ಸ್ವಯಂದೌರ್ಬಲ್ಯದಿಂದ ಯುದ್ಧಸೋತ ಕರ್ನಾಟಕ ಬಿಜೆಪಿ.

You are currently viewing ಸ್ವಯಂದೌರ್ಬಲ್ಯದಿಂದ ಯುದ್ಧಸೋತ ಕರ್ನಾಟಕ ಬಿಜೆಪಿ.

ಸ್ವಯಂ ದೌರ್ಬಲ್ಯದಿಂದ ಯುದ್ಧಸೋತ ಕರ್ನಾಟಕ ಬಿಜೆಪಿ.

ಇಗಾಗಲೇ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹೀನಾಯವಾಗಿ ಸೋತಿದೆ. ಚುನಾವಣಾ ಚಾಣಕ್ಯರೆಲ್ಲಾ ತಲೆಮೇಲೆ ಕೈ ಹೊತ್ತು ಕೂಳಿತಿದ್ದಾರೆ. ಮೋದಿಜಿ, ಯೋಗಿಜಿಯಂತಹ ತಾರಾಪ್ರಚಾರಕರು ಶ್ರಮಿಸಿದರೂ ಏನೂ ಮ್ಯಾಜಿಕ್ ಮಾಡಲು ಸಾಧ್ಯವಾಗಿಲ್ಲ. ಹಿಂದಿನಬಾರಿ  ಸಿದ್ಧರಾಮಯ್ಯರ ಕಾಂಗ್ರೇಸ್ ಸರಕಾರವು ತನ್ನ ಅಧಿಕಾರದ ಅವಧಿಯಲ್ಲಿ ಹಾಗೂ ಆನಂತರದಲ್ಲಿ ಹಿಂದೂ ಕಾರ್ಯಕರ್ತರು ರಾಜ್ಯದಲ್ಲಿ ಅನುಭವಿಸಿದ  ಅನಾಚಾರ ಅತ್ಯಾಚಾರಗಳ ಹೊರತಾಗಿಯೂ ಪುನಃ ಪೂರ್ಣ ಬಹುಮತ ಪಡೆದಿದೆ. ಫಲಿತಾಂಶವನ್ನು ನೋಡಿದಾಗ ಬಿಜೆಪಿಯ ಆಡಳಿತ, ನಾಯಕತ್ವ, ಹಾಗೂ ಸಂಘನಾತ್ಮಕ ಕೆಲಸ ಎಷ್ಟು ದುರ್ಬಲವಾಗಿತ್ತು, ಎಷ್ಟು ಕಳಪೆಯಾಗಿತ್ತು, ಎನ್ನುವುದು ಚಿಕ್ಕ ಮಕ್ಕಳಿಗೂ ಆರಿವಾಗುತ್ತದೆ. ಆದರೆ ಕಾಂಗ್ರೇಸ್ ತಾರಾಪ್ರಚಾರಕರಿಲ್ಲದ ಭರವಸೆಯೇ ಇಲ್ಲದ ರಾಷ್ಟ್ರೀಯ ನಾಯಕರನೆರಳಿನಲ್ಲಿ ತನ್ನೆಲ್ಲಾ ನಕಾರಾತ್ಮಕ ಅಂಶಗಳ ರಾಶಿಗಳ ಮೇಲೆ ಹೇಗೆ ವ್ಯವಸ್ಥಿತವಾಗಿ ಕೆಲಸಮಾಡಿತು, ಗೆದ್ದು ಬೀಗಿತು ಎನ್ನುವುದನ್ನೂ ನಾವು ನೋಡಬೇಕು.

ಹಿಂದಿನ ಕಾಂಗ್ರೇಸ್ ಸರಕಾರದ ಆಡಳಿತದಲ್ಲಿನ ಕೆಲವು ಹಿಂದೂ ವಿರೋಧಿ ಭಯಾನಕ ಮಾದರಿಗಳನ್ನು ನೋಡೋಣ, ಸರಕಾರದಲ್ಲಿ ಮೊದಲಿಗೆ ಸಾವಿರಕ್ಕೂ ಹೆಚ್ಚು PFI ಜಿಹಾದೀ ಉಗ್ರಗಾಮಿಗಳ ಕೇಸುಗಳನ್ನು ಹಿಂತೆಗೆದುಕೊಳ್ಳಲಾಯಿತು. ಇದರ ಫಲಶೃತಿ ಎಂಬಂತೆ 25ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಬರ್ಭರ ಕೊಲೆಗೆ ಸರಕಾರ ಸಾಕ್ಷಿಯಾಯಿತು. ಹಿಂದೂ ಆಚಾರ ವಿಚಾರ ಗಳನ್ನೂ ನಿಶೇಧಿಸುವ ಸಾಹಸಕ್ಕೆ ಮೂಢನಂಬಿಕೆ ನಿಶೇಧ ಎನ್ನುವ ಕಾಯಿದೆ ತರಲು ಕಾಂಗ್ರೇಸ್ ಸರಕಾರ ಮುಂದಾಯಿತು. ಗೋಹತ್ಯೆ ಮತಾಂತರ ಅವ್ಯಾಹತವಾಗಿ ನಡೆಯತೊಡಗಿತು. ಕಪಾಲಿ ಬೆಟ್ಟವನ್ನು ಏಸುಬೆಟ್ಟವಾಗಿಸುವ ಕೆಲಸಕ್ಕೆ ಮುಂದಾಯಿತು. ಮುಸಲ್ಮಾನರಿಗೆ ಪಕ್ಷಪಾತವಾಗಿ ಶಾದಿಬಾಗ್ಯ, ಕೊಡಲಾಯಿತು. ಶಾಲೆಮಕ್ಕಳ ಪ್ರವಾಸದಲ್ಲಿಯೂ ಜಾತಿ ನೋಡಲಾಯಿತು. ಗೋಕಳ್ಳರ ಎನ್ ಕೌಂಟರ್ ಆದಾಗ ಲಕ್ಷಗಟ್ಟಲೆ ಹಣಕೊಟ್ಟು ಪ್ರೋತ್ಸಾಹಿಸಲಾಯಿತು. ಅಪರಾಧಿಯನ್ನು ಹುತಾತ್ಮನಂತೆ ನೋಡಲಾಯಿತು. ಗೋಹಂತಕರಿಗೆ ನೈತಿಕ ಧೈರ್ಯ ತುಂಬಲಾಯಿತು.

ದೇಶದ ಪ್ರಧಾನಿಯವರನ್ನು ಏಕವಚನದಲ್ಲಿ ಕರೆಯುವ ಕಾಂಗ್ರೇಸಿಗರು ಯಾಸಿನ್ ಮಲಿಕ್ ನಂತಹ ಭಯೋತ್ವಾದಕನನ್ನು ಬಹುವಚನದಲ್ಲಿ ಸಂಬೋಧಿಸುವುದನ್ನು ನೋಡುತ್ತೇವೆ.  ಲಿಂಗಾಯತ ಧರ್ಮವನ್ನು ಒಡೆಯಲು ಪ್ರಯತ್ನಿಸಲಾಯಿತು. ಡಿಕೆ ರವಿ, ಗಣಪತಿಯಂತಹ ಅಧಿಕಾರಿಗಳ ಅನುಮಾನಾಸ್ಪದ ಸಾವನ್ನು ಆತ್ಮಹತ್ಯೆ ಎಂಬುದಾಗಿಬಿಂಬಿಸಲಾಯಿತು.   ಗಣಪತಿಯವರು ತನ್ನ ಸಾವಿಗೆ ಕಾಂಗ್ರೆಸಿನ ಉನ್ನತಸ್ಥಾನದಲ್ಲಿರುವ ಮಂತ್ರಿಗಳೇ ಕಾರಣ ಎಂದು ಹೇಳಿದ್ದರೂ ಅದನ್ನು ಸರಿಯಾಗಿ ತನಿಖೆಮಾಡಲಿಲ್ಲ. ಕಲ್ಲಡ್ಕ ಶ್ರೀರಾಮ ವಿದ್ಯಾ  ಶಾಲೆಯ ಮಕ್ಕಳಿಗೆ ಕೊಲ್ಲೂರು ದೇವಾಲಯದಿಂದ ಹೋಗುತ್ತಿದ್ದ ಊಟವನ್ನು ನಿಲ್ಲಿಸಲಾಯಿತು. ಭ್ರಷ್ಟಾಚಾರದಿಂದ ಬಚಾವಾಗಲು ಲೋಕಾಯುಕ್ತವನ್ನೇ ಮುಚ್ಚಲಾಯಿತು. ಸರ್ಜಿಕಲ್ ಸ್ಟ್ರೈಕ್ ಸುಳ್ಳು ಎಂದು ಸೇನೆಯನ್ನು ಅವಮಾನಿಸಲಾಯಿತು. ಕೊತ್ವಾಲ ರಾಮಚಂದ್ರನೆಂಬ ಮಹಾನ್ ಪಾತಕಿಯ ಶಿಷ್ಯನಿಗೆ ಪಕ್ಷದ ಉನ್ನತ ಹುದ್ದೆಯನ್ನು ಕೊಡಲಾಯಿತು. ಕರ್ನಾಟಕ ಕಾಂಗ್ರೇಸ್ ಪಕ್ಷದ  ಅಧ್ಯಕ್ಷರು ಬ್ರಷ್ಟಾಚಾರದ ಕೇಸಿನಲ್ಲಿ ಜೈಲಿಗೆ ಹೋಗಿ ಆನಾರೋಗ್ಯ ಕಾರಣ ಹೇಳಿ ಜಾಮೀನುಪಡೆದು ಜೈಲಿನಿಂದ ಹೊರಗಿದ್ದಾರೆ. ರಾಹುಲ್ ಗಾಂಧಿ ಕಾನೂನು ವಿರೋಧಿ ಕೃತ್ಯಮಾಡಿ ಸಂಸದ ಸ್ಥಾನದಿಂದ ಉಚ್ಛಾಟಿತರಾಗಿದ್ದಾರೆ. ಭಜರಂಗದಳವನ್ನು ನಿಷೇಧಿಸುತ್ತೇವೆ ಎನ್ನಲಾಯಿತು. ಸಿದ್ಧರಾಮಯ್ಯ ಮುಸ್ಲಿಮರ ಟೋಪಿ ಹಾಕುವಾಗ ಹಲ್ಲು ಕಿಸಿಯುತ್ತಾರೆ.  ಕೇಸರಿ ಪೇಟ ಹಾಕಿದರೆ ಕಿತ್ತು ಎಸೆಯುತ್ತಾರೆ. ಮುಸಲ್ಮಾನರು ಕೇಳದಿದ್ದರೂ ಟಿಪ್ಪುಜಯಂತಿ ಮಾಡಿ ಕೊಡಗಿನಲ್ಲಿ ಕುಟ್ಟಪ್ಪರನ್ನು ಹತ್ಯೆಮಾಡಲಾಯಿತು. ಇಂತಹ ಸಾವಿರಾರು ಉದಾಹರಣೆಗಳು ಕಾಂಗ್ರೇಸಿನ ಕರ್ಮಕಾಂಡಕ್ಕೆ ಸಾಕ್ಷಿಯಾಗಿವೆ.

ಆದರೆ ಇವುಗಳಲ್ಲಿ ಎಷ್ಟು ವಿಷಯವನ್ನು ಬಿಜೆಪಿ ತನ್ನ ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸಿಕೊಂಡಿತು? ಅಧಿಕಾರ ಇದ್ದಾಗ ತನಿಖೆಮಾಡಿ ನ್ಯಾಯಕೊಡಿಸಿತು? ಶೂನ್ಯ ತಾನೆ? ಇದಕ್ಕೆ ಬದಲಾಗಿ ಬಿಜೆಪಿಯದು ಭ್ರಷ್ಟ ಸರಕಾರ. 40% ಸರಕಾರ, ಲಿಂಗಾಯತರ ವಿರೋಧಿ ಸರಕಾರ. ಜನಸಾಮಾನ್ಯರ ವಿರೋಧಿಸರಕಾರ, ಬೆಲೆ ಏರಿಕೆಯ ಸರಕಾರ ಎಂಬುದಾಗಿ ಕಾಂಗ್ರೇಸಿಗರು ಮಾಡಿದ ತೀಕ್ಷ್ಣವಾದ ಪ್ರಚಾರದ ದಾಳಿಯನ್ನು ಬಿಜೆಪಿ ಸಮರ್ಥವಾಗಿ ಎದುರಿಸುವಲ್ಲಿ ಸೋತಿತು. ಪ್ರತಿದಾಳಿ ಮಾಡುವುದು ಹಾಗಿರಲಿ ತನ್ನನ್ನು ಸಮರ್ಥಿಸಿಕೊಳ್ಳುವ ಎದೆಗಾರಿಕೆಯೂ ಬಿಜೆಪಿ ನಾಯಕರಲ್ಲಿ ಇರಲಿಲ್ಲ. ಚುನಾವಣೆಯಲ್ಲಿ ಡಿಕೆಶಿ ಹಾಗೂ ಸಿದ್ಧರಾಮಯ್ಯರ ಆಕ್ರಮಣ ಬಿಜೆಪಿಗರ ಮೇಲೆ ಹೇಗಿತ್ತೆಂದರೆ ದೊಣ್ಣೆಯಲ್ಲಿ ಬಡಿಯುತ್ತಿದ್ದವರಿಗೆ ಬರಿಕೈ ಅಡ್ಡಹಿಡಿದು ಪೆಟ್ಟುತಪ್ಪಿಸಿಕೊಳ್ಳಲು ಹೆಣಗಾಡುವ ಅಮಾಯಕನಂತಿತ್ತು. ಇದಕ್ಕೆ ಕಾರಣ ಎದೆಗಾರಿಕೆ ಇಲ್ಲದ ನಾಯಕತ್ವ, ಬಾಯಿಬಡುಕ ಅಪ್ರಯೋಜಕ ಪಾರ್ಟಿ ಅಧ್ಯಕ್ಷರು. ಮತದಾರರ ನಾಡಿಮಿಡಿತ ಅರಿಯದ ದುರ್ಬಲ ತಂತ್ರಗಾರಿಕೆ. ಪ್ರತಿಪಕ್ಷಗಳಮೇಲೆ ಪರಿಣಾಮಕಾರಿಯಾಗಿ ಆಕ್ರಮಣ ಮಾಡುವ ಕೌಶಲ್ಯದ ಕೊರತೆ ಹಾಗೂ ಅವರ ದಾಳಿಗಳಿಗೆ ಪರಿಣಾಮಕಾರಿಯಾಗಿ ಆತ್ಮರಕ್ಷಣೆ ಮಾಡಿಕೊಳ್ಳದಿದ್ದುದು ಇವೆಲ್ಲಾ ಮುಖ್ಯ ಕಾರಣವಾಗಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬಿಜೆಪಿ ಪರ ಸಾಮಾಜಿಕಜಾಲತಾಣದಲ್ಲಿ ಕೆಲಸಮಾಡುವ ದೊಡ್ಡ ಹಿಂದೂ ಕಾರ್ಯಕರ್ತರ ಪಡೆಯೇ ಬಿಜೆಪಿಗೆ ಇತ್ತು. ಬಿಜೆಪಿಯ ಅವಧಿಯಲ್ಲಿಯೇ ಅನೇಕ ಹಿಂದೂ ಕಾರ್ಯಕರ್ತರ ಕೊಲೆನಡೆದರೂ ಕೇವಲ ಕಠಿಣ ಕ್ರಮದ ಡೈಲಾಗಿನೊಂದಿಗೇ ಅವಧಿಮುಗಿಸಿದ ಬಿಜೆಪಿಗರಮೇಲೆ ಭ್ರಮನಿರಸನಗೊಂಡ ಇಂತಹ ಕಾರ್ಯಕರ್ತರು ಇಂದು ನಿಷ್ಕ್ರಿಯರಾಗಿದ್ದಾರೆ. ಇಂತಹವರನ್ನು ಗುರುತಿಸುವ ಗೌರವಿಸುವ ಬಳಸಿಕೊಳ್ಳುವ ಬುದ್ಧಿಯಾವ ಬಿಜೆಪಿನಾಯಕರಿಗೂ ಇಲ್ಲವಾಗಿದೆ. ದೂರದೃಷ್ಟಿಇಲ್ಲದವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದರ ಫಲವೇ ಇದಾಗಿದೆ. ಕಾಂಗ್ರೇಸಿಗರ ಆಕ್ರಮಣದಲ್ಲಿ ಬಿಜೆಪಿಯ ಪರಿಸ್ಥಿತಿ ಹೇಗಿತ್ತೆಂದರೆ ದುರ್ಯೊಧನನ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪ ಹರಣದ ಸಂದರ್ಭವನ್ನು ನೆನಪಿಸುವಂತಿತ್ತು. ಕರ್ನಾಟಕದ ಬಿಜೆಪಿ ಎಂಬ ದ್ರೌಪದಿಯನ್ನು ಕಾಂಗ್ರೇಸಿನ ದಿಗ್ಗಜ ನಾಯಕರು ಸಾರ್ವಜನಿಕವಾಗಿ ಬೆತ್ತಲೆ ಮಾಡುತ್ತಿದ್ದರೆ! ಭ್ರಷ್ಟಾಚಾರ, ಅಪ್ರಾಮಾಣಿಕತೆ, ಅಧಿಕಾರಕ್ಕಾಗಿನ ಆಪರೇಶನ್ ಕಮಲ, ನಾಯಕರುಗಳ ಸ್ವಜನ ಪಕ್ಷಪಾತ, ಜಾತಿರಾಜಕಾರಣ, ಆಡಳಿತ ನಿಷ್ಕ್ರಿಯತೆ ಗುಂಪುಗಾರಿಕೆ, ಕರ್ಯಕರ್ತರ ಭಾವನೆಗಳಿಗೆ ಧ್ವನಿಯಾಗದಿರುವುದು, ಮುಂತಾಗಿ 5 ವರ್ಷಗಳು ಪಾಪಕಾರ್ಯಗಳಲ್ಲಿ ಮುಳುಗಿದ್ದ ಬಿಜೆಪಿ ನಾಯಕರು. ಹಸ್ತಿನಾಪುರದ ರಾಜ ಸಭೆಯಲ್ಲಿ ಸಾಮರ್ಥ್ಯ ವಿದ್ದರೂ ಸ್ವಯಂಕೃತ ಅಪರಾಧದಿಂದ ತಲೆ ತಗ್ಗಿಸಿ ನಿಂತಿದ್ದ ಪಾಂಡವರಂತೆ. ತಾವು ಸ್ವತಃ ಚುನಾವಣೆಯಲ್ಲಿ ಅಸಹಾಯಕರಾಗಿದ್ದರು. ಅಲ್ಲಿ ಶ್ರೀ ಕೃಷ್ಣ ದ್ರೌಪದಿಯನ್ನು ಕಾಪಾಡಿದ.  ಇಲ್ಲಿ ಬಿಜೆಪಿಯ ದುರ್ಬಲ ನಾಯಕತ್ವಸಮೂಹವು ಯಾವುದೋ ಮೋದಿ ಎನ್ನುವ ಮಹಾನ್ ಶಕ್ತಿ ತಮ್ಮನ್ನು ಕಾಪಾಡುತ್ತದೆಂಬ ಭರವೆಸೆಯಲ್ಲಿ ದೈನೇಸೀ ಸ್ಥಿತಿಯಲ್ಲಿ ಕೇಂದ್ರದತ್ತ ನೋಡುತ್ತಾ ನಿಂತಿದ್ದರು. ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಶಸ್ತ್ರ ತ್ಯಜಿಸಿದ ಅರ್ಜುನನಂತಾಗಿದ್ದರು. ಇವರರಕ್ಷಣೆಗೆ ಇಲ್ಲಿ ಕೃಷ್ಣನೂ ಬರಲಿಲ್ಲ, ಭಜರಂಗಬಲಿಯೂ ಬರಲಿಲ್ಲ, ಮೋದಿ ಮಂತ್ರವೂ ಕೈಹಿಡಿಯಲಿಲ್ಲ, ಯೋಗಿಮಂತ್ರವೂ ಕೈಹಿಡಿಯಲಿಲ್ಲ.

ದೇವರೂ ಸಮರ್ಥರನ್ನು ಮಾತ್ರ ಕೈ ಹಿಡಿಯುತ್ತಾರೆ ಅಪ್ರಯೋಜಕರನ್ನಲ್ಲ.  ನಮ್ಮ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡಿ ದೇವರ ಮೊರೆಹೋಗಬೇಕು ಆಗ ದೇವರ ಆಶೀರ್ವಾದ ನಮ್ಮಮೇಲೆ ಇರುತ್ತದೆ.  ಕೃಷ್ಣ ಪಾಂಡವರ ಪಕ್ಷವಹಿಸಿದ್ದು ಅವರ ಪ್ರಾಮಾಣಿಕತೆಗೆ, ಸ್ವಯಂ ಕರ್ತವ್ಯ ವಿಮುಖರಾದ ಧೂರ್ತರು ದೇವರಿಗೆ ಉರುಳುಸೇವೆ ಮಾಡಿದರೆ ದೇವರೇನೂ ಅನುಗ್ರಹಿಸುವುದಿಲ್ಲ. ಕೇವಲ ಹಿಂದುತ್ವದ ಬೊಗಳೆ ಭಾಷಣಕ್ಕೆ ಹಿಂದುಗಳು ಯಾವಾಗಲೂ ಮರುಳಾಗುವುದಿಲ್ಲ. ಅನೇಕ ಘಟನೆಗಳಲ್ಲಿ ಕಠಿಣ ಕ್ರಮದ ಡೈಲಾಗ್ ಹೊಡೆಯುವ  ದುರ್ಬಲ ಮುಖ್ಯಮಂತ್ರಿ, ಗೃಹಮಂತ್ರಿ, ಕಾಮಿಡಿ ರಾಜ್ಯಾಧ್ಯಕ್ಷರನ್ನು ನೋಡಿ ಹಿಂದುಗಳು ಹತಾಶರಾಗಿದ್ದರು.  ಇದನ್ನು ಬಿಜೆಪಿ ನಾಯಕರು ಅರಿತುಕೊಳ್ಳುವಲ್ಲಿ ಎಡವಿದರು. ಇಂದಿಗೂ ಸೋಲಿನ ಹೊಣೆಹೊತ್ತು ಪಾರ್ಟಿ ಅಧ್ಯಕ್ಷರು ರಾಜಿನಾಮೆ ಕೊಟ್ಟಿಲ್ಲ. ಪಾರ್ಟಿಯೂ ಪಡೆದಿಲ್ಲ. ಕಾರ್ಯಕರ್ತರ ಅಸಮಧಾನ ತಣಿಸುವ ಯಾವ ಕೆಲಸವೂ ನಡೆದಿಲ್ಲ. ಕಾಂಗ್ರೇಸಿಗರು ಓಟುಪಡೆಯಲು ಕಷ್ಟ ಪಡುತ್ತಾರೆ. ಅವರಿಗೆ ಪುಕ್ಕಟೆ ಓಟುಹಾಕುವವರು ಅಲ್ಪಸಂಖ್ಯಾತರು ಮಾತ್ರ. ಉಳಿದೆಲ್ಲರನ್ನೂ ಹಣಕೊಟ್ಟೇ ಕೆಲಸಮಾಡಿಸಬೇಕು. ಇದು ಕಾಂಗ್ರೇಸಿನ ಸ್ಥಿತಿ ಆದರೆ ಬಿಜೆಪಿಗೆ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸಮಾಡುವ ಸಂಘದ ಸಾವಿರಾರು ಸ್ವಯಂಸೇವಕರು  ಇದ್ದಾರೆ. ಇಂದು ಪ್ರಾಮಾಣಿಕ ಸ್ವಯಂಸೇವಕರೆಲ್ಲರೂ ಈ ಭ್ರಷ್ಟರಪರ ನಾನೇಕೆ ಪ್ರಚಾರಮಾಡಲಿ ಯಾವ ಮುಖದಲ್ಲಿ ಜನರೆದುರಿಗೆ ಹೋಗಲಿ ಬಿಜೆಪಿ ನಾಯಕರಿಗೆ ಮತಕೊಡಿ ಎನ್ನಲು ಹೇಸಿಗೆ ಯಾಗುತ್ತಿದೆ ಎನ್ನುತ್ತಿದ್ದಾರೆ. ಹೀಗೆ ಹೇಳುತ್ತಾ ಇಂದು ಮನೆಯಲ್ಲಿ ಕುಳಿತಿದ್ದಾರೆ. ಆರಿಸಿ ಹೋದವರು ಕಾರ್ಯಕರ್ತರನ್ನು ಮಾತನಾಡಿಸುವುದು ಮುಂದಿನ ಚುನಾವಣೆ ಬಂದಾಗಲೇ ಅಲ್ಲಿವರೆಗೆ ತಾವು ಕಿಸೆತುಂಬಿಸುವುದು ಹೇಗೆ ಮೇಯುವುದು ಹೇಗೆಂದು ಚಿಂತಿಸುತ್ತಾ ತಮ್ಮನ್ನು ಪ್ರೊಜೆಚ್ಟ್ ಮಾಡಲು ಹಿಂಬಾಲಕರ ಪಡೆಕಟ್ಟಿಕೊಳ್ಳುತ್ತಾ ದಿನ ಕಳೆಯುತ್ತಾರೆ.   ಸಂಘದ ಹಿರಿಯರಿಗೂ ಸ್ವಯಂ ಸೇವಕರು ಈ ಬಾರಿ ಬಿಸಿಮುಟ್ಟಿಸಿದ್ದಾರೆ. ನಿಮ್ಮ ನಿಷ್ಕ್ರಿಯತೆಯಿಂದಲೇ ಬಿ ಜೆ ಪಿ ಹಾಳಾಗಿದೆ ಎಂಬುದಾಗಿ ಸರಿಯಾಗಿ ಝಾಡಿಸಿದ್ದಾರೆ. ಇದರಿಂದಾಗಿಯೇ ಉಡುಪಿ ಜಿಲ್ಲೆಯಲ್ಲಿ ಹಿಂದಿನ ವಿಜೇತ ನಾಲ್ವರು ಶಾಸಕರನ್ನು ಬದಲಾಯಿಸುವ ಅನಿವಾರ್ಯತೆ ಬಿಜೆಪಿಗೆ ಎದುರಾಯಿತು. ಪುತ್ತೂರಿನಲ್ಲಿ ನಡೆದ ಅನ್ಯಾಯವನ್ನು ಸಂಘದ ಹಿರಿಯರು ತಪ್ಪು ಎನ್ನದ ಕಾರಣ ಅರುಣ್ ಕುಮಾರ್ ಪುತ್ತಿಲರಿಗೆ ಬಿಜೆಪಿಯ ಟಿಕೆಟ್ ಕೈತಪ್ಪಿತು. ಇಲ್ಲಿ ಬಿಜೆಪಿ ಪರ ವಕಾಲತ್ತು ವಹಿಸಿದ ಸಂಘದ ಕೆಲವು ಪ್ರಭಾವೀ ಹಿರಿಯರು ಭ್ರಷ್ಟಾಚಾರದಲ್ಲಿ ಪಾಲುಪಡೆದಿರಬಹುದೆಂಬ ಶಂಕೆ ಹಿಂದೂ ಕಾರ್ಯಕರ್ತರಲ್ಲಿ ಬಲವಾಗಿದ್ದರಿಂದಾಗಿ ಅವರು ಸಿಡಿದೆದ್ದು ದಪ್ಪಚರ್ಮದ ಕಪಟ ಹಿಂದುಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಮತದಾನದಲ್ಲಿ ಹೊಡೆದರು. ಚಿಲ್ಲರೆ ರಾಜಕೀಯ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷರು ಪ್ರಾಯಶ್ಚಿತ್ತವಾಗಿ ಮುಂದಿನ ಚುನಾವಣೆಯಲ್ಲಿ ಮಂಗಳೂರಿನ ಸಂಸದ ಸ್ಥಾನವನ್ನು ಅರಣ್ ಕುಮಾರ್ ಪುತ್ತಿಲರಿಗೆ ಬಿಟ್ಟುಕೊಡುವುದು ಅನಿವಾರ್ಯವಾಗಿದೆ. ಈ ಬಾರಿ ಮಂಗಳೂರಿನಲ್ಲಿ ಸಂಸದಅಭ್ಯರ್ಥಿ ಬದಲಾಗಬೇಕೆನ್ನುವುದು ಈಡೀ ಕರಾವಳಿಯ ಹಿಂದುಗಳ ಒಕ್ಕೊರಳ ಘೋಷಣೆಯಾಗಿದೆ. ಕರಾವಳಿಯಲ್ಲಿ ಕೆಚ್ಚೆದೆಯ ಹಿಂದು ಹುಲಿಗಳು ಜಯಗಳಿಸಬೇಕು ಕುತಂತ್ರಮಾಡುವ ಗುಳ್ಳೆ ನರಿಗಳು ಬೇಕಾಗಿಲ್ಲ.  ಪುನಃ ಮೋದಿಹೆಸರಲ್ಲಿ ಓಟುಹಾಕುತ್ತಾರೆಂದು.  ಹಿರಿಯರೆನಿಸಿಕೊಂಡವರು ತಮಗೆ ನಿಷ್ಠರಾಗಿರಬೇಕು ಎನ್ನುತ್ತಾ. ಕರೆದಾಗ ಬಂದು ತಲೆಬಗ್ಗಿಸಿನಿಲ್ಲುವ ಕುರಿಗಳನ್ನು ತಂದು ಅಲ್ಲಿ ನಿಲ್ಲಿಸಿದರೆ. ಇಂದಿನ ಪುತ್ತೂರಿನ ಫಲಿತಾಂಶ ಮುಂದೆ ಮಂಗಳೂರಿನಲ್ಲಿಯೂ ಪ್ರತಿಫಲಿಸುವುದರಲ್ಲಿ ಅಚ್ಚರಿ ಇಲ್ಲ. ಇದರಬಗ್ಗೆ ಹೈಕಮಾಂಡ್ ಗಂಭೀರವಾಗಿ ಚಿಂತಿಸಬೇಕು.

ನಾಯಕತ್ವ ಎಂದರೇನು ಎಂಬುದನ್ನು ಮೋದಿಜಿ ನೋಡಿ ಕಲಿಯಬೇಕು. ಜನರ ವಿಶ್ವಾಸ ಹೇಗೆ ಗಳಿಸಬೇಕೆನ್ನುವುದನ್ನು ಯೋಗಿಜಿ ನೋಡಿ ಕಲಿಯಬೇಕು. ರಾಜಕೀಯದಲ್ಲಿ ಪಟ್ಟನ್ನು ಹೇಗೆ ಹಿಡಿಯಬೇಕು? ತನ್ನ ದಾರಿಗೆ ಅಡ್ಡ ಬಂದವರನ್ನು ಹೇಗೆ ಮಲಗಿಸಬೇಕು ಎನ್ನುವುದನ್ನು ಯಡಿಯೂರಪ್ಪ ರನ್ನು ನೋಡಿಕಲಿಯಬೇಕು. ಅದನ್ನು ಬಿಟ್ಟು ತಮಗೆ ವಿಧೇಯರಾಗಿರಬೇಕು ಅವನು ಎಂಥಾ ಅಪ್ರಯೋಜಕನಾಗಿದ್ದರೂ ಸರಿ ಎಂದು ಹಸುವಿನಂತಹ , ನಾಯಕರನ್ನು ಎದುರಿಟ್ಟರೆ ಹುಲಿ ಸಿಂಹ ಗಳು ಮುರಿದು ತಿನ್ನುತ್ತವೆ. ಇತಿಹಾಸವನ್ನು ನೋಡಿ ಕಲಿಯಬೇಕು. ದುರ್ಬಲರೆಲ್ಲಾ ನಾಶ ಹೊಂದುತ್ತಲೇ ಹೋಗಿದ್ದಾರೆ. ಎದುರಾಳಿಯನ್ನು ಎದುರಿಸಲು ಕೆಚ್ಚೆದೆಯ ಶುದ್ಧಹಸ್ತದ ಪ್ರಬಲ ನಾಯಕತ್ವಬೇಕು. ಆತ ಧರ್ಮನಿಷ್ಟನೂ ರಾಷ್ಟ್ರಹಿತ ಚಿಂತಕನೂ ಆಗಿರಬೇಕು. ಆತ ತನ್ನ ಹಿಂದಿರುವವರಿಗೆ ಧೈರ್ಯ ತುಂಬುವಂತಿರಬೇಕು. ಇವನನ್ನು ನಂಬಿದರೆ ನಾವು ಗುರಿಮುಟ್ಟುತ್ತೇವೆ ನಮ್ಮ ಉದ್ದೇಶ ಈಡೇರುತ್ತದೆ ಎನ್ನುವ ಭರವಸೆ ಹಿಂಬಾಲಕರಿಗೆ ಬರಬೇಕು. ನಾಯಕರೇ ಸ್ವಂತ ಬುದ್ದಿಇಲ್ಲದೆ ಬೇರೆಯವರ ಕೀಲಿಗೊಂಬೆಗಳಾದರೆ ಯಾರು ಅವರಲ್ಲಿ ವಿಶ್ವಾಸ ಇಡುತ್ತಾರೆ? ಲೋಕದ ಜನ ಕಿವಿಯಲ್ಲಿ ಕೇಳುವ ಭರವಸೆಗಳ ಮೇಲೆ ವಿಶ್ವಾಸ ಇಡುವುದಕ್ಕಿಂತಲೂ ತಾವು ಕಣ್ಣಾರೆ ಕಂಡ ವಿಷಯದಲ್ಲಿ ವಿಶ್ವಾಸ ಇಡುತ್ತಾರೆ. ಚಿಕ್ಕಮಕ್ಕಳು ಮನೆಯವರ ಬುದ್ಧಿಮಾತನ್ನು ಕೇಳಿ ಸಂಸ್ಕಾರ ಕಲಿಯುವುದಲ್ಲ ಹಿರಿಯರ ನಡವಳಿಕೆಯನ್ನು ನೋಡಿ ಕಲಿಯುತ್ತಾರೆ. ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಡೈಲಾಗ್ ಕೇಳಿ, ಕೇಳಿ ಬೇಸತ್ತು ಕಠಿಣ ಕ್ರಮಕೈಗೊಳ್ಳುವುದು ಹೇಗೆ ಎನ್ನುವುದನ್ನು ಇಂದು ಬಿಜೆಪಿ ಕಾರ್ಯಕರ್ತರು ನಾಯಕರು ಎನಿಸಿಕೊಂಡವರಿಗೆ ತೋರಿಸಿದ್ದಾರೆ. ಪುತ್ತೂರಿನ ಕಾರ್ಯಕರ್ತರು ಮೋಸಮಾಡಿದವರಿಗೆ, ಜಾತಿಹಿಡಿದು ನೇತಾಡುವವರಿಗೆ ಹೇಗೆ ಉತ್ತರಿಸಬೇಕೆನ್ನುವುದನ್ನು ಯಾರಿಗೆ ತೋರಿಸಬೇಕಾಗಿತ್ತೋ ಅವರಿಗೆ ತೋರಿಸಿದ್ದಾರೆ. ನಾಯಕ ಕೆಚ್ಚೆದೆಯ ಹೋರಾಟಗಾರನಾಗಿದ್ದಲ್ಲಿ ಆತ ಧೈರ್ಯವಂತನಾಗಿದ್ದಲ್ಲಿ ಪಕ್ಷನಿಷ್ಟನಾಗಿದ್ದಲ್ಲಿ ಆತ ಭ್ರಷ್ಟನಾಗಿದ್ದರೂ ಜನರು ಒಪ್ಪಿಕೊಳ್ಳುತ್ತಾರೆ. ಎನ್ನುವುದಕ್ಕೆ ಕರ್ನಾಟಕ ಕಾಂಗ್ರೇಸೇ ಸಾಕ್ಷಿ. ಕರ್ನಾಟಕದ ಕಾಂಗ್ರೇಸಿನ ನಾಯಕರು ತಮ್ಮ ಪಕ್ಷದವರಾಗಿದ್ದರೆ ಭ್ರಷ್ಟಾಚಾರಿಗಳನ್ನೂ ಸಮರ್ಥಿಸಿಕೊಳ್ಳುತ್ತಾರೆ, ಉಗ್ರಗಾಮಿಗಳನ್ನೂ ಸಮರ್ಥಿಸಿಕೊಳ್ಳುತ್ತಾರೆ, ಕೊಲೆಗಾರರನ್ನೂ ಸಮರ್ಥಿಸಿಕೊಳ್ಳುತ್ತಾರೆ ಇಂತಹ ಕೆಚ್ಚೆದೆಯ ಧೈರ್ಯ ತೋರಿಸುತ್ತಾರೆ. ನಾಳಿನದನ್ನು ಯೋಚಿಸದೇ ಮುನ್ನುಗ್ಗುತ್ತಾ ಹೋಗುತ್ತಾರೆ. ಇಂತಹವರಮೇಲೆ ಕಾರ್ಯಕರ್ತರು ಭರವಸೆ ಇಡುತ್ತಾರೆ. ಬಿಜೆಪಿ ನಾಯಕರುಗಳು ಮಾಡಿದ ಒಳ್ಳೆಕೆಲಸವನ್ನು ಸಮರ್ಥಿಸಿಕೊಳ್ಳಲೂ ಹೆದರುತ್ತಾರೆ. ಪಠ್ಯಪುಸ್ತಕ ಸಮಿತಿಯ ವಿಸರ್ಜನೆ ಇದಕ್ಕೆ ಉತ್ತಮ ಉದಾಹರಣೆ.  ತಮ್ಮಕಾರ್ಯಕರ್ತರಿಗೆ ಸಹಾಯಮಾಡುವುದು ಹಾಗಿರಲಿ ನೈತಿಕ ಧೈರ್ಯತುಂಬುವ ಕೆಲಸವ್ನನೂ ಮಾಡುವುದಿಲ್ಲ. ಸುಳ್ಳುಕೇಸಿನಲ್ಲಿ ಒಳಗಿರುವವರನ್ನೂ ಬಿಡಿಸುವುದಿಲ್ಲ. ಎದುರಾಳಿಗಳ ತಪ್ಪುಗಳನ್ನು ಹಿಡಿದು ಬೀದಿಗೆ ಬಂದು ಹೋರಾಡುವುದಿಲ್ಲ. ಇದಕ್ಕೆಲ್ಲಾ  ಹಿಂದೂ ಸಂಘಟನೆ ಬಿಟ್ಟಿಕಾರ್ಯಕರ್ತರು ಮಾಡುತ್ತಾರೆಂದು ತಾವು ತಮ್ಮ ವ್ಯವಹಾರ ಬೆಳೆಸುವುದರಲ್ಲಿ ಗಮನಕೊಡುತ್ತಾರೆ. ಕಾರ್ಯಕರ್ತರ ಕೊಲೆ ಆದರೆ ಮೊಸಳೆ ಕಣ್ಣೀರಿನ ನಾಟಕಮಾಡಿ ಹೋಗುತ್ತಾರೆ. ಕಾಂಗ್ರೇಸ್ ಸರಕಾರಕ್ಕೆ ಬಂದಕೂಡಲೇ ಕೊಲೆಯಾದ ನಾಲ್ಕುಜನ ಮುಸಲ್ಮಾನರಿಗೆ 25 ಲಕ್ಷಗಳ ಹಣವನ್ನು ಯಾವುದೇ ಬೇಡಿಕೆ ಇಲ್ಲದೆ ತಮ್ಮ ಮತದಾರರು ಎಂಬುದಾಗಿ ನೀಡಿತು. ಹಿಂದೆ ಕಾಂಗ್ರೇಸ್ ಸರಕಾರದಲ್ಲಿ  ಕೊಲೆಯಾದ 25 ಹಿಂದುಕಾರ್ಯಕರ್ತರಿಗೆ ಬಿಜೆಪಿ ಏನು ನೀಡಿತು ಎಷ್ಟು ನೀಡಿತು? ಕನಿಷ್ಟ ಪ್ರಾಮಾಣಿಕ ತನಿಖೆ ಯನ್ನೂ ಮಾಡುವುದಿಲ್ಲ. ಶಿವಮೊಗ್ಗ ಕೊಲೆ ಆರೋಪಿಗಳು ಜೈಲಿನಲ್ಲಿ ವೀಡಿಯೋಮಾಡುತ್ತಾರೆಂದರೆ ಇವರ ಕಠಿಣಕ್ರಮದ ಹಣೆಬರಹ ತಿಳಿಯುತ್ತದೆ. ಇವರು  ಕೊಲೆಗಾರರನ್ನು ಹೇಗೆ ಇಟ್ಟಿದ್ದಾರೆಂಬುದು ನೋಡಿದಾಗ ಕಠಿಣಕ್ರಮ ನಮ್ಮ ಅರಿವಿಗೆ ಬರುತ್ತದೆ. ತಮ್ಮ ದೌರ್ಬಲ್ಯ ಬೆಳಕಿಗೆ ಬಂದಾಗ ತೇಪೆ ಹಾಕುತ್ತಾರೆ. ಇಂತಹವರಮೇಲೆಯೇ ಹೈಕಮಾಂಡಿಗೆ ವಿಶ್ವಾಸ. ಅನಂತಕುಮಾರ್ ಹೆಗೆಡೆ, ಬಸವನ ಗೌಡ ಯತ್ನಾಳ್ ಮುಂತಾದ ಎದೆಗಾರಿಕೆ ಇರುವ ಸಿಧ್ಧಾಂತವಾದಿಗಳು ಕೊನೆ ಬೆಂಚಿನಲ್ಲಿ ಕುಳಿತು ಇವರ ಆಟನೋಡಬೇಕು. ಹಿಂದೂ ಕಾರ್ಯಕರ್ತರ ಹೃದಯದಲ್ಲಿ ಸ್ಥಾನಪಡೆದವರು ಬಿಜೆಪಿ ನಾಯಕರಿಗೆ ಬೇಡ. ತಾಜಾ ಉದಾಹರಣೆ ಪುತ್ತೂರಿನ ಪುತ್ತಿಲ. ಈ ಬಾರಿ ಬಸವನ ಗೌಡಯತ್ನಾಳರಿಗೆ ಪಾರ್ಟಿ ಅಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕನ ಸ್ಥಾನ ಕೊಡಬೇಕು. ಕಾರ್ಯಕರ್ತರಿಗೆ ಈಗಾಗಲೇ ಪ್ರಚಾರದಲ್ಲಿರುವ ಕೆಲವು ಬೆದರುಬೊಂಬೆಗಳಮೇಲೆ ವಿಶ್ವಾಸ ಇಲ್ಲವಾಗಿದೆ.  ಇಲ್ಲವಾದಲ್ಲಿ. ಕರ್ನಾಟಕ ಬಿಜೆಪಿ ಎಂದಿಗೂ ಸುಧಾರಿಸುವ ಪಕ್ಷ ಅಲ್ಲ ಎಂಬುದಾಗಿ ಹಿಂದು ಕಾರ್ಯಕರ್ತರು ಪಕ್ಷದ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಳ್ಳುವುದು ಸುಳ್ಳಲ್ಲ. ಬರವಣಿಗೆ ಕಹಿಯಾಗಿರಬಹುದು ಆದರೆ ಚರ್ಮದಪ್ಪವಿದ್ದರೆ ಕತ್ತಿ ಹರಿತವೇ ಇರಬೇಕು. ಬಿಜೆಪಿ ನಾಯಕರೆನಿಸಿಕೊಂಡವರಿಗೆ ಭ್ರಷ್ಟಾಚಾರ ರಹಿತ ಹಿಂದು ಹುಲಿಗಳು ಕಣ್ಣಿಗೆ ಕಾಣಿಸಲಿ ಅಂತಹವರನ್ನು ಪಕ್ಷ ಗುರುತಿಸಿಲಿ ಬೆಳೆಸಲಿ. ಈಗ ಗೆದ್ದು ಹೋದವರು ಹಿಂದಿನವರು ಕಳೆದ ಮಾನವನ್ನು ಪುನಃ ಸ್ಥಾಪಿಸುವಂತೆ ಕೆಲಸಮಾಡಲಿ. ಬಿಜೆಪಿಯ ಯಾವುದೇ ಶಾಸಕ ಯಾವುದೇ ಜಿಹಾದಿಗಳೊಂದಿಗೆ ವ್ಯಹಾರದ ಪಾಲುದಾರಿಕೆಗೆ ಇಳಿದಿದ್ದು ಗೊತ್ತಾದಲ್ಲಿ ಅದನ್ನು ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಬರೆಯುವಂತಾಗಲಿ. ಪ್ರತೀ ಕ್ಷೇತ್ರದ ಕಾರ್ಯಕರ್ತರೂ ನಾಲ್ಕುತಿಂಗಳಿಗೊಮ್ಮೆ ತಾವು ಕಳುಹಿಸಿದ ಶಾಸಕರ ಕಾರ್ಯವೈಖರಿಯ ಮೌಲ್ಯಮಾಪನ ಮಾಡುತ್ತಿರಲಿ. ಶಾಸಕರು ಸಂಸದರು ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಿ. ತಾವು ಏನು ಮಾಡಿದ್ದೇವೆ? ಸಮಾಜ ನಮ್ಮಿಂದ ಏನನ್ನು ಬಯಸುತ್ತದೆಂಬುದನ್ನು ಚರ್ಚಿಸಲಿ. ಕಾಂಗ್ರೇಸಿಗರದ್ದು ಹೈಕಮಾಂಡ್ ಸಂಸ್ಕೃತಿ ಆದರೆ ಬಿಜೆಪಿ ಕಾರ್ಯಕರ್ತರ ಪಕ್ಷ ಎನ್ನುವುದನ್ನು ಬಿಜೆಪಿ ಹೈ ಕಮಾಂಡ್ ಅರಿಯಲಿ. ತಳಮಟ್ಟದ ಕಾರ್ಯಕರ್ತರ ಭಾವನೆಗಳನ್ನೂ ಗೌರವಿಸಲಿ. ಅವರ ಕೂಗನ್ನೂ ಆಲಿಸುವಂತಾಗಲಿ. ಪ್ರತಿ ಚುನಾವಣೆಗೂ ಪುತ್ತೂರಿನಲ್ಲಿ ಮಾಡಿದ ತಪ್ಪು ಉದಾಹರಣೆ ಯಾಗಿ ನೆನಪಾಗಲಿ. ದೇಶ ಉಳಿಯಲಿ ಹಿಂದುತ್ವ ಬೆಳೆಯಲಿ. ಅಪ್ರಯೋಜಕರು ಬದಿಗೆ ಸರಿಯಲಿ. ಬಿಜೆಪಿ ಸ್ವಚ್ಛವಾಗಲಿ.

  • ಶ್ರೀಜಿ

ಜೈ ಹಿಂದ್ ಜೈ ಶ್ರೀರಾಮ್

Leave a Reply