ಹಿಂದು ದೇವಾಲಯಗಳು ಮತ್ತು ಸಾಮಾಜಿಕ ಜವಾಬ್ಧಾರಿ.

You are currently viewing ಹಿಂದು ದೇವಾಲಯಗಳು ಮತ್ತು ಸಾಮಾಜಿಕ ಜವಾಬ್ಧಾರಿ.

ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಆದರೂ ಭಾರತದಲ್ಲಿ ಮತಾಂತರ ಏಕೆ ನಡೆಯುತ್ತಿದೆ. ಹಿಂದುಗಳೇಕೆ ಜಾತಿಗಳಲ್ಲಿ ವಿಭಜಿತರಾಗಿದ್ದಾರೆ? ಧರ್ಮ ರಕ್ಷಣೆಯಲ್ಲಿ ದೇವಾಲಯಗಳ ಪಾತ್ರವೇನು? ಸಮಾಜಕ್ಕೆ ಮಾರ್ಗದರ್ಶನ ಕೊಡುವಲ್ಲಿ ದೇವಾಲಯಗಳು ಎಡವುತ್ತಿವೆಯೇ?  ಈ ಎಲ್ಲಾ ಪ್ರಶ್ನೆಗಳೂ ನಮ್ಮನ್ನು ಬಹುವಾಗಿ ಕಾಡುತ್ತವೆ. ಇದಕ್ಕೆ ನಾವು ಉತ್ತರವನ್ನು ಕಂಡುಕೊಳ್ಳಲೇಬೇಕು.

ದೇವಾಲಯಗಳನ್ನು ಹಿಂದೂ ವಿರೋಧೀ ಕಾಂಗ್ರೇಸಿಗರು ಅವರ ಎಪ್ಪತ್ತು ವರ್ಷಗಳ ದೀರ್ಘಾವಧಿ ಆಡಳಿತದಲ್ಲಿ ಸರಕಾರದ ನಿಯಂತ್ರಣಕ್ಕೆ ತಂದರು. ಇದರಿಂದ ಹಿಂದೂ ಧರ್ಮಪ್ರಚಾರವನ್ನು ದೇವಾಲಯಗಳಲ್ಲಿ ತಡೆಯುವ ಪ್ರಯತ್ನವನ್ನು ಮಾಡಿದರು ಮತ್ತು ದೇಶದಲ್ಲಿ ವಿದ್ರೋಹಿಗಳಿಗೆ ಮತಾಂತರಕ್ಕೆ ಪೂರಕ ವಾತಾವರಣ ನಿರ್ಮಿಸಿದರು. ಇದೆಲ್ಲವೂ ನೇಹರೂ ಮೂಲದ ಗಾಂಧಿಕುಟುಂಬದ ಹಿಂದೂದ್ರೋಹದ ಉದಾಹರಣೆಗಳು. ಈ ದೌರ್ಜನ್ಯ 70 ವರ್ಷಗಳ ಕಾಂಗ್ರೇಸ್‌ ಡಳಿತದಲ್ಲಿ ನಿರಂತರವಾಗಿ ನಡೆಯಿತು. ರಾಮಮಂದಿರ ನಿರ್ಮಾಣಕ್ಕೂ ಕಾಂಗ್ರೇಸಿಗರೇ ತಡೆಯಾಗಿದ್ದರು. ಹಜ್‌ ಯಾತ್ರೆಗೆ ಮುಸಲಿಮರಿಗೆ ಕೊಡುತ್ತಿದ್ದ ಸಾವಿರಾರು ಕೋಟಿ ಸಬಸಿಡಿಯೂ ಕಾಂಗ್ರೇಸಿನದೇ ಮುಸ್ಲಿಮ್‌ ತುಷ್ಟೀಕರಣದ ಕೊಡುಗೆ ಯಾಗಿತ್ತು. ಇಂದು ಹಿಂದೂ ದೇವಾಲಯಗಳನ್ನು ಸರ್ಕಾರದಿಂದ ಮುಕ್ತ ಗೊಳಿಸಿ ಅವುಗಳನ್ನು ಭಕ್ತರೇ ನಿರ್ವಹಿಸುವಂತೆ ಕಾನೂನು ಬದಲಾವಣೆ ತರಬೇಕು. ಇದನ್ನು ನಮ್ಮದು ಹಿಂದುತ್ವದ ಪಕ್ಷ ಎನ್ನುವ ಬಿಜೆಪಿ ಸರಕಾರ ಮಾಡಬೇಕಿದೆ ದೇಶದೆಲ್ಲೆಡೆ ಶೀಘ್ರವಾಗಿ ಮಾಡಬೇಕಿದೆ. ಹೀಗೆ ದೇವಾಲಯಗಳ ರಕ್ಷಣೆಯ ಮೂಲಕ ಭಾರತೀಯ ಸಂಸ್ಕೃತಿಯ ರಕ್ಷಣೆ ಆಗಬೇಕಿದೆ.

ಕಾನೂನು ರೀತ್ಯಾ ಬದಲಾವಣೆ ಒಂದು ವಿಚಾರ. ಈಗಿರುವ ಪರಿಸ್ಥಿತಿಯಲ್ಲಿ ದೇವಾಲಯಗಳು ಅಥವಾ ದೇವಾಲಯಗಳ ಆಡಳಿತಮಂಡಳಿಗಳು ತುರ್ತಾಗಿ ಏನು ಮಾಡಬೇಕು? ಈ ಕುರಿತು ಚಿಂತಿಸೋಣ.

ದೇವಾಲಯಗಳ್ಲಲಿ ನಡೆಯುವ ಪೂಜಾಸಬಂಧಿ ಕೆಲಸಗಳು ದೇವಾಲಯಗಳ ಒಂದು ಆಯಾಮ ಮಾತ್ರ. ಅಥವಾ ದೇವಾಲಯವನ್ನು ಒಂದು ರಥಕ್ಕೆ ಹೋಲಿಸಿದರೆ ಆಗಮ ಶಾಸ್ತ್ರಾನುಗುಣ ನಿತ್ಯದ ಧಾರ್ಮಿಕ ಚಟುವಟಿಕೆಗಳು ದೇವಾಲಯವೆನ್ನುವ ರಥದ ಒಂದು ಚಕ್ರ ಮಾತ್ರವಾಗಿದೆ. ಇದರ ಇನ್ನೊಂದು ಚಕ್ರ, ಸಾಮಾಜಿಕ ಹೊಣೆಗಾರಿಕೆ ಅಥವಾ ಜವಾಬ್ದಾರಿ ಯಾಗಿದೆ. ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುವುದು ಹಾಗೂ ಯುವ ಪೀಳಿಗೆಯನ್ನು ಸಾಂಸ್ಕೃತಿಕವಾಗಿ, ನೈತಿಕವಾಗಿ ಶ್ರೀಮಂತ ಗೊಳಿಸುವುದು. ಇದು ದೇವಾಲಯಗಳ ಸಾಮಾಜಿಕ ಜವಾಬ್ದಾರಿಯಾಗಿದೆ.  ಇಂದು ಎಲ್ಲಾ ದೇವಾಲಗಳಲ್ಲಿಯೂ ಮೊದಲನೆಯ ಕೆಲಸ ಪೂಜಾ ಉತ್ಸವಾದಿ ಆಚರಣೆಗಳು ಚೆನ್ನಾಗಿಯೇ ನಡೆಯುತ್ತಿವೆ. ಆದರೆ ಎರಡನೆಯ ಕೆಲಸ ಸಾಮಾಜಿಕ ಕಾಳಜಿ ಸರಿಯಾಗಿ ನಡೆಯುತ್ತಿಲ್ಲ. ಈಗ ನಾವು ಎರಡನೆಯ ವಿಚಾರದಬಗ್ಗೆ ಏನೆಲ್ಲಾ ಮಾಡಬಹುದೆಂಬುದಾಗಿ ಚಿಂತನೆ ನಡೆಸಬೇಕು ಹಾಗೂ ಸೂಕ್ತ ಯೋಜನೆಯನ್ನು ರೂಪಿಸಿ ಅದನ್ನು ದೇವಾಲಯಗಳಲ್ಲಿ ಅನುಷ್ಠಾನಕ್ಕೆ ತರುವಪ್ರಯತ್ನ ಮಾಡಬೇಕು.

ನಮ್ಮ ಪ್ರಕ್ರಿಯೆಯ ಮುಖ್ಯ ಉದ್ದೇಶಗಳೇನು.

ಹಿಂದುಗಳು ನಿರಂತರ ದೇವಾಲಯದ ಸಂಪರ್ಕಕ್ಕೆಬರುವಂತಾಗಬೇಕು.
ಯುವ ತಲೆಮಾರು ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪರ್ಕ ಹಾಗೂ ಶ್ರದ್ಧೆಯನ್ನು ಬೆಳಸಿಕೊಳ್ಳಬೇಕು.
ನಮ್ಮ ಕಲೆ ಸಂಸ್ಕೃತಿ ಸಂಪ್ರದಾಯಗಳು ಮುಂದಿನ ತಲೆಮಾರಿಗೆ ಮುಂದುವರಿಯಬೇಕು.
ದೇವಾಲಯಗಳು ಕೇವಲ ಆಧ್ಯತ್ಮಿಕ ಕೇಂದ್ರಗಳಾಗದೆ ಸಾಮಾಜಿಕ ಕಾರ್ಯಗಳಲ್ಲಿಯೂ ಸಕ್ರಿಯವಾಗಬೇಕು.

ಈ ಮೇಲಿನ ಉದ್ದೇಶ ಸಾಧನೆಗೆ ದೇವಾಲಯಗಳು ಏನುಮಾಡಬಹುದು ?

ದೇವಾಲಯಗಳ ಒಂದು ಆಯಾಮ ಆಧ್ಯಾತ್ಮ ವಾದರೆ ಇನ್ನೋಂದು ಆಯಾಮ ಶಿಕ್ಷಣವಾಗಬೇಕು.
ಪ್ರತಿಯೊಂದು ದೇವಾಲಯಗಳೂ ಚಿಕ್ಕಮಗುವಿನಿಂದಲೇ ಸನಾಜಕ್ಕೆ ನೈತಿಕತೆಯುಕ್ತ ಹಿಂದುತ್ವದ ಪಾಠಮಾಡಬೇಕು. ಇಂದು ಇಂತಗ ವ್ಯವಸ್ಥೆ ಯಾವುದೇದೇವಾಲಯಗಳಲ್ಲಿ ನೋಡಲು ಸಿಗುತ್ತಿಲ್ಲ.
ಹಿಂದುತ್ವದ ಪಾಠವೆಂದರೆ ಏನು?

ಭಾರತೀಯ ಕಲೆ, ಸಂಸ್ಕೃತಿ, ಹಾಗೂ ಸಂಸ್ಕೃತ ಭಾಷೆ ಮತ್ತು ಶಾಸ್ತ್ರ ಸಂಬಂಧಿ ಪಾಠಗಳು ನಡೆಯಬೇಕು. ಈ ಮೂಲಕ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಬೇಕು.

ಇವುಗಳನ್ನು ಕಲಿಯಲು ಯಾರು ಬರುತ್ತಾರೆ ? ಮಕ್ಕಳಿಗೆ ಆವರ ಶಾಲಾ ಶಿಕ್ಷಣವೇ ಹೊರೆಯಾಗುತ್ತದೆ ಯಲ್ಲವೇ?.

ಇಂದು ಹಿಂದುಗಳಿಗೆ ಶಾಲಾ ಶಿಕ್ಷಣವೇ ಹೊರೆಯಾಗಿದೆ. ತಂದೆ ತಾಯಿಗಳ ಗಮನವೆಲ್ಲಾ ಮಕ್ಕಳ ವಿದ್ಯಾಭ್ಯಾಸದ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. ಅತಿಯಾದ ಶಾಲಾ ಶುಲ್ಕ, ಮೇಲಿನಿಂದ ಅತಿಯಾದ ಡೊನೇಶನ್‌ ಇವುಗಳಿಂದ ಇಂದು ಮಕ್ಕಳ ವಿಧ್ಯಾಭ್ಯಾಸ ಸಾಮಾನ್ಯರಿಗೆ ಹೊರೆಯಾಗಿದೆ. ಹಾಗೂ ಇಂದಿನ ಶಿಕ್ಷಣದಲ್ಲಿ ನೈತಿಕತೆ ಹಾಗೂ ಧರ್ಮವೇ ಇಲ್ಲವಾಗಿದೆ. ಇದಲ್ಲದೆ ಕ್ರಿಶ್ಚಿಯನ್‌ ಮಿಷನರಿ ಪ್ರೇರಿತ ಕಾನ್ವೆಂಟ್‌ ಶಾಲೆಗಳಲ್ಲಿ ಹಿಂದೂ ಸಂಸ್ಕೃತಿಯನ್ನು ನಾಶಮಾಡುವ ಕೆಲಸಗಳು ನಡೆಯುತ್ತಿವೆ. ತಿಲಕ ಧಾರಣೆ ಮಾಡುವುದು , ಹೂ ಮುಡಿಯುವುದು ಬಳೆತೊಡುವುದು, ಜಡೆ ಮುಂತಾದುವನ್ನು ತಡೆಯಲಾಗುತ್ತದೆ. ಇಲ್ಲಿಯೇ ಹಿಂದೂಸಮಾಜದ ಯುವ ಕುಡಿಗಳನ್ನು ಹಿಂದುತ್ವದಹಾದಿ ತಪ್ಪಿಸಿ ಸೆಕ್ಯುಲರ್‌ ವೈರಸ್ಸನ್ನು ಅವರ ತಲೆಗೆ ತುಂಬಾಲಾಗುತ್ತದೆ. ಇಲ್ಲಿಂದಲೇ ಹಿಂದು ನವಪೀಳಿಗೆಯ ಭವಿಷ್ಯ ಧರ್ಮವಿಹೀನ ವಾಗುವತ್ತ ವಾಲುತ್ತಿದೆ.

ಈ ಮೇಲಿನ ಅಪಾಯದಿಂದ ಸಮಾಜವನ್ನು ತಪ್ಪಿಸಲು ಪ್ರತೀ ದೇವಾಲಯಗಳೂ ಪ್ರಾಥಮಿಕ ಶಿಕ್ಷಣಕ್ಕೆ ಗಮನ ಹರಿಸಬೇಕು. ದೇವಾಲಯ ಪರಿಸರದಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಪರಿಸರದ ಪ್ರಭಾವದಿಂದಲೇ ಸಾಂಸ್ಕೃತಿಕ ಹಾಗೂ ಧಾರ್ಮಿಕ ಶ್ರದ್ಧೆಗಳನ್ನು ಬೆಳೆಸಿಕೊಳ್ಳುತ್ತಾರೆ. ಕ್ರಿಶ್ಚಿಯನ್‌ ಶಾಲೆಗಳು ಯಾವಾಗಲೂ ಚರ್ಚಿನ ಪರಿಸರದಲ್ಲಿಯೇ ಇರುತ್ತವೆ. ಹಿಂದುಮಕ್ಕಳನ್ನು ಚರ್ಚುಗಳಲ್ಲಿ ಪ್ರಾರ್ಥಿಸುವಂತೆ ಪ್ರೇರೇಪಿಸಲಾಗುತ್ತದೆ. ಏಕದೇವಾರಾಧನೆ ಹೆಸರಿನಲ್ಲಿ ಬೋಧನೆ ಮಾಡುತ್ತಾ ಹಿಂದುಗಳ ಆರಾಧನಾ ಪದ್ದತಿಯನ್ನು ಇಲ್ಲಿ ಅವಹೇಳನ ಮಾಡಲಾಗುತ್ತದೆ. ನಮ್ಮ ಮಕ್ಕಳು ಹಿಂದುತ್ವದ ಆಚಾರವಿಚಾರಗಳಲ್ಲಿ ಶ್ರದ್ಧೆಗಳನ್ನು ಕಳೆದುಕೊಳ್ಳುವಂತೆ ಮಾಡಲಾಗುತ್ತದೆ. ಇದಕ್ಕೆ ಬದಲಾಗಿ ಹಿಂದೂ ದೇವಾಲಯಗಳು ಎಲ್ಲಿಯೂ ಶಾಲೆಗಳನ್ನು ದೇವಾಲಯದ ಪರಿಸರದಲ್ಲಿ ನಡೆಸುತ್ತಿಲ್ಲ. ಇದ್ದರೂ ಬಹಳ ವಿರಳ ಎನ್ನಬಹುದು. ನಮ್ಮ ದೇವಾಲಯಗಳ ಪರಿಸರದಲ್ಲಿ ಕಲ್ಯಾಣಮಂಟಪಗಳು. ಯಾತ್ರೀ ನಿವಾಸಗಳು, ಯಾತ್ರಾರ್ಥಿ ಸಂಬಂಧಿ ಅಂಗಡಿಗಳು, ಇವೇ ತಲೆ ಎತ್ತುತ್ತಿವೆ ಬದಲಾಗಿ, ಪ್ರಾಥಮಿಕ ಶಾಲೆಗಳಾಗಲೀ, ಬಾಲ ಮಂದಿರಗಳಾಗಲೀ, ಧಾರ್ಮಿಕ ಗ್ರಂಥಾಲಯಗಳಾಗಲೀ ಪಾಠಶಾಲೆಗಳಾಗಲೀ ಯಾವುದೂ ಎಲ್ಲಿಯೂ ಕಾಣಿಸುತ್ತಿಲ್ಲ. ಇದಕ್ಕೆ ನಮ್ಮ ಬೌದ್ಧಿಕ ದೌರ್ಬಲ್ಯ ಹಾಗೂ ಸಮಾಜದ ಹಿರಿಯರ ದೂರದೃಷ್ಟಿಯಯ ಕೊರತೆಯೇಕಾರಣವಾಗಿದೆ.

ದೇವಾಲಯಗಳು ಏನುಮಾಡಬೇಕು ?

ಆರ್ಥಿಕವಾಗಿ ಬಲಿಷ್ಟವಾಗಿರುವ ಪ್ರತಿಯೊಂದು ದೇವಾಲಯಗಳೂ ಮೊದಲ ಹಂತದಲ್ಲಿ ದೇವಾಲಯ ಪರಿಸರದಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆಯಬೇಕು. ಶಿಶುವಿಹಾರಗಳಿಂದ ಆರಂಭಿಸಿ ಏಳನೇ ತರಗತಿಯವರೆಗೆ ಅತ್ಯಲ್ಪ ಶುಲ್ಕದಲ್ಲಿ ಉತ್ಕೃಷ್ಟವಾದ ಧರ್ಮಾಧಿಷ್ಟ ಪ್ರಾಥಮಿಕ ವಿದ್ಯಾಭ್ಯಾಸವು ಎಲ್ಲಾ ಹಿಂದೂಗಳಿಗೂ ಜಾತಿ ಬೇಧವಿಲ್ಲದೆ ಈ ದೇವಾಲಯಾಶ್ರಿತ ಶಾಲೆಯಲ್ಲಿಸಿಗಬೇಕು. ಆಡಳಿತಮಂಡಳಿಗಳು ಈ ವಿಚಾರದಲ್ಲಿ ಚಿಂತನೆ ನಡೆಸಬೇಕು. ಆಗ ಉದ್ಯಮವಾಗಿ ಬೆಳೆದಿರುವ ನೈತಿಕತೆಯಿಲ್ಲದ ಆಧುನಿಕ ಶಿಕ್ಷಣ ಸಂಸ್ಥೆಗಳೂ ಆನಿವಾರ್ಯವಾಗಿ ನೈತಿಕ ಹಾಗೂ ಸಂಸ್ಕಾರಯುತ ಶಿಕ್ಷಣ ಸಂಸ್ಥೆಗಳಾಗಿ ಬದಲಾಗುವುವು. ಅನಿವಾರ್ಯವಾಗಿ ಕ್ರಿಶ್ಚಿಯನ್‌ ಶಾಲೆಗಳಿಗೆ ಹೋಗಾಬೇಕಾದ ಹಿಂದೂ ಮಕ್ಕಳು ನಮ್ಮ ದೇವಾಲಯಪೋಷಿತ ಶಾಲೆಗಳಲ್ಲಿ ಕಲಿಯುವಂತಾಗುತ್ತದೆ. ಇದರಿಂದ ಧಾರ್ಮಿಕ ಶ್ರದ್ಧೆ, ರಾಷ್ಟ್ರೀಯತೆ, ನೈತಿಕ ಶಿಕ್ಷಣ ಎಲ್ಲವೂ ಹಿಂದೂ ಮಕ್ಕಳಿಗೆ ಲಭ್ಯವಾಗುತ್ತದೆ. ಮತ್ತು ಇದರಿಂದ ಉತ್ತಮ ಸಂಸ್ಕಾರಯುತ ಸಮಾಜದ ನಿರ್ಮಾಣವಾಗುತ್ತದೆ.  ಇಂತಹ ಶಾಲೆಗಳನ್ನು ಪ್ರತಿದೇವಾಲಯಗಳೂ ನಡೆಸುವಂತಾಗಬೇಕು ಕನಿಷ್ಠ 5000 ಕುಟುಂಬಗಳಿಗೆ ಇಂತಹ ಒಂದೊಂದು ಪ್ರಾಥಮಿಕ ಶಾಲೆಗಳನ್ನು ಎಲ್ಲಾ ಜಿಲ್ಲೆ ಹಾಗೂ ತಾಲೋಕುಗಳಲ್ಲಿ ತೆರೆಯಬೇಕು. ಇಲ್ಲಿ ಉತ್ತಮ ಶಿಕ್ಷಕರಿಂದ ಆಧುನಿಕ ಶಿಕ್ಷಣ ಹಾಗೂ ಭಾರತೀಯ ಪರಂಪರೆ ಎರಡನ್ನೂ ಕಲಿಸಬೇಕು. ಆಂಗ್ಲ ಹಾಗೂ ಸಂಸ್ಕೃತ ಮತ್ತು ಸ್ಥಳೀಯ ಭಾಷೆ ಮೂರೂ ಭಾಷೆಗಳನ್ನು ಕಲಿಸಬೇಕು. ಶಿಕ್ಷಣ ಮಾಧ್ಯದಲ್ಲಿಯೂ ಎಲ್ಲಾ ಆಯ್ಕೆಗಳಿರಬೇಕು. ಕಂಪ್ಯೂಟರ್‌ ಶಿಕ್ಷಣ, ಆತ್ಮ ರಕ್ಷಣೆ (ಕರಾಟೆ ಕುಸ್ತಿ ಮುಂತಾಗಿ), ಸಂಗೀತ, ಭರತನಾಟ್ಯ, ಸ್ಥಳೀಯ ಜಾನಪದ ಕಲೆ, ಈಜು, ಕೃಷಿ, ಮುಂತಾಗಿ ಎಲ್ಲಾ ವಿದ್ಯೆಗಳ ಪ್ರಾಥಮಿಕ ಶಿಕ್ಷಣ ಸಿಗಬೇಕು.

ವಿಭಜಿತ ಹಿಂದೂಸಮಾಜದ ಇಂದಿನ ಇನ್ನೊಂದು ದೊಡ್ಡ ಸಾಮಾಜಿಕ ಸಮಸ್ಯೆಯೆಂದರೆ ದುಡಿಯುವ ತಂದೆ ತಾಯಿಗಳಿಗೆ ಹುಟ್ಟುವ ಮಕ್ಕಳು ಮನೆಯಲ್ಲಿ ಒಂಟಿಯಾಗುತ್ತವೆ. ಯಾವುದೋ ಕೆಲಸದವಳು ಆ ಮಗುವನ್ನು ಬೆಳೆಸುವ ಪರಿಸ್ಥಿತಿ ಇದೆ. ಅನೇಕ ದೊಡ್ಡ ದೊಡ್ಡ ನಗರಗಳಲ್ಲಿ ಬೇಬಿ ಕೇರ್‌ ಇರುತ್ತವೆ ಅಲ್ಲಿಯೂ ಹಣ ಪಡೆದು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಸಂಸ್ಕಾರವಂತೂ ನೋಡಿಕೊಳ್ಳುವವರಿಗೇ ಇರುವುದಿಲ್ಲ. ಹೀಗಿರುವಾಗ ಹಿಂದೂ ಸಂಸ್ಕಾರಗಳು ಮಕ್ಕಳಿಗೆ ಎಲ್ಲಿಂದ ಸಿಗಬೇಕು? ಇದಕ್ಕೂ ದೇವಾಲಯಗಳೇ ಪರಿಹಾರವಾಗಬೇಕು. ದೇವಾಲಯದ ವಠಾರದಲ್ಲಿ ಬಾಲವಿಹಾರಗಳನ್ನು ತೆರೆಯಬೇಕು. ದೇವಾಲಯವೆಚ್ಚದಲ್ಲಿಯೇ ಇವುಗಳನ್ನು ನಿರ್ವಹಿಸಬೇಕು. ಇಲ್ಲವೇ ಕನಿಷ್ಟ ಶುಲ್ಕವನ್ನು ಪಾಲಕರಿಂದ ಪಡೆಯಬಹುದು. ಇಂತಹ ಬಾಲವಿಹಾರಗಳಲ್ಲಿ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಸಹಜವಾಗಿ ದೇವಾಲಯದ ವಾತಾವರಣವೇ ಸಂಸ್ಕೃತಿ ಹಾಗೂ ಸಭ್ಯತೆಯನ್ನು ಕಲಿಸುತ್ತದೆ. ಬೆಳೆಯುವ ಮಕ್ಕಳೂ ಸಂಸ್ಕಾರವಂತರಾಗುತ್ತಾರೆ. ಮಕ್ಕಳನ್ನು ಬಿಡಲು ಹಾಗೂ ಕರೆದುಕೊಂಡು ಹೋಗಲು ತಂದೆತಾಯಿಗಳೂ ನಿತ್ಯದೇವಾಲಯಕ್ಕೆ ಆಗಮಿಸುತ್ತಾರೆ. ಇದರಿಂದ ಇವರಲ್ಲಿಯೂ ಧಾರ್ಮಿಕ ಶ್ರದ್ಧೆ ಬೆಳೆಯಲು ಸಹಾಯವಾಗುತ್ತದೆ. ಈ ರೀತಿಯಲ್ಲಿ ಮಗುವಿನಿಂದ ಇಡೀ ಕುಟುಂಬವೇ ಸಂಸ್ಕಾರಯುತವಾಗುವುದು ಸಾಧ್ಯವಿದೆ. ಈ ಕೆಲಸವನ್ನು ದೇವಾಲಯಗಳು ಮಾಡಬೇಕಿವೆ.

ಹಿಂದಿನ ಕಾಲದಲ್ಲಿ ದೇವಾಲಯಗಳು ವಾಣಿಜ್ಯಕೇಂದ್ರಗಳೂ ಆಗಿದ್ದವು. ದೇವಾಲಯಗಳ ಪ್ರಾಂಗಣದಲ್ಲಿ ನಿತ್ಯೋಪಯೋಗೀ ವಸ್ತುಗಳ ಅಂಗಡಿಗಳನ್ನು ತೆರೆಯಬೇಕು. ಇದರಿಂದಾಗಿಯೂ ಜನರು ನಿತ್ಯವೂ ದೇವಾಲಯಕ್ಕೆ ಬರುತ್ತಾರೆ. ಹೂವು, ಹಣ್ಣು, ತರಕಾರಿ, ಹಾಲು, ಪೇಪರ್‌ ಇವೇ ಮೊದಲಾದ ವಸ್ತುಗಳು  ದೇವಾಲಯಪರಿಸರದಲ್ಲಿ  ಸಿಗುವಂತಿದ್ದರೆ ಆಗ ಸ್ಥಳೀಯರು ನಿತ್ಯ ಅಲ್ಲಿಗೆ ಬರುತ್ತಾರೆ. ಅಂಗಡಿ ನಡೆಸುವವನಿಗೆ ಜೀವನೋಪಾಯಕ್ಕೆ ದಾರಿಯಾದರೆ, ಸ್ಥಳಿಯರು ಅಂಗಡಿಗೆ ಬಂದಾಗ ದೇವಾಲಯಕ್ಕೆ ಹೋಗುವುದು ದೇವಾಲಯಕ್ಕೆ ಬಂದಾಗ ಅಂಗಡಿಗಳಿಗೆ ಹೋಗಿ ಖರೀದಿಮಾಡುವುದು ಮುಂತಾಗಿ ಮಾಡುವುದರಿಂದ ಆರ್ಥಿಕವಾಗಿಯೂ ಸಮಾಜವು ಬಲಿಷ್ಟವಾಗತೊಡಗುತ್ತದೆ. ದೇವಾಲಯಗಳು ಧಾರ್ಮಿಕ, ಶೈಕ್ಷಣಿಕ ಮತ್ತು ವಾಣಿಜ್ಯಕೇಂದ್ರಗಳಾಗಿ ಬೆಳೆಯಬೇಕು. ಹೀಗೆ ವಿವಿಧ ಆಯಾಮಗಳಲ್ಲಿ ದೇವಾಲಯಗಳು ಕಾರ್ಯನಿರ್ವಹಿಸಬೇಕಿದೆ.

ಇವಲ್ಲದೆ ಒಂದೊಂದು ದೇವಾಲಯಗಳು ಒಂದೊಂದು ತಳಿಯ ಸ್ವದೇಶೀ ಗೋವುಗಳನ್ನು ರಕ್ಷಿಸಿ ತಳಿಸಂರಕ್ಷಣೆ ಮಾಡಬೇಕು. ಒಂದೊಂದು ದೇವಾಲಯಗಳೂ ಒಂದೊಂದು ಸ್ಥಳೀಯ ಸಾಂಸ್ಕೃತಿಕ ಕಲಾಪ್ರಕಾರಗಳನ್ನು ಮಕ್ಕಳಿಗೆ ಕಲಿಸಿ ಬೆಳೆಸಬೇಕು, ಒಂದೊಂದು ದೇವಾಲಯಗಳೂ ಅಳಿವಿನಂಚಿನಲ್ಲಿರುವ ಕೃಷಿತಳಿಗಳು ಬೀಜಗಳು  ಮೊದಲಾಗಿ ಅವಸಾನದ ಅಂಚಿನಲ್ಲಿರುವ ತಳಿಗಳನ್ನು ಬೆಳೆಸಿ ಉಳಿಸುವ ಕೆಲಸಕ್ಕೆ ಮುಂದಾಗಬೇಕು. ಒಂದೊಂದು ದೇವಾಲಯಗಳೂ ವೇದಗಳ ಒಂದೊಂದು ಶಾಖೆಯನ್ನು ಉಳಿಸುವ ಕೆಲಸಮಾಡಬೇಕು. ವೇದಗಳನ್ನು ಕಲಿಸುವ ಆಚಾರ್ಯರನ್ನು ನೇಮಿಸಿಕೊಂಡು ಅವರಿಗೆ ಗೌರವಯುತವಾದ ವೇತನ ನೀಡಬೇಕು. ದೇವಾಲಯದಲ್ಲಿ ನಿತ್ಯ ವೇದಪಾರಾಯಣ ನಡೆಯುವಂತೆ ನೋಝಡಿಕೊಳ್ಳಬೇಕು. ಅನಿವಾರ್ಯವಿರುವಲ್ಲಿ ಅನಾಥಾಶ್ರಮಗಳನ್ನೂ ನಡೆಸಬೇಕು. ಸಾಮರ್ಥ್ಯವಿದ್ದೆಡೆಗಳಲ್ಲಿ ನಿರಂತರ ಅನ್ನ ದಾಸೋಹ, ಜ್ಞಾನ ದಾಸೋಹ ನಡೆಯುವಂತೆ ನೋಡಿಕೊಳ್ಳಬೇಕು. ಈ ರೀತಿಯಾಗಿ ಹಿಂದೂ ದೇವಾಲಯಗಳು ಸಮಾಜಕ್ಕೆ ಆಸ್ತಿಯಾಗಬೇಕು, ಸರಕಾರೀ ಖಜಾನೆತುಂಬುವ ದೇವಾಲಯಗಳ ಹಣವು ಹಿಂದೂ ಸಮಾಜದ ಉದ್ದಾರಕ್ಕೆ ಬಳಕೆಯಾಗುವಂತೆ ದೇವಾಲಯನಿರ್ವಹಣಾ ಸಮಿತಿಗಳು ಕಾರ್ಯನಿರ್ವಹಿಸಬೇಕು. ಈ ದಿಸೆಯಲ್ಲಿ ಸಮಾಜವು ಒತ್ತಡವನ್ನು ತರಬೇಕು ಮತ್ತು ಮಾರ್ಗದರ್ಶನವನ್ನು ಮಾಡಬೇಕು. ಇವು ದೇವಾಯಲಗಳು ಆಲೋಚಿಸಿ ಅನುಷ್ಠಾನಗೊಳಿಸಬೇಕಾದ ವಿಚಾರಗಳಾದರೆ ಇನ್ನು ಈಗಿರುವ ದೇವಾಲಯಗಳ ಸುಧಾರಣೆಯಬಗ್ಗೆ ಚಿಂತಿಸೋಣ

ದೇವಾಲಯಗಳು ಸರಕಾರೀ ಹಿಡಿತದಿಂದ ಮುಕ್ತವಾಗಬೇಕು ಹೀಗೆ ಮುಕ್ತವಾಗಿಸುವ ಭರವಸೆ ಕೊಟ್ಟವರಿಗೇ ನಾವು ಚುನಾವಣೆಗಳಲ್ಲಿ ಮತದಾನ ಮಾಡುವ ಮುಖಾಂತರ ಬೆಂಬಲಿಸಬೇಕು. ಇದು ಒಂದು ಭಾಗ ಇನ್ನು ಅಲ್ಲಿಯವರೆಗೆ ನಾವು ಹೇಗೆ ಹೋರಾಟಮಾಡಬಹುದು?

ಕರ್ನಾಟಕದಲ್ಲಿ 33000 ದೇವಾಲಯಗಳು ಮುಜರಾಯಿ ಇಲಾಖೆಯ ಹಿಡಿತದಲ್ಲಿವೆ. ಇವುಗಲ್ಲಿ ಲಾಭದಾಯಕವಾಗಿರುವ ಅಧಿಕ ಆದಾಯಬರುವ ದೇವಾಲಯಗಳನ್ನು ಮಾತ್ರ ಸರಕಾರ ನೋಡಿಕೊಳ್ಳುತ್ತದೆ. ಎ . ಬಿ. ಸಿ. ಎಂಬುದಾಗಿ ಆದಾಯವನ್ನು ಪರಿಗಣಿಸಿ ದೇವಾಲಯಗಳನ್ನು ಮೂರು ಪ್ರಕಾರಗಳಲ್ಲಿ ವಿಭಜಿಸಿದೆ. ಸರಕಾರಗಳು ಆದಾಯ ಇಲ್ಲದ ದೇವಾಲಯಗಳನ್ನು ನಿರ್ವಹಣೆ ಇಲ್ಲದೆ ಬಿಟ್ಟು ಬಿಡುತ್ತದೆ. ಎಲ್ಲಾ 33 ಸಾವಿರ ದೇವಾಲಯಗಳ ಅಭಿವೃದ್ಧಿ ಹಾಗೂ ನಿರ್ವಹಣೆಯೂ ಮುಜರಾಯಿ ಇಲಾಖೆಯ ಅಂದರೆ ಸರಕಾರದ ಜವಾಬ್ದಾರಿಯಾಗಿದೆ. ಎಲ್ಲಾ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿಯೂ ನಿತ್ಯ ಪೂಜೆ ನಡೆಯಬೇಕು. ಸೂಕ್ತ ತರಬೇತಿ ಪಡೆದ ಅರ್ಚಕರನ್ನು ನೇಮಿಸಬೇಕು. ಅಗತ್ಯವಿರುವೆಡೆ ಒಬ್ಬ ಸ್ವಚ್ಛತಾ ಸಿಬ್ಬಂಧಿಯನ್ನೂ ಹಾಗೂ ಭದ್ರತಾ ಸಿಬ್ಬಂಧಿಯನ್ನೂ ಸೂಕ್ತ ವೇತನದೊಂದಿಗೆ ನೇಮಿಸಬೇಕು. ಅವರಿಗೆ ಉತ್ತಮ ವೇತನವನ್ನು ಕೊಡಬೇಕು. ೈತಿಹಾಸಿಕ ದೇವಾಲಯಗಳಲ್ಲಿ ಮಾಹಿತಿದಾರರನ್ನು ನೇಮಿಸಬೇಕು. ಇವರೆಲ್ಲರೂ ಕಡ್ಡಾಯವಾಗಿ ಹಿಂದೂಗಳೇ ಆಗಿರಬೇಕು. ಇವರುಗಳಿಗೆ ವಸತಿಗೆ ಮನೆನಿರ್ಮಿಸಿಕೊಡಬೇಕು. ಪಾಳು ಸ್ಥಿತಿಯಲ್ಲಿರುವ ದೇವಾಲಯಗಳನ್ನು ದುರಸ್ತಿ ಗೊಳಿಸಬೇಕು. ಎಲ್ಲಾ ದೇವಾಯಲಗಳಲ್ಲಿಯೂ ಬರುವ ಭಕ್ತರಿಗೆ ಅನುಕೂಲವಾಗುವಂತೆ ಕೈಕಾಲುತೊಳೆಯುವ ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು. ಸಿಬ್ಬಂಧಿ ಹಾಗೂ ಅರ್ಚಕರ ವೇತನ ಹೊರತು ಪಡಿಸಿ ದೇವಸ್ಥಾನದ ನಿರ್ವಹಣೆಗೆ ವರ್ಷಕೆ ಕನಿಷ್ಠ ಒಂದು ಲಕ್ಷ ರೂಪಾಯಿಗಳನ್ನು ಸರಕಾರಗಳು ಎಲ್ಲಾ ಸಿ ವರ್ಗದ ದೇವಾಲಯಗಳಿಗೂ ನೀಡಬೇಕು. ಈ ಕುರಿತು ಅಗ್ರಹಿಸಿ ಹಿಂದೂ ಸಮಾಜ ಜಾಗ್ರತರಾಗಿ ಹೋರಾಟ ಮಾಡಬೇಕು.

ಇನ್ನು ಆದಾಯ ವಿರುವ ಎ ಮತ್ತು ಬಿ ಶ್ರೇಣಿಯ ದೇವಾಲಯಗಳಲ್ಲಿ ಸರ್ಕಾರಗಳು ಪಾರ್ಕಿಂಗ್‌ ಶುಲ್ಕಪಡೆದು ಭಕ್ತರನ್ನು ಲೂಟಿಮಾಡುತ್ತಿವೆ. ಈ ದೌರ್ಜನ್ಯವು ನಿಲ್ಲಬೇಕು. ಭಕ್ತರ ಅನುಕೂಲಕ್ಕೆ ಉಚಿತ ಸುಸಜ್ಜಿತ ಶೌಚಾಲಯಗಳನ್ನು ಇಲ್ಲಿ ನಿರ್ಮಿಸಬೇಕು. ಭಕ್ತಾದಿಗಳಿಗೆ ವಿಶ್ರಾಂತಿಗೆ ಸ್ಥಳಾವಕಾಸವನ್ನು ಕಲ್ಪಿಸಬೇಕು. ಅತಿ ಕಡಿಮೆ ದರದಲ್ಲಿ ವಸತಿವ್ಯವಸ್ಥೆಯನ್ನು ಕಲ್ಪಿಸಬೇಕು. ನಿತ್ಯ ಅನ್ನದಾಸೋಹ ನಡೆಯುವಂತೆ ವ್ಯವಸ್ಥೆ ಕಲ್ಪಿಸಬೇಕು. ಪ್ರತೀದೇವಾಲಯದಲ್ಲಿಯೂ ಧಾರ್ಮಿಕ ಗ್ರಂಥಾಲಯಗಳಿರಬೇಕು. ಗ್ರಂಥಾಲಯಗಳಲ್ಲ ಹಿಂದೂ ಸಾಧಕರ ಜೀವನಚರಿತ್ರೆಗಳು ಇರಬೇಕು. ಕಲೆ ಸಂಸೃತಿ ಹಾಗೂ ಸಂಸ್ಕೃತ ಇವುಗಳನ್ನು ಉಚಿತವಾಗಿ ಕಲಿಸುವ ವ್ಯವಸ್ಥೆ ಕಲ್ಪಿಸಬೇಕು. ಅರ್ಚಕರು ಹಾಗೂ ಎಲ್ಲಾ ಸಿಬ್ಬಂಧಿಗಳನ್ನೂ ಸರಕಾರೀ ನೌಕರರೆಂದು ಪರಿಗಣಿಸಿ ಇತರ ಸರಕಾರೀ ಕಛೇರಿಸಿಬ್ಬಂಧಿಗಳಂತೆ ಅದೇ ವೇತನ ಶ್ರೇಣಿಗೆ ಪರಿಗಣಿಸಬೇಕು. PF  ವಿಮೆ ಹಾಗೂ ನಿವೃತ್ತಿವೇತನ ಎಲ್ಲವೂ ಈ ಸಿಬ್ಬಂಧಿಗಳಿಗೂ ತಾರತಮ್ಯವಿಲ್ಲದೆ ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕು. ದೇವಾಲಯದ ಪರಿಸರದಲ್ಲಿ ಕೇವಲ ಹಿಂದುಗಳಿಗೆ ಮಾತ್ರ ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ಕಲ್ಪಿಸಬೇಕು. ಗೋಭಕ್ಷಕ ಜಿಹಾದೀ ರಾಕ್ಷಸರು, ಹಾಗೂ ಮತಾಂತರೀ ದುರ್ಜನರು ದೇವಾಲಯ ಪರಿಸರವನ್ನು ಕಲುಷಿತಗೊಳಿಸಲು ಅವಕಾಶ ಕಲ್ಪಿಸಬಾರದು.

ಎಲ್ಲಾ ದೇವಾಲಯಗಳಲ್ಲಿಯೂ ಕಡ್ಡಾಯ ವಸ್ತ್ರ ಸಂಹಿತೆ ಜಾರಿಗೆ ತರಬೇಕು. ದೇವಾಲಯದ ಬಿತ್ತಿಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಬಿತ್ತಿ ಚಿತ್ರಗಳು, ಹೋಲ್ಡಿಂಗ್ ಗಳು‌,  ಫೋಟೋಗಳು, ಪ್ರದರ್ಶಿತವಾಗುವಂತಿರಬೇಕು. ಪ್ರತಿ ದೇವಾಲಯಗಳೂ ಸುತ್ತಲೂ ಮರಗಳನ್ನು ನೆಟ್ಟು ದೇವಾಲಯ ಪರಿಸರದಲ್ಲಿ ಹಸಿರು ಹಾಗೂ ನೆರಳಿರುವ ಪರಿಸರ ನಿರ್ಮಿಸಬೇಕು. ಪ್ರತಿಯೊಂದು ದೇವಾಲಯಗಳೂ ನೀರು ಇಂಗಿಸುವ ಯೋಜನೆಯನ್ನು ಅಳವಡಿಸಿಕೊಂಡು ಭೇಟಿ ನೀಡುವ ಭಕ್ತಾದಿಗಳೂ ಮನೆಯಲ್ಲಿ ಅನುಸರಿಸುವಂತೆ ಪ್ರೇರಣೆಯಾಗಬೇಕು. ಪ್ರತಿಯೊದು ದೇವಾಯಲಗಳೂ ವೇಸ್ಟ್‌ ಮ್ಯಾನೇಜ್ಮೆಂಟ್‌ ವ್ಯವಸ್ಥೆಯನ್ನು ರೂಪಿಸಿಕೊಂಡು ಅದಕ್ಕೆ ಸಂಬಂಧಿಸಿದ ಕಾರ್ಯಯೋಜನೆಯನ್ನು ರೂಪಿಸಬೇಕು. ಪ್ರತಿಯೊಂದು ದೇವಾಲಯಗಳೂ ಸೋಲಾರ್‌ ವ್ಯವಸ್ಥೆಯಲ್ಲಿ ನಡೆಯುವಂತೆ ಮಾಡಬೇಕು. ಇವೆಲ್ಲವೂ ಆಲ್ಲಿಗೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಪ್ರೇರಣೆ ಒದಗಿಸುವುದರಿಂದ ಸಮಾಜ ಸುಧಾರಣೆಗೆ ಇದು ಸಹಕಾರಿಯಾಗುತ್ತದೆ. ಹೀಗೆ ಬಹು ಆಯಾಮಗಳಲ್ಲಿ ದೇವಾಲಯಗಳು ಸುಧಾರಣೆ ಹೊಂದಬೇಕಿದೆ. ಮುಜರಾಯೀ ದೇವಾಲಯಗಲ್ಲಿ ಸರಕಾರ ಹಾಗೂ ಆಡಳಿತ ಮಂಡಳಿಗಳು ಈ ಕುರಿತು ಚಿಂತಿಸಿ ಕಾರ್ಯ ಪ್ರವೃತ್ತವಾಗಬೇಕಿದೆ. ಮುಜರಾಯಿ ಹೊರತಾದ ವೈಯುಕ್ತಿಕ ದೇವಾಲಯಗಳಲ್ಲಿಯೂ ಅಲ್ಲಿನ ಆಡಳಿತ ಮಂಡಳಿಗಳಿಂದ ಈರೀತಿಯ ಕೆಲಸಗಳು ಶೀಘ್ರವಾಗಿ ಸಮರೋಪಾದಿಯಲ್ಲಿ ನಡೆಯಬೇಕಿದೆ. ನಾವೂ ಈ ದೆಸೆಯಲ್ಲಿ ಜನಜಾಗ್ರತಿ ಮಾಡೋಣ ಸಂಘಟಿತರಾಗಿ ಗುರಿಸಾಧನೆಯ ಹಾದಿಯಲ್ಲಿ ವೇಗವಾಗಿ ನಡೆಯೋಣ. ಸಮಾಜದಲ್ಲಿ ಪರಿವರ್ತನಯನ್ನು ತರೋಣ

ಜೈ ಹಿಂದ್‌ ಜೈ ಭಾರತ ಮಾತಾ

ಶ್ರೀಜಿ

Leave a Reply