ ಹಿಂದೂಗಳ ಶಾಲೆಗಳು ಹಿಂದೂ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿವೆಯಾ ಎಂದು ವಿಮರ್ಷಿಸಿದಾಗ ಉತ್ತರ “ಇಲ್ಲ” ಎಂಬುದಾಗಿಯೇ ಹೇಳಬೇಕು. ಧರ್ಮಶಿಕ್ಷಣ ಇಲ್ಲದ ಶಿಕ್ಷಕರಿಂದಲೇ ಇಂತಹ ಶಾಲೆಗಳು ನಡೆಯುತ್ತಿವೆ. ಆಡಳಿತ ಮಂಡಳಿ ದೇಣಿಗೆಯತ್ತ ಮಾತ್ರ ಲಕ್ಷವಹಿಸುತ್ತಿದೆ. ಅಲ್ಲಿಯೂ ಹಿಂದುತ್ವಕ್ಕೆ ನೆಲೆ ಇಲ್ಲದಾಗಿದೆ. ಇಂದು ಹಿಂದುತ್ವವೂ ವ್ಯವಹಾರದ ಹಾಗೂ ರಾಜಕೀಯದ ಟ್ರಂಪ್ ಕಾರ್ಡ್ ಆಗಿ ಬಳಕೆಯಾಗುತ್ತಿರುವುದು ದುರಂತವಾಗಿದೆ. ಈ ಎಲ್ಲವಿಚಾರಗಳನ್ನು ನೋಡುವಾಗ ನಮ್ಮ ಮುಂದೆ ಹತಾಶೆ ನಿರಾಶೆಗಳೇ ಗೋಚರಿಸುತ್ತವೆ. ಹಾಗಾದರೆ ನಮಗೆ ಭವಿಷ್ಯವೇ ಇಲ್ಲವೇ ಎಂದು ಚಿಂತಿಸಿದರೆ ಹಾಗೇನೂಇಲ್ಲ ಭವಿಷ್ಯ ಆಶಾದಾಯಕವಾಗಿದೆ. ಆದರೆ ನಾವು ಕುರುಕ್ಷೇತ್ರದ ಅರ್ಜುನನಂತಿದ್ದೇವೆ. ನಮಗೆ ಕೃಷ್ಣನ ಮಾರ್ಗದರ್ಷನದ ಅವಷ್ಯಕತೆ ಇದೆ. ಗೀತೆಯನ್ನು ಯತಾರ್ಥವಾಗಿ ಅರ್ಥೈಸಿಕೊಂಡು ನಾವು ಈ ಮೇಲಿನ ಅಧರ್ಮದ ವಿರುದ್ಧ ಸಂಘಟಿತರಾಗಿ ಹೋರಾಡಬೇಕಿದೆ. ಇದಕ್ಕಿರುವ ಒಂದೇದಾರಿ ಸಂಘಟನಾತ್ಮಕ ಸಂಘರ್ಷ ನಮಗಿರುವ ಆಶಾಕಿರಣದಬಗ್ಗೆ ಮುಂದಿನ ಶುಕ್ಲಪಕ್ಷದಲ್ಲಿ ಹಿಂದೂ ಧರ್ಮ ಎನ್ನುವ ಲೇಖನದಲ್ಲಿ ಬೆಳಕುಚೆಲ್ಲೋಣ.
- ಶ್ರೀಜಿ
ಜೈ ಹಿಂದ್ – ಜೈ ಶ್ರೀರಾಮ್