ಕರ್ನಾಟಕ ಬಿಜೆಪಿಗೆ ಕಾರ್ಯಕರ್ತನ ಧ್ವನಿ ಕೇಳಿಸುವುದೇ?

You are currently viewing ಕರ್ನಾಟಕ ಬಿಜೆಪಿಗೆ ಕಾರ್ಯಕರ್ತನ ಧ್ವನಿ ಕೇಳಿಸುವುದೇ?

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ 2023 ಮುಗಿದು ಒಂದು ವರ್ಷ ಕಳೆದಿದೆ ಈ ಲೇಖನ ಒಂದು ವರ್ಷದ ಹಿಂದೆಯೇ ಬರೆದಿದ್ದಾಗಿದೆ. ಈ ಚುನಾವಣಾಫಲಿತಾಂಶದಲ್ಲಿ ಆತ್ಮಾವಲೋಕನ ಮಾಡಬೇಕಾದ ಅನೇಕ ವಿಚಾರಗಳಿವೆ.

ಮುಖ್ಯವಾಗಿ ಬಿಜೆಪಿ ನಾಯಕರು ಹಾಗೂ ಚುನಾಯಿತ ಶಾಸಕರು. ಚಿಂತಿಸಬೇಕಿದೆ.

ಈಗ ನಡೆದ ಚುನಾವಣೆ ಇಂದು ಸಂಘಟಿತರಾಗಿರುವ ಅಲ್ಪಸಂಖ್ಯಾತರು ಹಾಗೂ ಅಸಂಘಟಿತ ರಾಗಿರುವ ಬಹುಸಂಖ್ಯಾತರ ನಡುವಿನ ಮತದಾನದ ಯುದ್ಧವಾಗಿದೆ. ಇಲ್ಲಿ ಸೋತವರು ಬಹುಸಂಖ್ಯಾತರು ಗೆದ್ದವರು ಅಲ್ಪಸಂಖ್ಯಾತರು. ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.

ಕಾಂಗ್ರೇಸ್ ರಣನೀತಿ ಹೇಗಿದೆ ಎಂದರೆ! ಅದು ಯಾವಾಗಲೂ ಅಲ್ಪಸಂಖ್ಯಾತರ ಪಕ್ಷ ಎಂದು ಘಂಟಾಘೋಷವಾಗಿ ಘೋಷಿಸುತ್ತದೆ ಹಾಗೂ ಅವರ ಮತಾಂತರ ಹಾಗೂ ಜಿಹಾದಿಗೆ ತನ್ನಿಂದಾದ ಗರಿಷ್ಟ ಬೆಂಬಲ ನೀಡುತ್ತದೆ. ಜೊತೆಗೆ ಹಿಂದುಗಳನ್ನು ಜಾತಿಯಲ್ಲಿ ಒಡೆಯುತ್ತದೆ ಮತ್ತು ಭರವಸೆಗಳ ಆಮಿಶಗಳನ್ನು ತೋರಿಸುತ್ತಾ ಹಣಬಲದಿಂದ ಸಾಕಷ್ಟು ಜನರದಿಕ್ಕು ತಪ್ಪಿಸುತ್ತದೆ. ಗೋಹತ್ಯಾ ನಿಶೇಧ ಹಿಂತೆಗೆಯುತ್ತೇವೆ. ಮತಾಂತರ ನಿಶೇಧ ಹಿಂತೆಗೆಯುತ್ತೇವೆ. ಭಜರಂಗದಳ ಬ್ಯಾನ್ ಮಾಡುತ್ತೇವೆ. ಉಗ್ರಗಾಮಿಗಳು ಅಮಾಯಕರು. ಸರ್ಕಾರೀ ಆಸ್ತಿಗಳಿಗೆ ಬೆಂಕಿಹಚ್ಚಿದವರು ನನ್ನ ಬ್ರದರ್ಸ್,  ನಾಮಹಾಕಿದವರನ್ನು ಕಂಡರೆ ನನಗೆ ಭಯವಾಗುತ್ತದೆ. ಪಠ್ಯಪುಸ್ತಕದಲ್ಲಿ ಕೇಸರೀಕರಣ ಇದೆ. ನೂತನ ಶಿಕ್ಷಣ ನೀತಿಯನ್ನು ನಿಲ್ಲಿಸುತತೇವೆ. ರಾಷ್ಟ್ರೀಯತೆಯನ್ನು ಸಾರುವ ಪಠ್ಯಪುಸ್ತಕವನ್ನು ಹಿಂಪಡೆಯುತ್ತೇವೆ.ಟಿಪ್ಪೂ ಜಯಂತಿ ಮಾಡುತ್ತೇವೆ. ಅಲ್ಪಸಂಖ್ಯಾತರಿಗೆ ಹೆಚ್ಚುವರಿ ಮೀಸಲಾತಿ ನೀಡುತ್ತೇವೆ. ಇಂತಹಾ ಎಲ್ಲಾ ಹಿಂದು ವಿರೋಧಿ ಶಬ್ಧಭಂಡಾರಗಳನ್ನು ಹಿಂಜರಿಕೆ ಇಲ್ಲದೆ ಕಾಂಗ್ರೇಸಿನ ಮೇಲ್ಪಂಕ್ತಿಯ ನಾಯಕರೇ ಸಾರ್ಜನಿಕವಾಗಿ ಬಳಸುತ್ತಾರೆ.

ನೇರವಾಗಿ ಆಕ್ರಮಣಕಾರಿಯಾಗಿ ಬಿಜೆಪಿಯ ಮೇಲೆ ಹಾಗೂ ಬಹುಸಂಖ್ಯಾತ ಹಿಂದುಗಳಮೇಲೆ ನೇರವಾಗಿ ದಾಳಿಮಾಡುತ್ತಾರೆ. ಸಮಾನಸಮಯದಲ್ಲಿ ಕೋಮುವಾದಿಗಳು. ದೇಶ ಒಡೆಯುವವರು, ಭ್ರಷ್ಟಾಚಾರಿಗಳು ಎಂಬುದಾಗಿ ತಮ್ಮೆಲ್ಲಾಗುಣಗಳನ್ನೂ ಬಿಜೆಪಿಗೆ ಅವಕಾಶಸಿಕ್ಕಲ್ಲೆಲ್ಲಾ ಹೊರಿಸುತ್ತಾರೆ.  ಬಿಜೆಪಿಯ ಹಗರಣಗಳನ್ನು ಅಥವಾ ಹಗರಣ ಎಂಬಂತೆ ಜನರು ನಂಬಬಹುದಾದ ವಿಷಯಗಳನ್ನು ಸೃಷ್ಟಿಸಿ ವ್ಯಸ್ಥಿತವಾಗಿ ನಿರಂತರವಾಗಿ ಪ್ರಚಾರಮಾಡಿ ಸಮಾಜದಲ್ಲಿ ಕರ್ನಾಟಕ ಬಿಜೆಪಿಯವರು ಕಳ್ಳರು ಭ್ರಷ್ಟಾಚಾರಿಗಳು ಎಂದು ನಂಬಿಸುವಲ್ಲಿ ಕಾಂಗ್ರೇಸ್ ಯಶಸ್ಸನ್ನು ಪಡೆದಿದೆ. ಜೊತೆಗೆ ಗ್ಯಾಸಿನ ಬೆಲೆಏರಿಕೆ ಎಂಬುದಾಗಿ ಜನರನ್ನು ನಂಬಿಸುವಲ್ಲಿ ಯಶಸ್ಸನ್ನು ಹೊಂದಿದೆ. ಒಬ್ಬ ಅಪ್ರಬುದ್ಧ ರಾಷ್ಟರೀಯ ನಾಯಕನನ್ನು ಹಿಡಿದುಕೊಂಡೂ ಕರ್ನಾಟಕದಲ್ಲಿ ಚುನಾವಣೆ ಗೆದ್ದಿದೆ.

ಇದಕ್ಕೆ ಬದಲಾಗಿ ಬಿಜೆಪಿ ರಣನೀತಿ ಏನಿತ್ತು? ಏನೂ ಇಲ್ಲ ಇವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳುವುದೂ ಗೊತ್ತಿಲ್ಲ. ವಿರೋಧಿಗಳಮೇಲೆ ಆಕ್ರಮಕವಾಗಿ ಹೋರಾಟಮಾಡಲೂ ಗೊತ್ತಿಲ್ಲ. ಇಪ್ಪತ್ತನಾಲ್ಕು ಹಿಂದೂ ಕಾರ್ಯಕರ್ತರು ಹಾಗೂ ಡಿಕೆ ರವಿ , ಗಣಪತಿಯಂತಹ ಅಧಿಕಾರಿಗಳ ಕೊಲೆಗೆ ಕಾರಣವಾದ ವಿಷಯವನ್ನು ಹಿಡಿದುಕೊಂಡು ಕೊಲೆಗಾರರು ಇವರು ಎಂಬುದಾಗಿ ಜನರನ್ನು ನಂಬಿಸಬಹುದಿತ್ತು. ಇಂದಿರಾ ಕ್ಯಾಂಟೀನ್ ಹಗರಣವನ್ನು ಜನರ ಮುಂದಿಟ್ಟು ದುಡ್ಡುತಿನ್ನುವುದೇ ಇವರ ಸ್ಕೀಮಿನ ಬಂಡವಾಳ ಎಂದು ಪ್ರಚಾರಮಾಡಬಹುದಿತ್ತು.   ಜೈಲಿನಲ್ಲಿದ್ದವರು ಬೇಲಿನಮೇಲೆ ಪಕ್ಷದಪ್ರಚಾರಮಾಡುತ್ತಿರುವವರು ಇವರು ಕ್ರಿಮಿನಲ್ಗಳು. ಕೊತ್ವಾಲನ ಶಿಶ್ಯರು, ಉಗ್ರಗಾಮಿಗಳ ಸಹೋದರರು. ಹಿಂದೂ ವಿರೋಧಿಗಳು, ಗೋಹಂತಕರು. ರೌಡಿಗಳು, ವಿದೇಶೀ ಗುಲಾಮರು. ಮತಾಂತರಿಗಳು , ಗೋಹಂತಕರು, ಗೋಭಕ್ಷಕರು, ಕಾಪಾಲಿ ಬೆಟ್ಟವನ್ನು ಏಸುಬೆಟ್ಟಮಾಡಲು ಹೊರಟವರು, ದೇಶವಿಭಜಕರು, ಧರ್ಮ ವಿಭಜಕರು, ಲಿಂಗಾಯತರನ್ನು ಒಡೆದವರು. ಸುಳ್ಳುಇತಿಹಾಸದ ಪಾಠ್ಯವನ್ನು ರಚಿಸಿ ಭಾರತದ ಇತಿಹಾಸಕ್ಕೆ ಕಳಂಕತಂದವರು. ದುಡಿಯುವವರಿಗೆ ಕೆಲಸಕೊಡದೆ ಅವರನ್ನು ಸೋಮಾರಿಗಳಾಗಿಸುವವರು. ಉಚಿತಭಾಗ್ಯದಹೆಸರಿನಲ್ಲಿ 2 ಲಕ್ಷಕೋಟಿ ಸಾಲಮಾಡಿದವರು. ಕರ್ನಾಟಕವನ್ನು ಪಾಕಿಸ್ಥಾನ ಮಾಡಲಿರುವವರು. ಶ್ರೀರಾಮನ ಹಾಗೂ ರಾಮಮಂದಿರದ ವಿರೋಧಿಗಳು. ದೇಶದ ಆರ್ಥಿಕತೆಯನ್ನು ನಾಶಮಾಡಲು ಹೊರಟವರು, ಬ್ರಷ್ಟಾಚಾರ ಮಾಡಲೆಂದೇ ಲೋಕಾಯುಕ್ತವನ್ನು  ಮುಚ್ಚಿದವರು. ಹೀಗೆ ನೂರಾರು ವಿಷಯಗಳು ಸಮೃದ್ಧವಾಗಿ ಇದ್ದರೂ ಅದನ್ನು ಬಳಸಿಕೊಳ್ಳಲು ಬಿಜೆಪಿಗರಿಗೆ ಆಗಲಿಲ್ಲ. ಇವರ ಆಡಳಿತದಲ್ಲಿ ಅನೇಕ ಕಾನೂನುಬಾಹಿರ ಘಟನೆಗಳು ನಡೆದಾಗ ಜನರನಿರೀಕ್ಷೆಗೆ ತಕ್ಕಂತೆ ಕ್ರಮತೆಗೆದುಕೊಳ್ಳಲು ಆಗಲಿಲ್ಲ. ಜನರುರಸ್ತೆಗಿಳಿದಮೇಲೆ ಕಠಿಣಕ್ರಮದ ಡೈಲಾಗ್ ಹೊಡೆಯಲಾಯಿತಷ್ಟೇ. ಪಠ್ಯಪುಸ್ತಕ ಸಮಿತಿಯನ್ನು ಸಮರ್ಥಿಸಿಕೊಳ್ಳಲಾಗಲಿಲ್ಲ. ರಕ್ಷಣಾತ್ಮಕ ಕಲೆಯೂ ಗೊತ್ತಿಲ್ಲ ಆಕ್ರಮಣದ ಕಲೆಯೂ ಗೊತ್ತಿಲ್ಲ.

ಹಿಂದುಗಳ ಅಸಾಹಾಯಕತೆಯ ಬಿಸಿಯಲ್ಲಿ ಅನ್ನಬೇಯಿಸಿ ಊಟಮಾಡುತ್ತೇನೆನ್ನುವ ಮನಸ್ಥಿತಿ ಬಿಜೆಪಿ ನಾಯಕರದ್ದು. ಹಿಂದುಗಳಿಗೆ ಬೇರೆ ದಾರಿಇಲ್ಲ ನಮಗೇ ಓಟುನೀಡಬೇಕು ನಾವು ಗೆಲ್ಲುವುದು ಗ್ಯಾರಂಟಿ ಎನ್ನುವ ಧಾರ್ಷ್ಟ್ಯ ಒಂದೆಡೆ ಮತ್ತು ಅಧಿಕಾರವನ್ನು ಬಳಸಿ ಕೇವಲ ತನ್ನ ಕಿಸೆತುಂಬಿಸುವುದು ಹೇಗೆ ತನ್ನನ್ನು ಪ್ರಶ್ನಿಸುವ ಕಾರ್ಯಕರ್ತನನ್ನು ತುಳಿಯುವುದು ಹೇಗೆ? ತನ್ನದೇ ಜೀ ಹುಜೂರ್ ಬಣ ನಿರ್ಮಿಸಿಕೊಳ್ಳುವುದು ಹೇಗೆ? ಇಂತಹ ಸ್ವಾರ್ಥಚಿಂತನೆಯೇ ಅಧಿಕವಾಗಿ ಮನೆಮಾಡಿದ ನಾಯಕರು ಬಿಜೆಪಿಯಲ್ಲಿ ಅಧಿಕವಾಗತೊಡಗಿದರು. ಹಣಮಾಡುವುದು ಬ್ರಷ್ಟಾಚಾರ ಮಾಡುವುದು ಕಾಂಗ್ರೇಸಿಗರ ಪೇಟೆಂಟ್ ಆದರೆ ಕಾಂಗ್ರೇಸಿಗರಿಗೆ ತನ್ನನ್ನು ಗೆಲ್ಲಿಸಿದವರು ಯಾರೆಂದು ನೆನಪಿಟ್ಟುಕೊಳ್ಳುವ ಉತ್ತಮಗುಣವಿದೆ. ಆತ ಕಳ್ಳನೇ ಆಗಿದ್ದರೂ ಕ್ರಿಮಿನಲ್‌ ಆಗಿದ್ದರೂ ಆತನನ್ನು ಸಮರ್ಥಿಸಿ ರಕ್ಷಿಸಲು ಪೋಲೀಸ್ ಠಾಣೆಗೆ ಬರುತ್ತಾರೆ. ಬ್ರಷ್ಟಾಚಾರದಲ್ಲಿ ತಾನು ತಿಂದಿದ್ದರಲ್ಲಿ ತನ್ನ ಜೊತೆಗಿರುವವರಿಗೆ ಹಂಚಿತಿನ್ನುವ ಕಾಗೆಯ ಗುಣವಿದೆ. ನೀವು ತಿನ್ನಿ ನಾವೂ ತಿನ್ನುತ್ತೇವೆ ಎನ್ನುವ ವಿಶಾಲ ಬುದ್ಧಿಇದೆ. ಕಳ್ಳರಲ್ಲಿಯೂ ಒಂದು ನಿಯತ್ತಿರುತ್ತದೆ ಎನ್ನುವ ಮಾತಿನಂತೆ. ಆದರೆ ಬಿಜೆಪಿಗರಲ್ಲಿ ತಾನುಮಾತ್ರ ತಿನ್ನಬೇಕು ತಾನು ತಿಂದಿದ್ದು ಬೇರೆಯವರಿಗೆ ಗೊತ್ತಾಗಬಾರದು. ತನ್ನವರಿಗೆ ತಿನ್ನಸಿದರೆ ತಾನು ತಿಂದಿದ್ದು ಹೊರಬರುತ್ತದೆ. ಹೀಗೆ ಹೊರಬಂದರೆ ಮುಂದೆ ತನ್ನ ಭವಿಷ್ಯ ಡೋಲಾಯಮಾನವಾಗುತ್ತದೆ ಆದುದರಿಂದ ತಾನೊಬ್ಬನೇ ತಿನ್ನಬೇಕು ತಾನು ತಿಂದಿದ್ದು ಬೇರಾರಿಗೂ ಗೊತ್ತಾಗಬಾರದೆನ್ನುವ ಚಾತುರ್ಯದ ಸಂಕುಚಿತ ಬುದ್ದಿ ಸಾಕಷ್ಟಿದೆ. ಜಿಹಾದಿಗಳೊಂದಿಗೆ ವ್ಯವಹಾರಮಾಡಿದರೆ ತನ್ನ ವ್ಯವಹಾರ ಹೊರಗಡೆ ಸೋರಿಕೆಯಾಗುವುದಿಲ್ಲ ಎನ್ನುವ ದುರಾಲೋಚನೆ. ಇದರೋಂದಿಗೆ ತನ್ನಕಾರ್ಯಕರ್ತರು ತನ್ನನ್ನು ಪ್ರಶ್ನೆಮಾಡುತ್ತಾರೆ ಅವರಿಗೆ ಬುದ್ದಿಕಲಿಸಬೇಕೆನ್ನುವ ರೋಷ. ಇದರೊಂದಿಗೆ ಬೇರೆಪಕ್ಷದವರು ತನ್ನನ್ನು ಪ್ರಶಂಸಿಸಬೇಕೆನ್ನುವ ಪ್ರೀತಿ. ಇವೆಲ್ಲವೂ ಬಿಜೆಪಿನಾಯಕರ ನಕಾರಾತ್ಮಕ ಗುಣಗಳಾಗಿವೆ. ಒಳಚಡ್ಡಿಯಲ್ಲಿ ಮಲವಿಸರ್ಜನೆ ಮಾಡಿಕೊಂಡವನು ಎಷ್ಟೇ ಉತ್ತಮ ಬಟ್ಟೆಧರಿಸಿದರೂ ಹಣೆಯಲ್ಲಿ ತಿಲಕಧರಿಸಿದರೂ ಹತ್ತಿರ ಇರುವವರಿಗೆ ವಾಸನೆ ಬಂದೇ ಬರುತ್ತದೆ. ಹೀಗೆ ಕಾರ್ಯಕರ್ತರಿಗೆ ಸಹಿಸಲಾಗದ ಈ ವಾಸನೆಯೇ ಅನೇಕ ವಿಜೇತ ಶಾಸಕರ ಪ್ರಸ್ತುತ ಸೋಲಿಗೆ ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಇನ್ನು ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತ ಹಿಂದುಗಳಬಗ್ಗೆ ನೋಡಿದರೆ. ಅಲ್ಪ ಸಂಖ್ಯಾತರು ಸಂಘಟಿತರಿದ್ದಾರೆ. ಅವರಿಗೆ ಯಾರನ್ನು ಬೆಂಬಲಿಸಬೇಕು ಯಾರನ್ನು ಸೋಲಿಸಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇದೆ. ಅವರಿಗೆ ಸರ್ಕಾರದಿಂದ ಏನು ಬೇಕು ಎನ್ನುವ ಅರಿವು ಚೆನ್ನಾಗಿಯೇ ಇದೆ. ಅವರಿಗೆ ಅವರ ಧಾರ್ಮಿಕ ಮತಪ್ರಚಾರಮಾಡಲು ಹಾಗೂ ರಾಜಕೀಯದಲ್ಲಿ ಹಿಡಿತಸಾಧಿಸಲು ಯೋಜನಾಬದ್ಧವಾಗಿ ಕೆಲಸಮಾಡಲು ಮಾರ್ಗದರ್ಶನ ಹಾಗೂ ಹಣ ಧಾರ್ಮಿಕ ಮುಖಂಡರಿಂದ ಹಾಗೂ ದೇಶ ವಿದೇಶಗಳ ಹಿಂದೂವಿರೋಧಿಗಳಿಂದ ಸಿಗುತ್ತದೆ. ಬಿಜೆಪಿ ನಾಯಕರ ಸಖ್ಯ ಹೇಗೆ ಬೆಳಸಬೇಕು, ಅವರೊಂದಿಗೆ ಹೇಗೆ ವ್ಯವಹರಿಸಬೇಕು, ಅವರಿಂದ ಹೇಗೆ ಕೆಲಸಗಳನ್ನು ಮಾಡಿಸಿಕೊಳ್ಳಬೇಕು, ಅವರನ್ನು ಖರೀದಿಸುವುದು ಹೇಗೆ? ಅವರನ್ನೇ ಉದ್ಯಮದಲ್ಲಿ ಪಾಲುದಾರರನ್ನಾಗಿ ಸೇರಿಸಿಕೊಳ್ಳುವುದು ಹೇಗೆ? ಇವೆಲ್ಲವೂ ಚೆನ್ನಾಗಿ ತಿಳಿದಿದೆ. ಬಿಜೆಪಿಯ ಹೆಚ್ಚಿನ ಶಾಸಕರು ಸಂಸದರು ಹಿಂದುಗಳಿಗಿಂತ ಹೆಚ್ಚು ಅಲ್ಪಸಂಖ್ಯಾತ ಜಿಹಾದಿಗಳಿಗೇ ಉಪಕಾರಿಗಳಾಗಿದ್ದಾರೆ. ಕೆಲಸದ ಗುತ್ತಿಗೆಗಳನ್ನು ಜಿಹಾದಿಗಳಿಗೇ ನೀಡಲು ಶಿಫಾರಸು ಮಾಡುತ್ತಾರೆ. ತಮ್ಮ ಉದ್ಯಮದ ಉಸ್ತುವಾರಿಯನ್ನು ಪಾಲುದಾರಿಕೆಯನ್ನು ಜಿಹಾದಿಗಳಿಗೆ ನೀಡುತ್ತಾರೆ.

ಬಿಜೆಪಿಯಲ್ಲಿಯೂ ಅಲ್ಪ ಸಂಖ್ಯಾತರೇ ಫಲಾನಿಭವಿಗಳು. ಕಾಂಗ್ರೇಸಿನಲ್ಲಿಯೂ ಅಲ್ಪ ಸಂಖ್ಯಾತರೇ ಯಜಮಾನರು ಇದು ಇಂದಿನ ಕರ್ನಾಟಕದ ಸಾಮಾಜಿಕ ರಾಜಕೀಯ ಪರಿಸ್ಥಿತಿಯಾಗಿದೆ. ಮುಸಲ್ಮಾನರು ಹಿಂದುಗಳನ್ನು ತುಳಿಯುವ ದೃಷ್ಟಿಯಿಂದ ಒಗ್ಗಟ್ಟಾಗಿದ್ದಾರೆ. ಬಿಜೆಪಿಯನ್ನು ಸೊಲಿಸುವ ಒಂದೇ ಉದ್ದೇಶದಿಂದ ಈ ಬಾರಿ ಜೆಡಿಎಸ್ ಪಕ್ಷವನ್ನು ಕೈಬಿಟ್ಟಿದ್ದಾರೆ. ಎಲ್ಲರೂ ಒಂದೇಮುಖವಾಗಿ ಕಾಂಗ್ರೇಸನ್ನುಬೆಂಬಲಿಸಿದ್ದಾರೆ. ಅವರಿಗೆ  ಮೋದಿಮಾಡಿದ ಯಾವುದೇ ಉಪಕಾರ ಸ್ಮರಣೆಯೂ ಇಲ್ಲ ಅಥವಾ ಬದ್ಧತೆಯೂ ಇಲ್ಲ ತಾವು ಸಮಯ ಸಾಧಕರು ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಹಿಂದುಗಳೊಂದಿಗೆ ನಯವಾಗಿ ಮಾತನಾಡುತ್ತಾ ವ್ಯಾಪಾರವನ್ನು ಅವರಲ್ಲಿಯೇಮಾಡುವ ಇವರು ತಾವು ಮಾತ್ರ ಹಿಂದುಗಳಿಂದ ಖರೀದಿಸುವುದು ಹರಾಮ್‌ ಎನ್ನುತ್ತಾ ತಮ್ಮವರ ಅಂಗಡಿಗೇ ಹೋಗುವಂತೆ ಸಮಾಜದಲ್ಲಿ ದುರ್ಭೋಧನೆ ಮಾಡುತ್ತಾರೆ. ಹೀಗೆ ಹಿಂದುಸಮಾಜಕ್ಕೆ ಹಿಂದಿನಿಂದ ಬೆನ್ನಿಗೆ ಚೂರಿ ಇರಿಯಲು ಕತ್ತಿಮಸೆಯುತ್ತಿದ್ದಾರೆ ಎನ್ನುವುದು ಇಂದಿನ ಚುನಾವಣೆಯಲ್ಲಿ ಸ್ಪಷ್ಟವಾಗಿದೆ.

ಇನ್ನು ಹಿಂದುಗಳಲ್ಲಿ ನೋಡಿದರೆ ಯಾರು ಯಾರಪರ? ಯಾರ ಸಿದ್ದಾಂತ ಏನು? ಸಮಾಜಕ್ಕೆ ಮಾರ್ಗದರ್ಶನಮಾಡುವವರು ಯಾರು? ಹಿಂದುಸಮಾಜಕ್ಕೆ ಇರುವ ತೊಂದೆರೆ ಏನು? ಹಿಂದುಗಳ ಬೇಡಿಕೆ ಏನು? ಇದು ಯಾರಿಗೂ ಗೊತ್ತಿಲ್ಲ ಯಾರಲ್ಲಿಯೂ ಸ್ಪಷ್ಟತೆ ಇಲ್ಲ. ಅನೇಕ ಸಂಘಟನೆಗಳಿದ್ದರೂ ಸಮನ್ವಯತೆ ಇಲ್ಲ. ಅನೇಕ ಮಠಗಳಿದ್ದರೂ ಒಗ್ಗಟ್ಟಿಲ್ಲ. ಅನೇಕ ಮಂದಿರಗಳಿದ್ದರೂ ಗುರಿ ಇಲ್ಲ. ಎಲ್ಲರೂ ಸ್ವತಂತ್ರರು ಎಲ್ಲರೂ ಅಸಂಘಟಿತರು. ಎಲ್ಲರೂ ಬೃಹಸ್ಪತಿಗಳು.  ಯಾರ ಎದುರಲ್ಲಿಯೂ  ಸರಿಯಾದ ಗುರುವಾಗಲೀ ಸರಿಯಾದ ಗುರಿಯಾಗಲೀ ಇಲ್ಲ. ವಿಶ್ವಾಸ ಇಟ್ಟು ಆರಿಸಿದ ಶಾಸಕರು ಸಂಸದರು ವಿಶ್ವಾಸದ್ರೋಹಮಾಡುವುದನ್ನು ನೋಡಿಯೂ ಏನೂಮಾಡಲಾಗದ ಅಸಹಾಯಕತೆ ಹಿಂದೂ ಮತದಾರರದ್ದಾಗಿದೆ. ಕಾರ್ಯಕರ್ತರಿಗೆ ನೋವನ್ನು ಹೇಳಿಕೊಳ್ಳುವ ವೇದಿಕೆಯೇಇಲ್ಲ. ಯಾವುದೇ ಬೀಜೇಪಿ ನಾಯಕರೂ ಕಾರ್ಯಕರ್ತರ ಸಮಸ್ಯೆಯನ್ನು ಕೇಳುವ ಸಂವಾದ ಕಾರ್ಯಕ್ರಮವನ್ನೇ ಮಾಡುವುದಿಲ್ಲ. ಪಾರ್ಟಿ ಆಫೀಸಿನಲ್ಲಿಯೂ ಕಾರ್ಯಕರ್ತರನ್ನು ಕೇಳುವವರಿಲ್ಲ. ಸಂಘ ಕಾರ್ಯಾಲಯದಲ್ಲಿಯೂ ಹಿಂದುಗಳ ಸಮಸ್ಯೆಯನ್ನು ಕೇಳುವವರಿಲ್ಲ. ಯಾವುದೇ ಮಠ ಮಂದಿರಗಳಲ್ಲಿ ಹಿಂದುಗಳ ಸಮಸ್ಯೆಯನ್ನು ಕೇಳುವವರಿಲ್ಲ. ಒಬ್ಬ ಕಾರ್ಯಕರ್ತನಮೇಲೆ ಧರ್ಮರಕ್ಷಣೆಯ ಹೋರಾಟದ ಹಾದಿಯಲ್ಲಿ ಪೋಲೀಸರು ಕೇಸನ್ನು ಹಾಕಿದರೆ ಜಾಮೀನು ಕೊಡಿಸುವವರಿಲ್ಲ, ವಕೀಲನನ್ನು ನೇಮಿಸುವವರಿಲ್ಲ, ಆತನನ್ನು ಬಿಡಿಸಲು ಒತ್ತಡಹೇರುವವರಿಲ್ಲ. ಅವನ ಮನೆಗೆ ಊಟನೀಡುವವರಿಲ್ಲ. ನಮ್ಮದೇಸರಕಾರದ ನಾಯಕರ, ಮಂತ್ರಿಗಳ, ಶಾಸಕರ, ಸಂಸದರ, ಸಹಾಯಇಲ್ಲ. ಇವರಾರಿಗೂ ಸಾಮಾನ್ಯ ಸಮಾಜ ಸಂಬಂಧವೇ ಇಲ್ಲ.

ಒಮ್ಮೆ ಪುನಿತ್ ಕೆರೆಹಳ್ಳಿ ಜೈಲಿನಲ್ಲಿದ್ದಾಗ ಬಿಜೆಪಿ ಸರಕಾರವೇ ಇತ್ತು ಅವರಬಗ್ಗೆ ಕಾಳಜಿ ವಹಿಸಿದವರು ಯಾರಿದ್ದಾರೆ? ಎಲ್ಲಿದ್ದಾರೆ. ಅವರನ್ನು ಬೆಂಬಲಿಸುವವರು ಎಲ್ಲಿದ್ದಾರೆ. ಅವರನ್ನು ಬಿಡಿಸುವವರು ಯಾರಿದ್ದಾರೆ? ಎಲ್ಲಿಯೂ ಉತ್ತರ ಇಲ್ಲ. ಅರುಣ್ ಪುತ್ತಿಲರನ್ನು ಮೂಲೆಗುಂಪು ಮಾಡಲು ನೋಡಲಾಯಿತು. ಅದರ ಫಲ ಹಿಂದೂ ಸಮಾಜದಮೇಲಾಯಿತು. ಇದರ ಹೊಣೆಗಾರರು ಯಾರು? ದೋಷಿಗಳಿಗೆ ಏನು ಶಿಕ್ಷೆ? ಅವರನ್ನು ಪ್ರಶ್ನಿಸುವವರು ಯಾರು? ಪ್ರಭಾಕರಭಟ್ಟರು ಈಗೇನು ಹೇಳುತ್ತಾರೆ? ಈ ಚುನಾವಣೆಯಲ್ಲಿ ಪೂರ್ಣ ಬಿಜೆಪಿ ರಾಜ್ಯಾದ್ಯಕ್ಷ ಹಾಗೂ ಮಾಜಿಮುಖ್ಯಮಂತ್ರಿ ಮಾಜಿ ಶಾಸಕ ಹಾಗೂ ಸಂಘವನ್ನು ಪ್ರಭಾಕರ ಭಟ್ಟರ ಸಹಿತ ಒಂದುತಕ್ಕಡಿಗೆ ಹಾಕಿ ಅರುಣಕುಮಾರ್ ಒಬ್ಬರನ್ನೇ ಒಂದು ತಕ್ಕಡಿಯಲ್ಲಿ ಹಾಕಲಾಯಿತು. ಪ್ರಚಾರಕ್ಕೆ ಯೋಗೀಜಿಯನ್ನು ಕರೆಸಲಾಯಿತು. ತೂಕ ಯಾರದ್ದು ಎಷ್ಟೆಂದು ಫಲಿತಾಂಶ ನೋಡಿದ ಇಡೀ ಕರ್ನಾಟಕದ ಜನರಿಗೆ ಗೊತ್ತಾಯಿತು. ಅನ್ಯಾಯವನ್ನು ಸಾಮಾನ್ಯ ಕಾರ್ಯಕರ್ತರು ಸಹಿಸುವುದಿಲ್ಲ ತಾಳ್ಮೆಗೂ ಒಂದು ಮಿತಿ ಇರುತ್ತದೆ. ಇದು ಪುತ್ತೂರಿನಲ್ಲಿ ಅರಿವಾಯಿತು.

ಕರ್ನಾಟಕದಲ್ಲಿ ಚುನಾವಣೆಗೆ ಸೂಕ್ತ ಕಾರ್ಯಯೋಜನೆ ರೂಪಿಸುವಲ್ಲಿ ಪಕ್ಷ ಸೋತಿದೆ. ಮಾರ್ಗದರ್ಶನ ಮಾಡುವಲ್ಲಿ ಸಂಘ ಸೋತಿದೆ. ನಮಗೇನು ಬೇಕೆನ್ನುವುದನ್ನು ಅರಿಯುವಲ್ಲಿ ನಾವು ಸೊತಿದ್ದೇವೆ. ನಮ್ಮ ನಾಯಕರು ಯಾರೆಂದು ಗುರುತಿಸುವಲ್ಲಿಯೂ ನಾವು ಸೋತಿದ್ದೇವೆ. ನಾವು ಆಕ್ರಮಣಕಾರಿಯಾಗಿ ಕಾರ್ಯಪ್ರವೃತ್ತರಾಗದಿದ್ದಲ್ಲಿ ನಮಗೆ ಹಿಂದುಗಳಿಗೆ ಖಂಡಿತಾ ಭವಿಷ್ಯವಿಲ್ಲ. ಕರ್ನಾಟಕ ಸ್ಟೋರಿ ನೋಡಲು ಹೆಚ್ಚು ದೂರ ಇಲ್ಲ. ಪಶ್ಚಿಮ ಬಂಗಾಲವೂ ಪಾಕಿಸ್ಥಾನವಾಗಿದೆ. ಕೇರಳವೂ ಪಾಕಿಸ್ಥಾನವಾಗಿದೆ. ಇಂದು ನಾವು ಎಚ್ಚರವಾಗುವುದು ಅನಿವಾರ್ಯವಾಗಿದೆ.

ಕರ್ನಾಟಕದ ಬಿಜೆಪಿಯಲ್ಲಿ ಇಂದು ಹಿಂದುತ್ವದಲ್ಲಿ ವಿಶ್ವಾಸ ಇಡಬಹುದಾದ ದಕ್ಷ ನಾಯಕರ ಹೆಸರನ್ನು ಸೂಚಿಸಿ ಎಂದರೆ ಯಾರಿದ್ದಾರೆ? ನಾನು ಬಸವನಗೌಡ ಯತ್ನಾಳರನ್ನು ಅನಂತಕುಮಾರ್ ಹೆಗಡೆಯವರನ್ನು ಸೂಚಿಸುತ್ತೇನೆ. ಹೊರಗಡೆ, ಅರುಣ್ ಪುತ್ತಿಲ ರನ್ನು ಸೂಚಿಸುತ್ತೇನೆ. ಇವರೆಲ್ಲರನ್ನೂ ಹಿಂದೆ ದೂಡಲಾಗುತ್ತಿದೆ. ಪ್ರಖರ ಹಿಂದುತ್ವವಾದಿಗಳು ಭ್ರಷ್ಟಾಚಾರ ರಹಿತರು ಹತ್ತುಜನರನ್ನು ಗುರುತಿಸಿ ಎಂದರೆ ಬಿಜೆಪಿಯಲ್ಲಿ ಯಾರಿದ್ದಾರೆ?. ಹಿಂದೂ ಸಂಘಟನೆಗಳ ನೇತಾರರು ಅನೇಕರಿದ್ದಾರೆ. ಆದರೆ ಪಾರ್ಟಿಯಲ್ಲಿ? ವಿಶ್ವಾಸವಿಟ್ಟವರು ಅನೇಕರು ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಂಡಿಲ್ಲ. ಉಗ್ರ ಹಿಂದುತ್ವದ ನಾಯಕರೆಂದು ಗುರುತಿಸಿಕೊಂಡವರು ಭಾಷಣಕ್ಕಷ್ಟೇಸೀಮಿತರಾಗಿದ್ದಾರೆ.  ಕೆಲವರು ಸೋತಿದ್ದಾರೆ ಕೆಲವರು ಸೋಲಿನ ಅಂಚಿನಲ್ಲಿ ಗೆದ್ದಿದ್ದಾರೆ. ಹೀಗಾದರೆ ಸಮಾಜದ ಪರಿಸ್ಥಿತಿ ಏನು? ನಾವು ಎಲ್ಲಿ ತಲುಪಲಿದ್ದೇವೆ?

ಇದಕ್ಕೆಲ್ಲಾ ಒಂದೇ ದಾರಿ ರಾಷ್ಟ್ರಹಿತಾಧಾರಿತ ನಿರ್ಭೀತ ಸಮಾನ ಮನಸ್ಕರ ಸಂಘಟನೆ ಹಾಗೂ ಈಗಿರುವ ಸಂಘಟನೆಗಳ ಸಮನ್ವಯತೆ. ಇದರೊಂದಿಗೆ ಕ್ರಿಯಾಯೋಜನೆ ಹಾಗೂ ಯೋಜನೆಗನುಗುಣವಾದ ಕೆಲಸ. ನಡೆಯಬೇಕಿದೆ. ಈ ಪ್ರಕ್ರಿಯೆಯಲ್ಲಿ ಸಮಗ್ರ ಹಿಂದೂ ಸಮಾಜದ ಜಾಗ್ರತಿ ಹಾಗೂ ಸಮಾಜದ ಭಾಗೀದಾರಿಕೆ ಇರಬೇಕಿದೆ. ಇದೊಂದೇ ಮಾರ್ಗ. ಹಿಂದೂಧರ್ಮದ ರಕ್ಷಣೆಗೆ ಎಲ್ಲರೂ ಸುಲಭವಾಗಿಮಾಡಬಹುದಾದ ಯುದ್ದವೆಂದರೆ ಅದು ಆರ್ಥಿಕ ಯುದ್ಧ. ಎಲ್ಲರೂ ಸುಲಭವಾಗಿ ಮಾಡಬಹುದಾದ ಸಿದ್ಧತೆ ಎಂದರೆ ಅದು ಸಾಂಸ್ಕೃತಿಕ ಪುನರುತ್ಥಾನ. ಬನ್ನಿ ಕೈಜೋಡಿಸಿ ಸಂಘಟಿತರಾಗೋಣ. ಸತ್ಯವನ್ನು ಹೆದರಿಕೆ ಇಲ್ಲದೆ ಹೇಳೋಣ.

ಶ್ರೀಜಿ –

ಜೈ ಹಿಂದ್ ಜೈ ಶ್ರೀರಾಮ್.

Leave a Reply